Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳು
ಜಾರಿ ದಿನಾಂಕ: ಏಪ್ರಿಲ್ 14, 2025
ಮಧ್ಯಸ್ಥಿಕೆಯ ಸೂಚನೆ: ನೀವು ಯುನೈಟೆಡ್ ಸ್ಟೇಟ್ಸ್ನಲ್ಲಿ ವಾಸಿಸುತ್ತಿದ್ದರೆ ಅಥವಾ ನಿಮ್ಮ ವ್ಯವಹಾರದ ಪ್ರಧಾನ ಸ್ಥಳವು ಯುನೈಟೆಡ್ ಸ್ಟೇಟ್ಸ್ನಲ್ಲಿ ಇದ್ದರೆ, SNAP INC. ಸೇವೆಯ ನಿಯಮಗಳ ಮಧ್ಯಸ್ಥಿಕೆಯ ಕಲಂನಲ್ಲಿ ಹೇಳಲಾಗಿರುವ ಕೆಲವು ವಿಧಗಳ ವಿವಾದಗಳನ್ನು ಹೊರತುಪಡಿಸಿ, ನಮ್ಮ ನಡುವಿನ ವಿವಾದಗಳನ್ನು ಕಡ್ಡಾಯ ಬಾಧ್ಯತೆಯ ಮಧ್ಯಸ್ಥಿಕೆಯಿಂದ ಪರಿಹರಿಸಲಾಗುತ್ತದೆ ಮತ್ತು ಸಮೂಹ-ಕ್ರಮ ದಾವೆ ಅಥವಾ ಸಮೂಹ-ವ್ಯಾಪ್ತಿಯ ಮಧ್ಯಸ್ಥಿಕೆಯಲ್ಲಿ ಭಾಗವಹಿಸುವ ಯಾವುದೇ ಹಕ್ಕನ್ನು ನೀವು ಮತ್ತು SNAP ಬಿಟ್ಟುಕೊಡುತ್ತೀರಿ ಎಂಬುದನ್ನು ನೀವು ಮತ್ತು SNAP ಒಪ್ಪುತ್ತೀರಿ. ಆ ಮಧ್ಯಸ್ಥಿಕೆಯ ವಿಧಿಯಲ್ಲಿ ವಿವರಿಸಿದಂತೆ ನೀವು ಮಧ್ಯಸ್ಥಿಕೆಯಿಂದ ಹೊರಗುಳಿಯುವ ಹಕ್ಕನ್ನು ಹೊಂದಿದ್ದೀರಿ.
ಯುನೈಟೆಡ್ ಸ್ಟೇಟ್ಸ್ ಹೊರಗಿರುವ ಒಂದು ವ್ಯವಹಾರದ ಪರವಾಗಿ ನೀವು ಸೇವೆಗಳನ್ನು ಬಳಸುತ್ತಿದ್ದರೆ, ಆಗ ನಿಮ್ಮ ವ್ಯವಹಾರವು SNAP GROUP LIMITED ಸೇವೆಯ ನಿಯಮಗಳಲ್ಲಿ ಇರುವ ಮಧ್ಯಸ್ಥಿಕೆಯ ಕಲಂಗೆ ಬಾಧ್ಯತೆ ಹೊಂದಿರುತ್ತದೆ.
ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳು ನಿಮ್ಮ ಮತ್ತು Snap ನಡುವೆ ಕಾನೂನು ಬಾಧ್ಯತೆಯ ಕರಾರನ್ನು ರೂಪಿಸುತ್ತದೆ ಮತ್ತು ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳ ಅನುಸಾರವಾಗಿ Snap ನ ವ್ಯವಹಾರ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರಚಾರ ಮಾಡುವುದಕ್ಕಾಗಿ ಪೂರ್ವಾನುಮೋದಿತ ಭಾಗಿಗಳಿಗೆ ಸಂಭಾವನೆ ನೀಡುವ Snap ಅಂಗಸಂಸ್ಥೆ ಪ್ರೊಗ್ರಾಂನಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ನಿಯಂತ್ರಿಸುತ್ತದೆ. ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳು ಉಲ್ಲೇಖದ ಮೂಲಕ Snap ಸೇವೆಯ ನಿಯಮಗಳನ್ನು ಒಳಗೊಳ್ಳುತ್ತವೆ. ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳಲ್ಲಿ ಬಳಸಲಾಗಿರುವ ಎಲ್ಲ ಕ್ಯಾಪಿಟಲೈಜ್ ಮಾಡಲಾಗಿರುವ ಆದರೆ ವ್ಯಾಖ್ಯಾನಿಸದೆ ಇರುವ ಪದಗಳು Snap ಸೇವೆಯ ನಿಯಮಗಳಲ್ಲಿ ಹೇಳಲಾಗಿರುವ ಸಂಬಂಧಿತ ಅರ್ಥಗಳನ್ನು ಹೊಂದಿರುತ್ತವೆ. Snap ಅಂಗಸಂಸ್ಥೆ ಪ್ರೊಗ್ರಾಂ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಸಮರ್ಪಿತ FAQ ಪುಟವನ್ನು ನೋಡಿ.
ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳ ಉದ್ದೇಶಕ್ಕಾಗಿ, “Snap” ಅಂದರೆ:
ಯುನೈಟೆಡ್ ಸ್ಟೇಟ್ಸ್ನಲ್ಲಿ ನೀವು ವಾಸಿಸುತ್ತಿದ್ದರೆ ಅಥವಾ ನಿಮ್ಮ ವ್ಯವಹಾರದ ಪ್ರಧಾನ ಸ್ಥಳ ಇದ್ದರೆ, Snap Inc. ಆಗಿರುತ್ತದೆ;
ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ನೀವು ನೆಲೆಸಿದ್ದರೆ ಅಥವಾ ನಿಮ್ಮ ವ್ಯವಹಾರದ ಪ್ರಧಾನ ಸ್ಥಳ ಇದ್ದರೆ, Snap Group Limited ಸಿಂಗಾಪುರ ಶಾಖೆ ಆಗಿರುತ್ತದೆ; ಅಥವಾ
ಜಗತ್ತಿನ ಬೇರೆ ಯಾವುದೇ ಪ್ರದೇಶದಲ್ಲಿ ನೀವು ವಾಸಿಸುತ್ತಿದ್ದರೆ ಅಥವಾ ನಿಮ್ಮ ವ್ಯವಹಾರದ ಪ್ರಧಾನ ಸ್ಥಳ ಇದ್ದರೆ Snap Group Limited ಆಗಿರುತ್ತದೆ.
Snap ಅಂಗಸಂಸ್ಥೆ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗುವುದಕ್ಕಾಗಿ, ನೀವು ಈ ಕೆಳಗಿನ ಅರ್ಹತಾ ಅಗತ್ಯಗಳನ್ನು ಮತ್ತು ಕಾಲಕಾಲಕ್ಕೆ Snap ತಮ್ಮ ಸ್ವಂತ ವಿವೇಚನೆ ಮೇರೆಗೆ ಅಗತ್ಯಪಡಿಸಬಹುದಾದ ಇತರ ಅವಶ್ಯಕತೆಗಳನ್ನು ನೀವು ಪೂರೈಸಬೇಕು ("ಅರ್ಹತಾ ಅಗತ್ಯಗಳು"):
a. ನೀವು ಈ ರೀತಿ Snap ಅಂಗಸಂಸ್ಥೆ ಪ್ರೊಗ್ರಾಂನಲ್ಲಿ ಭಾಗವಹಿಸಬಹುದು:
i. ಒಬ್ಬ ವ್ಯಕ್ತಿಯಾಗಿ ಅಥವಾ ನಿಮ್ಮ ಸ್ವಂತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವ ಒಂದು ಘಟಕವಾಗಿ; ಅಥವಾ
ii. ತೃತೀಯ ಪಕ್ಷದ ಪರವಾಗಿ ಅಥವಾ ತೃತೀಯ ಪಕ್ಷದೊಂದಿಗೆ ಕಾರ್ಯನಿರ್ವಹಿಸುವ ಘಟಕವಾಗಿ (ಒಂದು "ಏಜೆನ್ಸಿ").
b. (ನೀವು ವ್ಯಕ್ತಿಯಾಗಿದ್ದರೆ) ನೀವು ಅರ್ಹವಾದ ಪ್ರದೇಶದಲ್ಲಿ ನೆಲೆಸಿರಬೇಕು (ನೀವು ಘಟಕವಾಗಿದ್ದರೆ) ನಿಮ್ಮ ವ್ಯವಹಾರದ ಪ್ರಧಾನ ಸ್ಥಳವು ಅರ್ಹ ದೇಶದಲ್ಲಿ ಇರಬೇಕು. ಪಾವತಿಗಳು ಅರ್ಹ ದೇಶಗಳಲ್ಲಿ ಮಾತ್ರ ಲಭ್ಯ ಇವೆ ಮತ್ತು Snap ನಮ್ಮ ವಿವೇಚನೆ ಮೇರೆಗೆ ಅರ್ಹ ದೇಶಗಳ ಪಟ್ಟಿಯನ್ನು ಮಾರ್ಪಡಿಸಬಹುದು. ನೀವು ಯುನೈಟೆಡ್ ಸ್ಟೇಟ್ಸ್ ಹೊರಗೆ ವಾಸಿಸುತ್ತಿದ್ದರೆ, Snap ಅಂಗಸಂಸ್ಥೆ ಪ್ರೊಗ್ರಾಂಗೆ ಸಂಬಂಧಿಸಿ ಯಾವುದೇ ಸೇವೆಗಳ ಕಾರ್ಯನಿರ್ವಹಣೆ ಮಾಡುವಾಗ ನೀವು ಭೌತಿಕವಾಗಿ ಯುನೈಟೆಡ್ ಸ್ಟೇಟ್ಸ್ ಹೊರಗೆ ಇರಬೇಕು ಮತ್ತು ಒಂದು ಅರ್ಹ ದೇಶದೊಳಗೆ ಇರಬೇಕು.
c. ನೀವು ವ್ಯಕ್ತಿಯಾಗಿದ್ದರೆ, ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನೀವು ಕನಿಷ್ಠ ಕಾನೂನುಬದ್ಧ ಪ್ರಾಪ್ತವಯಸ್ಕರಾಗಿರಬೇಕು. ನೀವು ಒಂದು ಘಟಕದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ನೀವು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು (ಅಥವಾ ನಿಮ್ಮ ರಾಜ್ಯ, ಪ್ರಾಂತ್ಯ ಅಥವಾ ದೇಶದಲ್ಲಿ ಕಾನೂನುಬದ್ಧ ಪ್ರಾಪ್ತ ವಯಸ್ಕರಾಗಿರಬೇಕು) ಮತ್ತು ಅಂತಹ ಘಟಕವನ್ನು ಜೋಡಣೆ ಮಾಡುವ ಅಧಿಕಾರವನ್ನು ಹೊಂದಿರಬೇಕು. ಈ Snap ಅಂಗಸಂಸ್ತೆ ಪ್ರೊಗ್ರಾಂ ನಿಯಮಗಳಲ್ಲಿ ಇರುವ ಎಲ್ಲ “ನೀವು” ಮತ್ತು ”ನಿಮ್ಮ” ಎಂಬ ಉಲ್ಲೇಖಗಳು ಅಂತಿಮ ಬಳಕೆದಾರನಾಗಿ ಮತ್ತು ಆ ಘಟಕವಾಗಿ ಎಂಬ ಎರಡೂ ಅರ್ಥಗಳನ್ನು ಹೊಂದಿರುತ್ತವೆ.
d. ನೀವು Snap ಅಂಗಸಂಸ್ಥೆ ಪ್ರೊಗ್ರಾಂ ಭಾಗವಾಗಿ ಕಾಲಕಾಲಕ್ಕೆ ಕಂಟೆಂಟ್ ಅನ್ನು ಪೋಸ್ಟ್ ಮಾಡುವ ತೃತೀಯ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಅಥವಾ ಅವರೊಂದಿಗೆ ಕೆಲಸ ಮಾಡುತ್ತಿರುವ ಏಜೆನ್ಸಿಯಾಗಿದ್ದರೆ (“ಕಂಟೆಂಟ್ ಮಾಲೀಕ”), ಅಂತಹ ಕಂಟೆಂಟ್ ಮಾಲೀಕರನ್ನು ಜೋಡಣೆ ಮಾಡುವ ಅಧಿಕಾರವನ್ನು ನೀವು ಹೊಂದಿರಬೇಕು. ಕಂಟೆಂಟ್ ಮಾಲೀಕನ(ರ) ಪರವಾಗಿ ಕಾರ್ಯನಿರ್ವಹಿಸುವ ಏಜೆನ್ಸಿ ನೀವಾಗಿದ್ದರೆ, Snap ಒದಗಿಸುವ ಟ್ರ್ಯಾಕಿಂಗ್ ಲಿಂಕ್(ಗಳ)ನ್ನು (ಕೆಳಗೆ ವ್ಯಾಖ್ಯಾನಿಸಲಾಗಿದೆ) ನೀವು ಪ್ರತಿನಿಧಿಸುವ (ಏಜೆನ್ಸಿ ಅಥವಾ ಕಂಟೆಂಟ್ ಮಾಲೀಕ(ರು)) ಜಾಹೀರಾತುದಾರರ ಪ್ರಯೋಜನಕ್ಕಾಗಿ ಜಾಹೀರಾತು ನೀಡುವಿಕೆ ಸ್ಥಳದ ಖರೀದಿಗಾಗಿ ಬಳಸುವುದಿಲ್ಲ ಎಂದು ನೀವು ಖಾತರಿ ನೀಡುತ್ತೀರಿ. ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳಲ್ಲಿನ ಎಲ್ಲ “ನೀವು” ಮತ್ತು “ನಿಮ್ಮ” ಎಂಬ ಉಲ್ಲೇಖಗಳನ್ನು ಏಜೆನ್ಸಿಯಾಗಿ ಮತ್ತು ಸಂಬಂಧಿಸಿದ ಕಂಟೆಂಟ್ ಮಾಲೀಕನಾ(ರಾ)ಗಿ ಎರಡೂ ರೀತಿಯಲ್ಲಿ ನಿಮ್ಮನ್ನು ಉಲ್ಲೇಖಿಸಲಾಗುತ್ತಿದೆ ಎಂದು ಅರ್ಥೈಸಲಾಗುತ್ತದೆ.
e. ನೀವು ವ್ಯಕ್ತಿಯಾಗಿರಲಿ ಅಥವಾ ಒಂದು ಘಟಕದ ಪರವಾಗಿ ಕಾರ್ಯನಿರ್ವಹಿಸುತ್ತಿರಲಿ ಅಥವಾ ಕಂಟೆಂಟ್ ಮಾಲೀಕರ ಪರವಾಗಿ ಕಾರ್ಯನಿರ್ವಹಿಸುತ್ತಿರಲಿ, Snap ಅಂಗಸಂಸ್ಥೆ ಪ್ರೊಗ್ರಾಂಗೆ ಅರ್ಜಿ ಮತ್ತು ಒಂದು ವೇಳೆ ಅರ್ಜಿ ಸ್ವೀಕೃತವಾದರೆ, Snap ಅಂಗಸಂಸ್ಥೆ ಪ್ರೊಗ್ರಾಂ, ವೃತ್ತಿಪರ/ವ್ಯವಹಾರ ಚಟುವಟಿಕೆಗಳ ಪರಿಧಿಯೊಳಗೆ ವೃತ್ತಿಪರ ಉದ್ದೇಶಗಳಿಗಾಗಿ ಇರುತ್ತವೆ ಎಂದು ನೀವು ಅಂಗೀಕರಿಸುತ್ತೀರಿ.
f. ನೀವು: (i) Snapchat ಖಾತೆ ಮತ್ತು Snapchat ವ್ಯವಹಾರ ಖಾತೆಯನ್ನು ಹೊಂದಿರಬೇಕು (“Snapchat ಖಾತೆಗಳು”); (ii) ನಿಮ್ಮ ಸ್ವಂತ ಅಥವಾ ನೀವು ಕಾರ್ಯಾಚರಿಸುವ ವೆಬ್ಸೈಟ್ನಲ್ಲಿ ಹಾಗೂ ಇತರ ತೃತೀಯ ಪಕ್ಷದ ಪ್ಲ್ಯಾಟ್ಫಾರ್ಮ್ಗಳಲ್ಲಿ ಸ್ಥಾಪಿತ ಪ್ರೇಕ್ಷಕರನ್ನು ಹೊಂದಿರಬೇಕು (Snap ತನ್ನ ಸ್ವಂತ ವಿವೇಚನೆ ಮೇರೆಗೆ ನಿರ್ಧರಿಸುವಂತೆ); ಮತ್ತು (iii) ಆನ್ಲೈನ್ ಕೋರ್ಸ್ಗಳು, ಸೆಮಿನಾರ್ಗಳು, ಬ್ಲಾಗ್ ಪೋಸ್ಟ್ಗಳು ಮತ್ತು ವೀಡಿಯೊಗಳು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ ನಿಯಮಿತವಾಗಿ ಅಸಲಿ ಕಂಟೆಂಟ್ ಅನ್ನು ರಚಿಸಬೇಕು.
g. ನೀವು: (i) Snap ಅಥವಾ ಅದರ ಪ್ರಧಾನ ಸಂಸ್ಥೆ, ಉಪಸಂಸ್ಥೆಗಳು ಅಥವಾ ಅಂಗಸಂಸ್ಥೆಗಳ ಉದ್ಯೋಗಿ, ಅಧಿಕಾರಿ ಅಥವಾ ನಿರ್ದೇಶಕರಾಗಿರುವಂತಿಲ್ಲ; ಅಥವಾ (ii) ಸರ್ಕಾರಿ ಘಟಕ, ಉಪಸಂಸ್ಥೆ ಅಥವ ಸರ್ಕಾರಿ ಘಟಕದ ಉಪಸಂಸ್ಥೆ ಆಗಿರುವಂತಿಲ್ಲ. Snap ಅಂಗಸಂಸ್ಥೆ ಪ್ರೊಗ್ರಾಂನಲ್ಲಿ ನಿಮ್ಮ ಭಾಗವಹಿಸುವಿಕೆಯ ಮೂಲಕ ರಚಿಸಲಾಗಿರುವುದಕ್ಕಿಂತ ಹೆಚ್ಚಿನ ಸಂಬಂಧವನ್ನು ನಿಮ್ಮ ಮತ್ತು Snap ನಡುವೆ ನೀವು ಸಂಕೇತಿಸುವಂತಿಲ್ಲ. ಉದಾಹರಣೆಗೆ, ನೀವು ನಿಮ್ಮನ್ನು Snap ನ ಉದ್ಯೋಗಿ ಅಥವಾ ಅಧಿಕೃತ ಪ್ರತಿನಿಧಿಯಾಗಿಸಿಕೊಳ್ಳುವಂತಿಲ್ಲ.
h. ನೀವು ಇತರ ಯಾವುದೇ Snap ಪ್ರೋತ್ಸಾಹಕ ಪ್ರೊಗ್ರಾಂಗಳಲ್ಲಿ ಭಾಗವಹಿಸುವಂತಿಲ್ಲ. ಒಂದು ವೇಳೆ ಭಾಗವಹಿಸಿದ್ದರೆ, ನೀವು Snapchat ಅಂಗಸಂಸ್ಥೆ ತಂಡಕ್ಕೆ ತಿಳಿಸಿದ್ದೀರಿ ಅಥವಾ ಎರಡೂ ಪ್ರೊಗ್ರಾಂಗಳಲ್ಲಿ ಭಾಗವಹಿಸಲು ಲಿಖಿತ ಅನುಮೋದನೆಯನ್ನು ಪಡೆದಿದ್ದೀರಿ.
ನೀವು ಅರ್ಹತೆಯ ಅಗತ್ಯಗಳನ್ನು ಪೂರೈಸುತ್ತೀರಿ ಎಂದು ವೆರಿಫೈ ಮಾಡಲು ಅವಶ್ಯಕವಾದ ಯಾವುದೇ ಮಾಹಿತಿನ್ನು ಕೋರುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಅರ್ಹತೆಯ ಅಗತ್ಯಗಳನ್ನು ಪೂರೈಸುವುದು Snap ಅಂಗಸಂಸ್ಥೆ ಪ್ರೊಗ್ರಾಂಗೆ ಸೇರಿಸಿಕೊಳ್ಳುವುದನ್ನು ಖಾತರಿಪಡಿಸುವುದಿಲ್ಲ. ಯಾವುದೇ ಕಾರಣಕ್ಕಾಗಿ ಯಾವುದೇ ಸಮಯದಲ್ಲಿ Snap ಅಂಗಸಂಸ್ಥೆ ಪ್ರೊಗ್ರಾಂನಿಂದ ಯಾವುದೇ ಬಳಕೆದಾರನನ್ನು ತೆಗೆದುಹಾಕುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ.
ಸಾರಾಂಶದಲ್ಲಿ: Snap ಅಂಗಸಂಸ್ಥೆ ಪ್ರೊಗ್ರಾಂಗೆ ಅರ್ಜಿ ಸಲ್ಲಿಸಲು ನೀವು ಕೆಲವು ಕನಿಷ್ಠ ಅಗತ್ಯಗಳನ್ನು ಪೂರೈಸಬೇಕು. ಇವುಗಳಲ್ಲಿ ವಯಸ್ಸು, ಸ್ಥಳ ಮತ್ತು ಕೆಲವು ಖಾತೆ ಅಗತ್ಯಗಳು ಸೇರಿವೆ. ಈ ಅಗತ್ಯಗಳನ್ನು ಪೂರೈಸುವುದರಿಂದ Snap ಅಂಗಸಂಸ್ಥೆ ಪ್ರೊಗ್ರಾಂಗೆ ನಿಮ್ಮನ್ನು ಸೇರಿಸಿಕೊಳ್ಳಲಾಗುತ್ತದೆ ಎಂದು ಖಾತರಿಪಡಿಸುವುದಿಲ್ಲ. ನೀವು ಇತರರ ಪರವಾಗಿ ಏಜೆನ್ಸಿಯಾಗಿ Snap ಅಂಗಸಂಸ್ಥೆ ಪ್ರೊಗ್ರಾಂಗೆ ಸೇರುತ್ತಿದ್ದರೆ, ಈ ನಿಯಮಗಳಲ್ಲಿ “ನೀವು” ಎಂಬ ಯಾವುದೇ ಉಲ್ಲೇಖವು ಆ ತೃತೀಯ ಪಕ್ಷಗಳಿಗೂ ಅನ್ವಯಿಸುತ್ತದೆ.
ನೀವು ಅರ್ಹತಾ ಅಗತ್ಯಗಳನ್ನು ಪೂರೈಸಿದರೆ Snap ಅಂಗಸಂಸ್ಥೆ ಪ್ರೊಗ್ರಾಂನಲ್ಲಿ ಭಾಗವಹಿಸಲು ನೀವು ಅರ್ಜಿ ಸಲ್ಲಿಸಬಹುದು:
a. ಪಾವತಿಗಳು ಸೇರಿದಂತೆ, Snap ಅಂಗಸಂಸ್ಥೆ ಪ್ರೊಗ್ರಾಂ ಅನ್ನು ನಿರ್ವಹಿಸಲು Snap ತೃತೀಯ ಪಕ್ಷದ ಪ್ಲ್ಯಾಟ್ಫಾರ್ಮ್ ಬಳಸಬಹುದು ("ಪ್ಲ್ಯಾಟ್ಫಾರ್ಮ್ ಪೂರೈಕೆದಾರ"). ಪ್ಲ್ಯಾಟ್ಫಾರ್ಮ್ ಪೂರೈಕೆದಾರರೊಂದಿಗೆ ನೀವು ಒಂದು ಖಾತೆಯನ್ನು ಹೊಂದಿರಬೇಕು ಅಥವಾ ರಚಿಸಬೇಕು ("ಪ್ಲ್ಯಾಟ್ಫಾರ್ಮ್ ಪೂರೈಕೆದಾರರ ಖಾತೆ") ಮತ್ತು ಅದರ ಅನ್ವಯಿಸುವ ನಿಯಮಗಳು ಮತ್ತು ನೀತಿಗಳನ್ನು ಸ್ವೀಕರಿಸಬೇಕು ("ಪ್ಲ್ಯಾಟ್ಫಾರ್ಮ್ ಪೂರೈಕೆದಾರ ನಿಯಮಗಳು"). ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಸಮರ್ಪಿತ FAQ ಪುಟವನ್ನು ನೋಡಿ. ಪ್ಲ್ಯಾಟ್ಫಾರ್ಮ್ ಪೂರೈಕೆದಾರರು, ಪ್ಲ್ಯಾಟ್ಫಾರ್ಮ್ ಪೂರೈಕೆದಾರರ ನಿಯಮಗಳು ಅಥವಾ ಪ್ಲ್ಯಾಟ್ಫಾರ್ಮ್ ಪೂರೈಕೆದಾರರ ಖಾತೆಯ ನಿಮ್ಮ ಬಳಕೆಯಿಂದ ಉದ್ಭವಿಸುವ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ನಷ್ಟಗಳು, ಹಾನಿಗಳು ಅಥವಾ ಬಾಧ್ಯತೆಗಳಿಗೆ Snap ಹೊಣೆಗಾರವಾಗಿರುವುದಿಲ್ಲ ಎಂದು ನೀವು ಒಪ್ಪುತ್ತೀರಿ ಮತ್ತು ಅಂಗೀಕರಿಸುತ್ತೀರಿ.
b. ಪ್ಲ್ಯಾಟ್ಫಾರ್ಮ್ ಪೂರೈಕೆದಾರರ ಮೂಲಕ Snap ಅಂಗಸಂಸ್ಥೆ ಪ್ರೊಗ್ರಾಂಗೆ ಒಂದು ಅರ್ಜಿಯನ್ನು ಪೂರ್ಣಗೊಳಿಸಿ. ಅಗತ್ಯವಿರಬಹುದಾದ ಯಾವುದೇ ಇತರ ಮಾಹಿತಿಯ ಜೊತೆಗೆ, ನಿಖರ ಮತ್ತು ಸಂಪೂರ್ಣವಾದ ಮಾಹಿತಿಯನ್ನು ನೀವು Snap ಮತ್ತು ಯಾವುದೇ ಪ್ಲ್ಯಾಟ್ಫಾರ್ಮ್ ಪೂರೈಕೆದಾರರಿಗೆ ಒದಗಿಸಬೇಕು.
c. ಯಾವುದೇ ಹೆಚ್ಚುವರಿ ವಿವರಣೆಯಿಲ್ಲದೆ Snap ತನ್ನ ಸ್ವಂತ ವಿವೇಚನೆ ಮೇರೆಗೆ ನಿಮ್ಮ ಅರ್ಜಿಯನ್ನು ತಿರಸ್ಕರಿಸಬಹುದು.
d. ನಿಮ್ಮ ಅರ್ಜಿಯನ್ನು ಸ್ವೀಕರಿಸಿದರೆ, Snap ಅಂಗಸಂಸ್ಥೆ ಪ್ರೊಗ್ರಾಂಗೆ ಸಂಬಂಧಿಸಿ ಇಮೇಲ್, Snapchat ಮತ್ತು ಇತರ ಸಂವಹನಗಳ ಮೂಲಕ Snap ನಿಮ್ಮನ್ನು ಸಂಪರ್ಕಿಸಬಹುದು ಎಂದು ನೀವು ಒಪ್ಪುತ್ತೀರಿ.
e. ನಿಮ್ಮ Snapchat ಖಾತೆಗಳು ಮತ್ತು ಪ್ಲ್ಯಾಟ್ಫಾರ್ಮ್ ಪೂರೈಕೆದಾರರ ಖಾತೆಯು ಸಕ್ರಿಯವಾಗಿರಬೇಕು ಮತ್ತು ನಿಯಮಗಳ ಅನುಸಾರವಾಗಿ ಇರಬೇಕು (Snap ತನ್ನ ಸ್ವಂತ ವಿವೇಚನೆ ಮೇರೆಗೆ ನಿರ್ಧರಿಸಿದಂತೆ).
f. Snap ಅಂಗಸಂಸ್ಥೆ ಪ್ರೊಗ್ರಾಂನಲ್ಲಿ ಭಾಗವಹಿಸುವ ಮೂಲಕ, ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳಿಗೆ ಬದ್ಧರಾಗಿಸಲು ಮತ್ತು ಅನುಸರಣೆ ಮಾಡಲು ನೀವು ಒಪ್ಪುತ್ತೀರಿ. ಒಂದು ಏಜೆನ್ಸಿಯಾಗಿ ನೀವು Snap ಅಂಗಸಂಸ್ಥೆ ಪ್ರೊಗ್ರಾಂನಲ್ಲಿ ಭಾಗವಹಿಸಿದರೆ, ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳೊಂದಿಗೆ ಕಂಟೆಂಟ್ ಮಾಲೀಕರಿಂದ ಅನುಸರಣೆಯನ್ನು ಪಡೆದುಕೊಳ್ಳಲು ನೀವು ಜವಾಬ್ದಾರರಾಗಿದ್ದೀರಿ ಮತ್ತು ಯಾವುದೇ ಕಂಟೆಂಟ್ ಮಾಲೀಕರ ಯಾವುದೇ ಕ್ರಮಗಳು ಅಥವಾ ಲೋಪಗಳಿಗೆ ನೀವು ಹೊಣೆಗಾರರಾಗಿ ಉಳಿಯುತ್ತೀರಿ.
ಸಾರಾಂಶದಲ್ಲಿ: ನೀವು ಕನಿಷ್ಠ ಅರ್ಹತೆಯ ಅಗತ್ಯಗಳನ್ನು ಪೂರೈಸಿದರೆ ನೀವು Snap ಅಂಗಸಂಸ್ಥೆ ಪ್ರೊಗ್ರಾಂನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಬಹುದು. ನೀವು ನಮಗೆ ನೈಜ ಮತ್ತು ಪರಿಷ್ಕೃತ ಮಾಹಿತಿಯನ್ನು ಒದಗಿಸಬೇಕು. Snap ಅಂಗಸಂಸ್ಥೆ ಪ್ರೊಗ್ರಾಂನಲ್ಲಿ ನಿಮ್ಮ ಭಾಗವಹಿಸುವಿಕೆಯು Snap ನಿಂದ ನಿಮ್ಮ ಅರ್ಜಿಯ ಸ್ವೀಕೃತಿಗೆ ಒಳಪಟ್ಟಿದೆ. ಯಾವುದೇ ಕಾರಣಕ್ಕಾಗಿ Snap ನಿಮ್ಮ ಅರ್ಜಿಯನ್ನು ತಿರಸ್ಕರಿಸಬಹುದು. Snap ಅಂಗಸಂಸ್ಥೆ ಪ್ರೊಗ್ರಾಂಗೆ ಅರ್ಜಿ ಸಲ್ಲಿಸುವ ಮೂಲಕ, ಈ Snap ಅಂಗಸಂಸ್ಥೆ ನಿಯಮಗಳಿಗೆ ಬದ್ಧರಾಗಿರಲು ಮತ್ತು ಅನುಸರಣೆ ಮಾಡಲು ನೀವು ಒಪ್ಪುತ್ತೀರಿ. ಇತರರ ಪರವಾಗಿ ಒಂದು ಏಜೆನ್ಸಿಯಾಗಿ ನೀವು Snap ಅಂಗಸಂಸ್ಥೆ ಪ್ರೊಗ್ರಾಂಗೆ ಪ್ರವೇಶಿಸಲು ಬಯಸಿದರೆ, ಈ Snap ಅಂಗಸಂಸ್ಥೆ ನಿಯಮಗಳಿಗೆ ಅವರ ಅನುಸರಣೆಗೂ ಕೂಡ ನೀವು ಜವಾಬ್ದಾರರಾಗಿರುತ್ತೀರಿ.
a. Snap ಅಂಗಸಂಸ್ಥೆ ಪ್ರೊಗ್ರಾಂನಲ್ಲಿ ಭಾಗವಹಿಸುವಂತೆ ನಿಮ್ಮನ್ನು ಆಹ್ವಾನಿಸಲಾಗಿದ್ದರೆ, ಪ್ಲ್ಯಾಟ್ಫಾರ್ಮ್ ಪೂರೈಕೆದಾರರ ಮೂಲಕ ಒದಗಿಸಲಾಗಿರುವ ವಿಶಿಷ್ಠ ಟ್ರ್ಯಾಕಿಂಗ್ ಲಿಂಕ್ ಅನ್ನು ನೀವು ಸ್ವೀಕರಿಸುತ್ತೀರಿ (“ಟ್ರ್ಯಾಕಿಂಗ್ ಲಿಂಕ್”). ನಿಮ್ಮ ಮಾಲೀಕತ್ವದ ಮತ್ತು ನೀವು ಕಾರ್ಯಾಚರಿಸುವ ವೆಬ್ಸೈಟ್ನಲ್ಲಿ ಅಥವಾ Snap ಅನ್ನು ಜಾಹೀರಾತು ನೀಡುವ ಪ್ಲ್ಯಾಟ್ಫಾರ್ಮ್ ಆಗಿ ಪ್ರಚಾರ ಮಾಡುವ ಇತರ ತೃತೀಯ ಪಕ್ಷದ ಪ್ಲ್ಯಾಟ್ಫಾರ್ಮ್ಗಳಲ್ಲಿ ನಿಮ್ಮ ಪ್ರೊಫೈಲ್ ಅಥವಾ ಖಾತೆಯ ಮೂಲಕ ನೀವು ಪೋಸ್ಟ್ ಮಾಡುವ ಅಸಲಿ ಕಂಟೆಂಟ್ನಲ್ಲಿ ಮಾತ್ರ ನೀವು ಟ್ರ್ಯಾಕಿಂಗ್ ಲಿಂಕ್ ಅನ್ನು ಬಳಸುತ್ತೀರಿ. ಶಾಸನಗಳು, ಅಧ್ಯಾದೇಶಗಳು, ನಿಯಮಗಳು, ಸಾರ್ವಜನಿಕ ಆದೇಶ ನಿಯಮಗಳು, ಸಂಹಿತೆಗಳು, ನಿಬಂಧನೆಗಳು, ನಿಯಂತ್ರಕ ಮಾರ್ಗಸೂಚಿಗಳು ಮತ್ತು ಸಂಬಂಧಿಸಿದ ವ್ಯವಹಾರ ಮಾರ್ಗದರ್ಶನ, ಒಕ್ಕೂಟ ಒಪ್ಪಂದಗಳು, ನೀವು ಅಥವಾ ಅರ್ಹತೆ ಪಡೆಯುವ ಕಂಟೆಂಟ್ ಒಳಪಟ್ಟಿರುವ ತೃತೀಯ ಪಕ್ಷಗಳ ನಿಯಮಗಳು ಮತ್ತು ಷರತ್ತುಗಳು ಹಾಗೂ ಅನ್ವಯಿಸುವ ಪ್ರತಿ ವೆಬ್ಸೈಟ್ ಅಥವಾ ಪ್ಲ್ಯಾಟ್ಫಾರ್ಮ್ ಬಳಕೆಗೆ ಸಂಬಂಧಿಸಿದ ಇತರ ನಿಯಮಗಳು ಮತ್ತು ಷರತ್ತುಗಳು ಒಳಗೊಂಡಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ನಿಮ್ಮ ಅರ್ಹತೆ ಪಡೆಯುವ ಕಂಟೆಂಟ್ ಎಲ್ಲ ಅನ್ವಯಿಸುವ ಕಾನೂನುಗಳು ನಿಬಂಧನೆಗಳು ಮತ್ತು ಉದ್ಯಮ ಮಾರ್ಗದರ್ಶಿಗಳ ಜೊತೆಗೆ ಅನುಸರಣೆ ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು ಜವಾಬ್ದಾರರಾಗಿದ್ದೀರಿ (“ನಿಯಮಗಳು“). ಇದು ಅನ್ವಯಿಸುವ ನಿಯಮಗಳ ಅನುಸರಣೆಯಲ್ಲಿ ಎಲ್ಲ ಅಗತ್ಯವಿರುವ ಜಾಹೀರಾತು ನೀಡುವಿಕೆ, ಪ್ರಚಾರ ಅಥವಾ ಅಂಗಸಂಸ್ಥೆ ಲಿಂಕ್ ಅನ್ನು ಬಹಿರಂಗಪಡಿಸುವುದನ್ನು ಒಳಗೊಂಡಿದೆ. ಅನ್ವಯಿಸುವ ನಿಯಮಗಳೊಂದಿಗೆ ಅನುಸರಣೆಗಾಗಿ ಹಾಗೂ Snap ಕುರಿತು ನೀವು ಮಾಡುವ ಯಾವುದೇ ಹೇಳಿಕೆಗಳು ನಿಮ್ಮ ಪ್ರಾಮಾಣಿಕ ಅಭಿಪ್ರಾಯಗಳು, ನಂಬಿಕೆಗಳು ಅಥವಾ ಅನುಭವಗಳಾಗಿವೆ ಮತ್ತು ಸುಳ್ಳು, ದಾರಿತಪ್ಪಿಸುವ ಅಥವಾ ಆಧಾರರಹಿತವಾದವು ಅಲ್ಲ ಎಂಬುದನ್ನು ಖಚಿತಪಡಿಸಲು, ಅಂತಹ ಜಾಹೀರಾತು ನೀಡುವಿಕೆ ಅಥವಾ ಅಂಗಸಂಸ್ಥೆ ಲಿಂಕ್ ಬಹಿರಂಗಪಡಿಸುವಿಕೆಗಳು ಸ್ಪಷ್ಟವಾಗಿರಬೇಕು, ಎದ್ದುಕಾಣುವಂತಿರಬೇಕು ಮತ್ತು ಅರ್ಹತೆ ಪಡೆಯುವ ಕಂಟೆಂಟ್ ಒಳಗಡೆ ಸಾಕಷ್ಟು ಪ್ರಮುಖವಾದ ರೀತಿಯಲ್ಲಿ ಇರಿಸಿರಬೇಕು.
b. ಅರ್ಹತೆ ಪಡೆಯುವ ಕಂಟೆಂಟ್ ಕೆಲವು Snap ಟ್ರೇಡ್ ಮಾರ್ಕ್ಗಳು ಮತ್ತು ಬ್ರಾಂಡ್ ಸ್ವತ್ತುಗಳನ್ನು ಒಳಗೊಂಡಿರಬಹುದು (“Snap-ಒದಗಿಸಿದ ಸಾಮಗ್ರಿಗಳು”). ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳು ಮತ್ತು Snap ನ ಬ್ರಾಂಡ್ ಮಾರ್ಗಸೂಚಿಗಳಿಗೆ ಒಳಪಟ್ಟು, ಇಲ್ಲಿ ಅಥವಾ Snap ನಿಂದ ಲಿಖಿತ ರೂಪದಲ್ಲಿ ಹೇಳಲಾಗಿರುವಂತೆ, Snap ಅಂಗಸಂಸ್ಥೆ ಪ್ರೊಗ್ರಾಂನಲ್ಲಿ ನಿಮ್ಮ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಮಾತ್ರ Snap-ಒದಗಿಸಿದ ಸಾಮಗ್ರಿಗಳನ್ನು ಬಳಸಲು Snap ಅಂಗಸಂಸ್ಥೆ ಪ್ರೊಗ್ರಾಂನಲ್ಲಿ ನಿಮ್ಮ ಭಾಗವಹಿಸುವಿಕೆಯ ಅವಧಿಯಲ್ಲಿ Snap ನಿಮಗೆ ಸೀಮಿತವಾದ, ಅನನ್ಯವಲ್ಲದ, ವರ್ಗಾಯಿಸಲಾಗದ, ಉಪ-ಪರವಾನಗಿ ನೀಡಲಾಗದ (ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳಲ್ಲಿ ಹೇಳಲಾಗಿರುವುದನ್ನು ಹೊರತುಪಡಿಸಿ), ಹಿಂಪಡೆಯಬಹುದಾದ ಪರವಾನಗಿಯನ್ನು ನೀಡುತ್ತದೆ. ಅಂತಹ Snap-ಒದಗಿಸಿದ ಸಾಮಗ್ರಿಗಳನ್ನು ಯಾವುದೇ ಬದಲಾವಣೆ, ಮಾರ್ಪಾಡು ಅಥವಾ ಅಳವಡಿಸುವಿಕೆಯಿಲ್ಲದೆ, ಒದಗಿಸಿದಂತೆ ಮಾತ್ರ ಬಳಸಲು ನೀವು ಒಪ್ಪುತ್ತೀರಿ. ಮುಂದುವರಿದು ಈ Snap-ಒದಗಿಸಿದ ಸಾಮಗ್ರಿಗಳನ್ನು ಅನ್ವಯಿಸುವ ನಿಯಮಗಳ ಅನುಸಾರವಾಗಿ ಮಾತ್ರ ಬಳಸಲು ನೀವು ಒಪ್ಪುತ್ತೀರಿ. ನೀವು ಏಜೆನ್ಸಿಯಾಗಿದ್ದರೆ, Snap ಅಂಗಸಂಸ್ಥೆ ಪ್ರೊಗ್ರಾಂನಲ್ಲಿ ಅವರ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಮಾತ್ರ ಕಂಟೆಂಟ್ ಮಾಲೀಕರಿಗೆ ಈ ಪರವಾನಗಿಯನ್ನು ಉಪ-ಪರವಾನಗಿ ನೀಡಬಹುದು. ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳಲ್ಲಿ ಹೇಳಲಾಗಿರುವಂತೆ ಯಾವುದೇ ಸಮಯದಲ್ಲಿ ನಾವು Snap ಅಂಗಸಂಸ್ಥೆ ಪ್ರೊಗ್ರಾಂಗೆ ನಿಮ್ಮ ಆ್ಯಕ್ಸೆಸ್ ಅನ್ನು ಅಮಾನತುಗೊಳಿಸಿದರೆ, ಸಮಾಪ್ತಿ ಮಾಡಿದರೆ ಅಥವಾ ಹಿಂಪಡೆದರೆ ಅಥವಾ Snap ಅಂಗಸಂಸ್ಥೆ ಪ್ರೊಗ್ರಾಂ ಅನ್ನು ಸ್ಥಗಿತಗೊಳಿಸಿದರೆ, ಆಫರ್ ಮಾಡದಿದ್ದರೆ ಅಥವಾ ಆಫರ್ ಮಾಡುವುದನ್ನು ಅಥವಾ ಬೆಂಬಲಿಸುವುದನ್ನು ನಿಲ್ಲಿಸಿದರೆ, ಈ ವಿಭಾಗದಲ್ಲಿ ನಿಮಗೆ ನೀಡಲಾಗಿರುವ ಪರವಾನಗಿಯನ್ನು ಹಿಂಪಡೆಯಲಾಗುತ್ತದೆ. ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿರುವುದನ್ನು ಹೊರತುಪಡಿಸಿ, ಇನ್ನೊಂದು ಪಕ್ಷದ ಸ್ಪಷ್ಟ ಪೂರ್ವ ಲಿಖಿತ ಸಮ್ಮತಿಯಿಲ್ಲದೆ, ಯಾವುದೇ ಪಕ್ಷವು ಇನ್ನೊಂದು ಪಕ್ಷದ ಹೆಸರುಗಳು, ಟ್ರೇಡ್ಮಾರ್ಕ್ಗಳು, ಸೇವಾಗುರುತುಗಳು, ಲೋಗೋಗಳು ಅಥವಾ ಸಂಕೇತಗಳನ್ನಾಗಲಿ ಅಥವಾ ಯಾವುದೇ ರೀತಿಯಲ್ಲಿ ಯಾವುದೇ ಅಳವಡಿಸಿಕೊಳ್ಳುವಿಕೆ ಅಥವಾ ವ್ಯತ್ಯಾಸಗಳನ್ನಾಗಲಿ ಬಳಸಬಾರದು. ಅಂತಹ ಎಲ್ಲ ಬಳಕೆಗಳು ಇತರ ಪಕ್ಷದ ಅನುಮೋದನೆಗೆ ಒಳಪಟ್ಟಿರಬೇಕು, ಇನ್ನೊಂದು ಪಕ್ಷದ ಪ್ರಯೋಜನಕ್ಕಾಗಿ ಮಾತ್ರ ಒಳಪಟ್ಟಿರಬೇಕು ಮತ್ತು ಇನ್ನೊಂದು ಪಕ್ಷದ ಅಂತಹ ಬೌದ್ಧಿಕ ಆಸ್ತಿಯಲ್ಲಿ ಯಾವುದೇ ಹಕ್ಕುಗಳನ್ನು ಇನ್ನೊಂದು ಪಕ್ಷಕ್ಕೆ ನೀಡಬಾರದು.
c. ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳಿಗೆ ನಿಮ್ಮ ಅನುಸರಣೆಗೆ ಒಳಪಟ್ಟು, ನಿಮ್ಮ ಪ್ಲ್ಯಾಟ್ಫಾರ್ಮ್ ಪೂರೈಕೆದಾರರ ಖಾತೆಯಲ್ಲಿ ನಿಯೋಜಿಸಲಾದ ಅವಧಿಯಲ್ಲಿ ಸೇವೆಗಳಲ್ಲಿ ಜಾಹೀರಾತುಗಳನ್ನು ಚಲಾಯಿಸುವುದಕ್ಕಾಗಿ ಅರ್ಹ ಗ್ರಾಹಕರಿಂದ (ಕೆಳಗೆ ವ್ಯಾಖ್ಯಾನಿಸಿರುವಂತೆ) Snap ಗೆ ಪಾವತಿಸಲಾಗುವ ಆದಾಯದಲ್ಲಿ ಒಂದಿಷ್ಟು ಪಾಲನ್ನು Snap ನಿಮಗೆ ಪ್ರದಾನ ಮಾಡಬಹುದಾಗಿದ್ದು (ತೆರಿಗೆಗಳು ಮತ್ತು ಕರಗಳನ್ನು ಹೊರತುಪಡಿಸಿ), ಅಂತಹ ಆದಾಯವು ಈ ರೀತಿಯಲ್ಲಿರಬೇಕು ಎಂಬ ನಿಯಮಕ್ಕೆ ಇದು ಒಳಪಟ್ಟಿದೆ: (i) ಆ ಅರ್ಹ ಗ್ರಾಹಕರು ನಿಮ್ಮ ಟ್ರ್ಯಾಕಿಂಗ್ ಲಿಂಕ್ ಮೂಲಕ ಕ್ಲಿಕ್ ಮಾಡಿದ 90 ದಿನಗಳಲ್ಲಿ ಒಟ್ಟುಗೂಡಿರಬೇಕು; ಮತ್ತು (ii) Snap ತನ್ನ ಸ್ವಂತ ವಿವೇಚನೆ ಮೇರೆಗೆ ನಿರ್ಧರಿಸುವಂತೆ, ಅರ್ಹತೆ ಪಡೆಯುವ ಕಂಟೆಂಟ್ ಅನ್ನು ನೀವು ಪೋಸ್ಟ್ ಮಾಡಿದ ನೇರ ಪರಿಣಾಮವಾಗಿ ಆಗಿರಬೇಕು (“ಅರ್ಹ ಆದಾಯ”). “ಅರ್ಹ ಗ್ರಾಹಕರು" ಅಂದರೆ Snap ಸ್ವಂತವಾಗಿ ನಿರ್ಧರಿಸುವಂತೆ Snapchat ನಲ್ಲಿ ಈ ಹಿಂದೆ ಜಾಹೀರಾತನ್ನು ಚಲಾಯಿಸದೆ ಇರುವ ಹೊಸ ಜಾಹೀರಾತುದಾರರು ಎಂದರ್ಥವಾಗಿದೆ (ಇನ್ನೊಂದು ಖಾತೆ ಅಥವಾ ತೃತೀಯ ಪಕ್ಷದ ಮೂಲಕ ಸೇರಿದಂತೆ, ಯಾವುದೇ ಜಾಹೀರಾತು ಏಜೆನ್ಸಿ ಸೇರಿದಂತೆ).
d. ನಿಮಗೆ ಯಾವುದೇ ಪಾವತಿಗಳನ್ನು ಅರ್ಹ ಆದಾಯದ ಶೇಕಡಾವಾರು ರೂಪದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ, ಅಂತಹ ಶೇಕಡಾವಾರು Snap ನ ಸ್ವಂತ ವಿವೇಚನೆ ಮೇರೆಗೆ ಬದಲಾವಣೆಗೆ ಒಳಪಟ್ಟಿರುತ್ತದೆ. Snap ಅನುಮೋದಿಸದೆ ಇರುವ ಯಾವುದೇ ಅರ್ಹತೆ ಪಡೆಯುವ ಕಂಟೆಂಟ್ ಅಥವಾ ಅರ್ಹ ಆದಾಯಕ್ಕೆ ಸಂಬಂಧಿಸಿ ಪಾವತಿಗಳನ್ನು ಮಾಡಲಾಗುವುದಿಲ್ಲ.
e. Snap ಇವುಗಳಿಗೆ ಹಕ್ಕುಗಳನ್ನು ಹೊಂದಿದೆ: (i) ಟ್ರಾಫಿಕ್ ಮೂಲಗಳು ಮತ್ತು ಬಳಸಿದ ವಿಧಾನಗಳ ಕುರಿತು ಮಾಹಿತಿ ಸೇರಿದಂತೆ ಆದರೆ ಅಷ್ಟಕ್ಕೆ ಸೀಮಿತವಲ್ಲದಂತೆ, ಅರ್ಹತೆ ಪಡೆಯುವ ಕಂಟೆಂಟ್ ಕುರಿತು ನಿಮ್ಮಿಂದ ವಿವರಗಳನ್ನು ವಿನಂತಿಸಲು ಮತ್ತು ಪಡೆದುಕೊಳ್ಳಲು; ಮತ್ತು (ii) ಅರ್ಹ ಗ್ರಾಹಕರು ಮತ್ತು ಅರ್ಹ ಆದಾಯದ ಮಾನ್ಯತೆ ಮತ್ತು ಅರ್ಹತೆಯನ್ನು ಮೌಲ್ಯಮಾಪನ ಮಾಡಲು.
f. ನಿಮಗೆ ಎಲ್ಲ ಪಾವತಿಗಳನ್ನು ಪ್ಲ್ಯಾಟ್ಫಾರ್ಮ್ನಿಂದ ಒದಗಿಸಲಾಗುತ್ತದೆ ಮತ್ತು ಪ್ಲ್ಯಾಟ್ಫಾರ್ಮ್ ಪೂರೈಕೆದಾರರ ನಿಯಮಗಳ ಅನುಸಾರ ಪಾವತಿಸಲಾಗುತ್ತದೆ. ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳಲ್ಲಿ ಸ್ಪಷ್ಟವಾಗಿ ಹೇಳಿರುವಂತೆ ಟ್ರ್ಯಾಕಿಂಗ್ ಲಿಂಕ್ಗಳ ಸೂಕ್ತ ಬಳಕೆಯಿಂದ ಉಂಟಾಗಿದ್ದಲ್ಲಿ ಮಾತ್ರ ಪೇಔಟ್ಗಳನ್ನು ಪಾವತಿಸಲಾಗುತ್ತದೆ.
g. ನಿಮ್ಮ ಮತ್ತು Snap ನಡುವಿನವುಗಳಿಗೆ ಸಂಬಂಧಿಸಿ, ಈ ಮುಂದಿನವುಗಳು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳಿಗೆ ಸಂಬಂಧಿಸಿದಂತೆ ರಚಿಸಲಾದ ಅಥವಾ ಸಂಗ್ರಹಿಸಲಾದ ಎಲ್ಲ ಮಾಹಿತಿಯಲ್ಲಿ ಮತ್ತು ಮಾಹಿತಿಗೆ ಎಲ್ಲ ಹಕ್ಕುಗಳು, ಅಧಿಕಾರಗಳು ಮತ್ತು ಹಿತಾಸಕ್ತಿಗಳನ್ನು (ಎಲ್ಲ ಬೌದ್ಧಿಕ ಆಸ್ತಿ ಹಕ್ಕುಗಳು ಸೇರಿದಂತೆ) Snap ಹೊಂದಿರುತ್ತದೆ; (i) ಟ್ರ್ಯಾಕಿಂಗ್ ಲಿಂಕ್ ಜೊತೆಗೆ ಸಂವಹನ ನಡೆಸುವ ಯಾವುದೇ ಗ್ರಾಹಕರಿಂದ ಸಂಗ್ರಹಿಸಿದ ಯಾವುದೇ ಸಂಪರ್ಕ ಮಾಹಿತಿ; ಮತ್ತು (ii) ಅಂತಹ ಗ್ರಾಹಕರು ಖರೀದಿಸಿದ ಕ್ಲಿಕ್-ಥ್ರೂ ದರಗಳು ಅಥವಾ ಉತ್ಪನ್ನಕ್ಕೆ(ಗಳಿಗೆ) ಸಂಬಂಧಿಸಿದ ಯಾವುದೇ ಮಾಹಿತಿ.
h. Snap ನ ಲಿಖಿತ ಅನುಮತಿಯಿಲ್ಲದೆ ಟ್ರ್ಯಾಕಿಂಗ್ ಲಿಂಕ್ಗಳು ಅಥವಾ Snap-ಒದಗಿಸಿದ ಕಂಟೆಂಟ್ ಅನ್ನು ನೀವು ಮರುವಿತರಣೆ, ಪರವಾನಗಿ, ಮರುಮಾರಾಟ ಅಥವಾ ಬಳಸುವಂತಿಲ್ಲ.
ಸಾರಾಂಶದಲ್ಲಿ: Snap ಅಂಗಸಂಸ್ಥೆ ಪ್ರೊಗ್ರಾಂಗೆ ನಿಮ್ಮನ್ನು ಆಹ್ವಾನಿಸಿದ್ದರೆ, Snap ಅನ್ನು ಪ್ರಚಾರ ಮಾಡುವ ನಿಮ್ಮ ಅಸಲಿ ಕಂಟೆಂಟ್ನಲ್ಲಿ ಬಳಸಲು ನೀವು ಒಂದು ಟ್ರ್ಯಾಕಿಂಗ್ ಲಿಂಕ್ ಅನ್ನು ಸ್ವೀಕರಿಸುತ್ತೀರಿ. ಬಹಿರಂಗಪಡಿಸುವಿಕೆಗಳ ಸೇರ್ಪಡೆಗೆ ಸಂಬಂಧಿಸಿರುವುದು ಸೇರಿದಂತೆ, ಎಲ್ಲ ಅನ್ವಯಿಸುವ ಕಾನೂನು, ನಿಬಂಧನೆಗಳು ಮತ್ತು ಮಾರ್ಗದರ್ಶನದೊಂದಿಗೆ ನಿಮ್ಮ ಕಂಟೆಂಟ್ ಅನುಸರಣೆ ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು ಜವಾಬ್ದಾರರಾಗಿದ್ದೀರಿ. ಈ ನಿಯಮಗಳು ಮತ್ತು Snap ಬ್ರಾಂಡ್ ಮಾರ್ಗಸೂಚಿಗಳಿಗೆ ಅನುಸರಣೆಗೆ ಒಳಪಟ್ಟು ನಿಮ್ಮ ಕಂಟೆಂಟ್ನಲ್ಲಿ ಕೆಲವು Snap ಟ್ರೇಡ್ಮಾರ್ಕ್ಗಳು ಮತ್ತು ಬ್ರಾಂಡ್ ಸ್ವತ್ತುಗಳನ್ನು ಬಳಸಲು ನೀವು ಸೀಮಿತ ಹಕ್ಕನ್ನು ಹೊಂದಿದ್ದೀರಿ. Snap ನ ಸ್ವಂತ ವಿವೇಚನೆ ಮತ್ತು ಅನುಮೋದನೆಗೆ ಒಳಪಟ್ಟು, ನಿಮ್ಮ ಲಿಂಕ್ ಕ್ಲಿಕ್ ಮಾಡುವ ಮತ್ತು Snap ನಲ್ಲಿ ಜಾಹೀರಾತುಗಳನ್ನು ಚಲಾಯಿಸುವ ಹೊಸ ಜಾಹೀರಾತುದಾರರಿಂದ ಬಂದ ಆದಾಯದಲ್ಲಿ ನೀವು ಕಮಿಷನ್ ಗಳಿಸಬಹುದು. ಪಾವತಿ ಮೊತ್ತಗಳು ಮತ್ತು ಅರ್ಹತೆಯನ್ನು Snap ನಿರ್ಧರಿಸುತ್ತದೆ ಮತ್ತು ಹೊಂದಾಣಿಕೆ ಮಾಡುತ್ತದೆ ಹಾಗೂ ಪ್ಲ್ಯಾಟ್ಫಾರ್ಮ್ ಪೂರೈಕೆದಾರರ ನಿಯಮಗಳಿಗೆ ಅನುಸಾರವಾಗಿ ಅವರ ಮೂಲಕ ಸೌಲಭ್ಯಗೊಳಿಸಲಾಗುತ್ತದೆ.
a. ಈ ಕೆಳಗಿನವುಗಳಿಂದ ಸಂಬಂಧಿಸಿದಂತೆ ಒಟ್ಟುಗೂಡಿದೆ ಎಂದು Snap ನಿರ್ಧರಿಸುವ ಯಾವುದೇ ಆದಾಯವನ್ನು ನಿಮಗೆ ನಿಯೋಜಿಸಲಾಗಿರುವ ಆದಾಯದಿಂದ Snap ಹೊರತುಪಡಿಸಬಹುದು (ಸಮಗ್ರವಾಗಿ, “ನಿಷೇಧಿತ ಚಟುವಟಿಕೆಗಳು”):
ಸಮುದಾಯ ಮಾರ್ಗಸೂಚಿಗಳು ಮತ್ತು ಬ್ರಾಂಡ್ ಮಾರ್ಗಸೂಚಿಗಳು ಸೇರಿದಂತೆ Snap ನ ನಿಯಮಗಳನ್ನು ಅನುಸರಣೆ ಮಾಡದೆ ಇರುವ ಕಂಟೆಂಟ್ ಅಥವಾ Snap ನ ಸ್ವಂತ ವಿವೇಚನೆ ಮೇರೆಗೆ ಮಾನಹಾನಿಕರ ಎಂದು ಪರಿಗಣಿಸಲಾಗುವ ಅಥವಾ ಪ್ರಶ್ನಾರ್ಹವಾದ ಅಥವಾ ವಿವಾದಾತ್ಮಕ ವಿಷಯ ವಸ್ತುವನ್ನು ಒಳಗೊಂಡಿರುವ ಕಂಟೆಂಟ್.
ಸ್ಪ್ಯಾಮ್ ಅನ್ನು ಒಳಗೊಂಡಿರುವ ಕಂಟೆಂಟ್.
ಅರ್ಹತೆ ಪಡೆಯುವ ಕಂಟೆಂಟ್ ಅನ್ನು ಪ್ರಚಾರ ಮಾಡಲು ಅನಪೇಕ್ಷಿತ ಇಮೇಲ್ ಅಥವಾ ಸೂಕ್ತವಲ್ಲದ ಸುದ್ದಿಗುಂಪು ಪೋಸ್ಟಿಂಗ್ಗಳ ಬಳಕೆ, ಬ್ರೌಸರ್ಗಳ ಆಟೊಸ್ಪಾನಿಂಗ್ ಅಥವಾ ಸಂದರ್ಶಕರ ಸ್ವಯಂಚಾಲಿತ ಮರುನಿರ್ದೇಶಿಸುವಿಕೆ, ಬ್ಲೈಂಡ್ ಟೆಕ್ಸ್ಟ್ ಲಿಂಕ್ಗಳು, ದಾರಿತಪ್ಪಿಸುವ ಲಿಂಕ್ಗಳು ಅಥವಾ ಬಲವಂತದ ಕ್ಲಿಕ್ಗಳು.
ತೃತೀಯ ಪಕ್ಷಗಳಿಗೆ ಹಣ ಪಾವತಿಸುವುದು ಅಥವಾ ಇತರ ಆಮಿಷಗಳನ್ನು ಒಡ್ಡುವುದು ಅಥವಾ ವೀಕ್ಷಣೆಗಳನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ವಹಿವಾಟು ನಡೆಸುವುದು.
ವಂಚಿಸುವ ಮರುನಿರ್ದೇಶನದ ಲಿಂಕ್ಗಳ ಬಳಕೆ ಸೇರಿದಂತೆ, ಸಂಭಾವ್ಯ ಜಾಹೀರಾತುದಾರರಿಗೆ ಸುಳ್ಳು ಪ್ರತಿನಿಧಿಸುವಿಕೆಗಳು.
Snap ನ ಸೋಗುಹಾಕುವ ಪ್ರಯತ್ನಗಳು.
ಬಾಟ್ಗಳು ಅಥವಾ ಇತರ ಮಾನವೇತರ ಟ್ರಾಫಿಕ್, ಕುಕೀ ಸ್ಟಫಿಂಗ್ ಬಳಸಿಕೊಂಡು ಅಥವಾ ಸುಳ್ಳು ಅಥವಾ ದಾರಿತಪ್ಪಿಸುವ ಲಿಂಕ್ಗಳನ್ನು ಬಳಸಿಕೊಂಡು ರೆಫರಲ್ಗಳ ಜನರೇಟ್ ಮಾಡುವಿಕೆ.
ನೀವು ರಚಿಸಿರುವ ಅಥವಾ ಹೊಂದಿರುವ Snapchat ಖಾತೆಗಳು.
Snap ನ ಪೂರ್ವ ಲಿಖಿತ ಸಮ್ಮತಿಯಿಲ್ಲದ ಯಾವುದೇ ತೃತೀಯ-ಪಕ್ಷದ ನೆಟ್ವರ್ಕ್ಗಳು ಅಥವಾ ಉಪ-ಅಂಗಸಂಸ್ಥೆ ನೆಟ್ವರ್ಕ್ಗಳು.
ಯಾವುದೇ ಸಿಸ್ಟಂ, ಡೇಟಾ ಅಥವಾ ವೈಯಕ್ತಿಕ ಮಾಹಿತಿಗೆ ಹಾನಿ ಮಾಡುವ, ಹಸ್ತಕ್ಷೇಪ ಮಾಡುವ ಅಥವಾ ರಹಸ್ಯವಾಗಿ ಅಡ್ಡಗಟ್ಟುವ ಅಥವಾ ಸ್ವಾಧೀನಪಡಿಸಿಕೊಳ್ಳುವ ಉದ್ದೇಶದೊಂದಿಗೆ ಯಾವುದೇ ವೈರಸ್ಗಳು, ಟ್ರಾಜನ್ ಹಾರ್ಸ್ಗಳು, ವರ್ಮ್ಗಳು, ಟೈಮ್ ಬಾಂಬ್ಗಳು, ಕ್ಯಾನ್ಸಲ್ಬಾಟ್ಗಳು ಅಥವಾ ಇತರ ಕಂಪ್ಯೂಟರ್ ಪ್ರೊಗ್ರಾಮಿಂಗ್ ರುಟೀನ್ಗಳನ್ನು ಹೊಂದಿರುವ ಕಂಟೆಂಟ್.
ಯಾವುದೇ ಇತರ ವೆಬ್ಸೈಟ್ಗೆ ಅಥವಾ ವೆಬ್ಸೈಟ್ನಿಂದ ಇಂಟರ್ನೆಟ್ ಟ್ರಾಫಿಕ್ ಅನ್ನು ಅಡ್ಡಗಟ್ಟಲು, ನಿರ್ದೇಶಿಸಲು ಅಥವಾ ಮರುನಿರ್ದೇಶಿಸಲು ಪ್ರಯತ್ನಿಸುವ ಸಾಫ್ಟ್ವೇರ್ ಅನ್ನು ಒಳಗೊಂಡಿರುವ ಅಥವಾ ತಂತ್ರಜ್ಞಾನವನ್ನು ಬಳಸುವ ಅಥವಾ ಇನ್ನೊಂದು ವೆಬ್ಸೈಟ್ನಿಂದ ಅಂಗಸಂಸ್ಥೆ ಕಮಿಷನ್ಗಳ ಪಥ ಬದಲಿಸಲು ಸಂಭಾವ್ಯತಃ ಅವಕಾಶ ನೀಡುವ ಕಂಟೆಂಟ್.
ತೃತೀಯ ಪಕ್ಷಗಳ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸುವ ಅಥವಾ ಅತಿಕ್ರಮಿಸುವ ಕಂಟೆಂಟ್.
ಸೇವೆಗಳಲ್ಲಿ ಇರುವ ಯಾವುದೇ ಬಳಕೆದಾರ ಡೇಟಾ, ಕಂಟೆಂಟ್ ಅಥವಾ ಇತರ ಡೇಟಾ ಸೇರಿದಂತೆ, ಸೇವೆಗಳನ್ನು ಆ್ಯಕ್ಸೆಸ್ ಮಾಡಲು, ಸ್ಕ್ರೇಪ್ ಮಾಡಲು, ಎಕ್ಸ್ಟ್ರ್ಯಾಕ್ಟ್ ಮಾಡಲು ಅಥವಾ ನಕಲಿಸಲು ನಿಮ್ಮಿಂದ ಯಾವುದೇ ರೋಬಾಟ್, ಸ್ಪೈಡರ್, ಕ್ರಾಲರ್, ಸ್ಕ್ರೇಪರ್, ಸ್ಕ್ರಿಪ್ಟ್, ಸಾಫ್ಟ್ವೇರ್ ಅಥವಾ ಇತರ ಸ್ವಯಂಚಾಲಿತಗೊಳಿಸಿದ ಅಥವಾ ಅರೆ-ಸ್ವಯಂಚಾಲಿತಗೊಳಿಸಿದ ಮಾರ್ಗಗಳು, ಪ್ರಕ್ರಿಯೆಗಳು ಅಥವಾ ಇಂಟರ್ಫೇಸ್ಗಳ ಬಳಕೆಯ ಪರಿಣಾಮವಾಗಿ ಭಾಗಶಃ ಅಥವಾ ಸಂಪೂರ್ಣವಾಗಿ ರಚಿಸಲಾದ ಕಂಟೆಂಟ್.
ಈ ರೀತಿಯ ವೆಬ್ಸೈಟ್ಗಳು ಅಥವಾ ಪ್ಲ್ಯಾಟ್ಫಾರ್ಮ್ಗಳು: (i) ಆ್ಯಕ್ಸೆಸ್ ಮಾಡಲು ಬಳಕೆದಾರ ಹೆಸರು ಅಥವಾ ಪಾಸ್ವರ್ಡ್ ಅಗತ್ಯ ಇರುವವು; (ii) ನಿರ್ಮಾಣ ಹಂತದಲ್ಲಿ ಇರುವವು; ಅಥವಾ (iii) ಬಳಕೆದಾರರ ಸಾಧನಗಳಿಗೆ ಸಾಫ್ಟ್ವೇರ್ ಡೌನ್ಲೋಡ್ಗಳ ಅಗತ್ಯವಿರುವವು.
b. ಇವುಗಳಿಂದ ಜನರೇಟ್ ಆದ ಯಾವುದೇ ವೆಚ್ಚಗಳನ್ನು ಅರ್ಹ ಆದಾಯದಿಂದ Snap ಹೊರತುಪಡಿಸಬಹುದು:
Snap ತನ್ನ ಸ್ವಂತ ವಿವೇಚನೆ ಮೇರೆಗೆ, ಅಂಗಸಂಸ್ಥೆ ಜೊತೆಗೆ ಜಾಹೀರಾತುದಾರರ ಕೊನೆಯ ಸಂವಹನಕ್ಕೆ (ಅಂದರೆ, ಕೊನೆಯ ಸ್ಪರ್ಶ ಗುಣಲಕ್ಷಣಕ್ಕೆ) ಸಂಬಂಧಪಡಿಸಲಾಗದ್ದು ಎಂದು ನಿರ್ಧರಿಸುವ ಯಾವುದೇ ಮೂಲ.>>
Snap ಪ್ರಚಾರ ಅಭಿಯಾನಗಳಲ್ಲಿ ವಹಿವಾಟುಗಳು.
ರಿಯಾಯಿತಿ ಸೈಟ್ಗಳು, ಪ್ರದರ್ಶಿಸಲು ಕ್ಲಿಕ್ ಮಾಡಿ, ಕ್ಲಿಕ್ ಮಾಡಲು ಹಣ ಪಡೆಯಿರಿ ಅಥವಾ ಕೋಡ್ಗಳನ್ನು ಆಫರ್ ಮಾಡಿ ಸೈಟ್ಗಳು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಪ್ರೋತ್ಸಾಹಕ ಕೂಪನ್ ಅಥವಾ ಕೋಡ್ಗಳನ್ನು ಒದಗಿಸುವ ವೆಬ್ಸೈಟ್ಗಳು.
ಸರ್ಚ್ ಎಂಜಿನ್ ಅಥವಾ ಇತರ ಪೇ-ಪರ್-ಕ್ಲಿಕ್ ಕೀವರ್ಡ್ಗಳು (ಉದಾ. Google ಜಾಹೀರಾತುಗಳು), Snap ನ ಅಥವಾ ಇತರ ಜಾಹೀರಾತುದಾರರ ಟ್ರೇಡ್ಮಾರ್ಕ್ಗಳು ಅಥವಾ ಹೆಸರುಗಳನ್ನು ಅಥವಾ ಬೌದ್ಧಿಕ ಆಸ್ತಿಗಳನ್ನು ಬಳಸುವ ಟ್ರೇಡ್ಮಾರ್ಕ್ಗಳು ಅಥವಾ ಡೊಮೇನ್ ಹೆಸರುಗಳು, ಇದರಲ್ಲಿ ವಂಚನೆಯಿಂದ ಅಥವಾ ಗೊಂದಲಗೊಳಿಸುವ ಮೂಲಕ Snap ನ ಅಥವಾ ಅದರ ಜಾಹೀರಾತುದಾರರ ಟ್ರೇಡ್ಮಾರ್ಕ್ಗಳಂತೆಯೇ ಇರುವ ಯಾವುದೇ ವ್ಯತ್ಯಾಸಗಳು ಅಥವಾ ತಪ್ಪು ಸ್ಪೆಲ್ಲಿಂಗ್ಗಳು ಒಳಗೊಂಡಿವೆ.
ನೀವು ಪ್ರತಿನಿಧಿಸುವ ಅರ್ಹ ಗ್ರಾಹಕರು.
ಜಾಹೀರಾತುದಾರರ ಯಾವುದೇ Snapchat ಖಾತೆಗಳ ಅಮಾನತು ಅಥವಾ ರದ್ದುಮಾಡುವಿಕೆ ಸೇರಿದಂತೆ Snap ನಿಂದ ಕ್ರಮ ಕೈಗೊಳ್ಳುವಿಕೆಗೆ ಜಾಹೀರಾತುದಾರರು ಒಳಪಟ್ಟಿದ್ದಾರೆ.
ಒಂದೋ ಜಾಹೀರಾತುದಾರರು ಪಾವತಿಸದೆ ಇರುವ ಅಥವಾ ರದ್ದುಮಾಡುವಿಕೆಗೆ ಒಳಪಟ್ಟಿರುವ ಆರ್ಡರ್ಗಳು.
(c) ನೀವು ಯಾವುದೇ ನಿಷೇಧಿತ ಚಟುವಟಿಕೆಗಳನ್ನು ನಡೆಸುವುದಿಲ್ಲ.
ಸಾರಾಂಶದಲ್ಲಿ: ಆದಾಯವು ಸ್ಪ್ಯಾಮ್, ಮಾರ್ಗಸೂಚಿಗಳ ಉಲ್ಲಂಘನೆಗಳು, ವಂಚನೆಯ ಅಭ್ಯಾಸಗಳು ಅಥವಾ ಸ್ವಯಂಚಾಲಿತಗೊಳಿಸಿದ ಟ್ರಾಫಿಕ್ಗೆ ಸಂಬಂಧಿಸಿದ್ದರೆ (ಇತರ ವಿಷಯಗಳು ಸೇರಿದಂತೆ) Snap ಅರ್ಹ ಆದಾಯದಿಂದ ಆ ಆದಾಯವನ್ನು ಹೊರತುಪಡಿಸಬಹುದು. ಇದು Snap ನ ಸಮ್ಮತಿಯಿಲ್ಲದೆ ನೀವು ಹೊಂದಿರುವ ಖಾತೆಗಳು, ಸೋಗುಹಾಕುವಿಕೆಗಳು ಮತ್ತು ತೃತೀಯ ಪಕ್ಷದ ನೆಟ್ವರ್ಕ್ಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಸಂಬಂಧಪಡಿಸಲಾಗದ ಮೂಲಗಳು, ಪ್ರೋತ್ಸಾಹಕ ನೀಡುವ ವೆಬ್ಸೈಟ್ಗಳು, ಟ್ರೇಡ್ಮಾರ್ಕ್ ಉಲ್ಲಂಘನೆಗಳು, ಜಾಹೀರಾತುದಾರರ ಅಮಾನತುಗಳು, ನೀವು ಪ್ರತಿನಿಧಿಸುವ ಅರ್ಹ ಗ್ರಾಹಕರು ಅಥವಾ ಪಾವತಿಸದೆ ಇರುವ ಮತ್ತು ರದ್ದುಮಾಡಿದ ಆರ್ಡರ್ಗಳಿಂದ ಆದಾಯವನ್ನು Snap ಹೊರತುಪಡಿಸಬಹುದು.
ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳಿಗೆ ಅನುಸಾರವಾಗಿ ನೀವು ಸ್ವೀಕರಿಸಬಹುದಾದ ಯಾವುದೇ ಪಾವತಿಗಳಿಗೆ ಸಂಬಂಧಿಸಿದ ಯಾವುದೇ ಮತ್ತು ಎಲ್ಲ ತೆರಿಗೆಗಳು, ಕರಗಳು ಮತ್ತು ಶುಲ್ಕಗಳಿಗೆ ನೀವೇ ಜವಾಬ್ದಾರಿ ಹೊಂದಿರುತ್ತೀರಿ ಮತ್ತು ಹೊಣೆಗಾರರಾಗಿರುತ್ತೀರಿ ಎಂದು ನೀವು ಒಪ್ಪುತ್ತೀರಿ ಮತ್ತು ಅಂಗೀಕರಿಸುತ್ತೀರಿ. ಪಾವತಿಗಳು ಯಾವುದೇ ಅನ್ವಯವಾಗುವ ಮಾರಾಟ, ಬಳಕೆ, ಅಬಕಾರಿ, ಮೌಲ್ಯ ವರ್ಧಿತ, ಸರಕು ಮತ್ತು ಸೇವೆಗಳು ಅಥವಾ ನಿಮಗೆ ಪಾವತಿಸಬೇಕಿರುವ ಅದೇ ರೀತಿಯ ತೆರಿಗೆಗಳನ್ನು ಒಳಗೊಂಡಿರುತ್ತವೆ. ಒಂದು ವೇಳೆ ಅನ್ವಯಿಸುವ ಕಾನೂನಿನಡಿಯಲ್ಲಿ, ನಿಮಗೆ ಮಾಡಬೇಕಿರುವ ಯಾವುದೇ ಪಾವತಿಗಳಿಂದ ತೆರಿಗೆಗಳನ್ನು ಕಡಿತ ಮಾಡಬೇಕಿದ್ದರೆ ಅಥವಾ ತಡೆಹಿಡಿಯಬೇಕಿದ್ದರೆ, Snap, ಅದರ ಅಂಗಸಂಸ್ಥೆಗಳು ಅಥವಾ ಅದರ ಪ್ಲ್ಯಾಟ್ಫಾರ್ಮ್ ಪೂರೈಕೆದಾರರು ನಿಮಗೆ ಪಾವತಿಸಬೇಕಿರುವ ಮೊತ್ತದಿಂದ ಅಂತಹ ತೆರಿಗೆಗಳನ್ನು ಕಡಿತ ಮಾಡಬಹುದು ಮತ್ತು ಅನ್ವಯಿಸಿದ ಕಾನೂನಿನಿಂದ ಅಗತ್ಯಪಡಿಸಿರುವಂತೆ ಆ ತೆರಿಗೆಗಳನ್ನು ಸೂಕ್ತ ತೆರಿಗೆ ಪ್ರಾಧಿಕಾರಕ್ಕೆ ಪಾವತಿಸಬಹುದು. ಅಂತಹ ಕಡಿತಗಳು ಅಥವಾ ತಡೆಹಿಡಿಯುವಿಕೆಗಳಿಂದ ನಿಮಗೆ ಕಡಿಮೆ ಮಾಡಲ್ಪಟ್ಟ ಪಾವತಿಗಳು ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳ ಅಡಿಯಲ್ಲಿ ಪಾವತಿಸಬೇಕಾದ ಮೊತ್ತಗಳ ಪೂರ್ಣ ಪಾವತಿ ಮತ್ತು ಇತ್ಯರ್ಥವನ್ನು ರೂಪಿಸುತ್ತವೆ ಎಂದು ನೀವು ಒಪ್ಪುತ್ತೀರಿ ಮತ್ತು ಅಂಗೀಕರಿಸುತ್ತೀರಿ. ಮಾನ್ಯವಾದ ಪಾವತಿ ಖಾತೆಯನ್ನು ಸೆಟ್ ಅಪ್ ಮಾಡುವ ಭಾಗವಾಗಿ, ನೀವು ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳ ಅಡಿಯಲ್ಲಿ ಯಾವುದೇ ಮಾಹಿತಿ ವರದಿ ಮಾಡುವಿಕೆ ಅಥವಾ ತೆರಿಗೆ ತಡೆಹಿಡಿಯುವಿಕೆ ಬಾಧ್ಯತೆಗಳನ್ನು ಪೂರೈಸಲು ಅಗತ್ಯವಿರಬಹುದಾದ ಯಾವುದೇ ನಮೂನೆಗಳು ಅಥವಾ ಡಾಕ್ಯುಮೆಂಟ್ಗಳನ್ನು ನೀವು Snap, ಅದರ ಉಪಸಂಸ್ಥೆಗಳು, ಅಂಗಸಂಸ್ಥೆಗಳು ಮತ್ತು ಯಾವುದೇ ಪ್ಲ್ಯಾಟ್ಫಾರ್ಮ್ ಪೂರೈಕೆದಾರರಿಗೆ ಒದಗಿಸುತ್ತೀರಿ.
ಸಾರಾಂಶದಲ್ಲಿ: ನಿಮ್ಮ ಪಾವತಿಗಳಿಗೆ ಸಂಬಂಧಿಸಿದ ಎಲ್ಲ ತೆರಿಗೆಗಳು, ಕರಗಳು ಅಥವಾ ಶುಲ್ಕಗಳಿಗೆ ನೀವೇ ಜವಾಬ್ದಾರರು. ಅನ್ವಯಿಸುವ ಕಾನೂನುಗಳಿಂದ ಅಗತ್ಯಪಡಿಸಿರುವ ಕಡಿತಗಳನ್ನು ನಾವು ಮಾಡಬಹುದು. ಈ ಉದ್ದೇಶಗಳಿಗಾಗಿ ಅಗತ್ಯವಿರುವ ಯಾವುದೇ ನಮೂನೆಗಳು ಅಥವಾ ಡಾಕ್ಯುಮೆಂಟ್ಗಳನ್ನು ನೀವು ಒದಗಿಸುತ್ತೀರಿ.
ನೀವು ಮತ್ತು Snap (ಈ ವಿಭಾಗದ ಉದ್ದೇಶಕ್ಕಾಗಿ, "ಪಕ್ಷಗಳು") ಎಲ್ಲ ಅನ್ವಯಿಸುವ ಭ್ರಷ್ಟಾಚಾರ ನಿಗ್ರಹ ಕಾನೂನುಗಳು, ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಣೆ ಮಾಡಲು ಒಪ್ಪುತ್ತೀರಿ ಮತ್ತು ಪಕ್ಷದ ಪರವಾಗಿ ಕಾರ್ಯನಿರ್ವಹಿಸುವ ಯಾರಾದರೂ ಅನುಸರಣೆ ಮಾಡುವುದನ್ನು ಅಗತ್ಯಪಡಿಸುತ್ತೀರಿ. ಆ ಅನುಸರಣೆಯು ಇತರ ವಿಷಯಗಳ ಜೊತೆಗೆ ಈ ಮುಂದಿನವುಗಳನ್ನು ಒಳಗೊಂಡಿರುತ್ತದೆ: ಪಕ್ಷಗಳು ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುವ ಯಾರಾದರೂ, ಅನುಕೂಲಕರ ಕ್ರಮವನ್ನು ಪ್ರಚೋದಿಸಲು ಅಥವಾ ಬಹುಮಾನವಾಗಿ ಪಡೆಯಲು, ಕ್ರಮವನ್ನು ಕೈಗೊಳ್ಳದಿರಲು ಅಥವಾ ಪ್ರಭಾವವನ್ನು ಬೀರಲು ಯಾರಿಗೂ ಕೂಡ ಹಣ ಅಥವಾ ಮೌಲ್ಯಯುತವಾದ ಬೇರೆ ಏನನ್ನೂ ಕೊಡುವುದಿಲ್ಲ, ಕೊಡುವ ಭರವಸೆ ನೀಡುವುದಿಲ್ಲ, ಆಫರ್ ಮಾಡುವುದಿಲ್ಲ, ಕೊಡಲು ಒಪ್ಪುವುದಿಲ್ಲ ಅಥವಾ ನೇರವಾಗಿ ಅಥವಾ ಪರೋಕ್ಷವಾಗಿ ಕೊಡುವುದಕ್ಕೆ ದೃಢೀಕರಿಸುವುದಿಲ್ಲ. ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳ ಇತರ ಯಾವುದೇ ನಿಬಂಧನೆಗಳನ್ನು ಪರಿಗಣಿಸದೆ, ಇನ್ನೊಂದು ಪಕ್ಷವು ಈ ನಿಬಂಧನೆಯನ್ನು ಉಲ್ಲಂಘಿಸಿದರೆ ಉಲ್ಲಂಘನೆ ಮಾಡದಿರುವ ಪಕ್ಷವು, ಸೂಚನೆಯ ಮೇರೆಗೆ ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳನ್ನು ಸಮಾಪ್ತಿಗೊಳಿಸಬಹುದು.
ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳ ಅಡಿಯಲ್ಲಿ ಪಕ್ಷಗಳ ಕಾರ್ಯಕ್ಷಮತೆಯು ಎಲ್ಲ ಅನ್ವಯಿಸುವ ಆರ್ಥಿಕ ನಿರ್ಬಂಧಗಳು, ರಫ್ತು ನಿಯಂತ್ರಣ ಕಾನೂನುಗಳು ಮತ್ತು ಬಹಿಷ್ಕಾರ ನಿಗ್ರಹ ಕಾನೂನುಗಳ ಅನುಸರಣೆ ಮಾಡುತ್ತದೆ ಎಂದು ಪಕ್ಷಗಳು ಒಪ್ಪುತ್ತವೆ. ಪಕ್ಷಗಳು ಈ ಮುಂದಿನವುಗಳನ್ನು ಪ್ರತಿನಿಧಿಸುತ್ತವೆ ಮತ್ತು ವಾರಂಟಿ ನೀಡುತ್ತವೆ (1) ಯಾವುದೇ ಪಕ್ಷವೂ (ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳನ್ನು ರೂಪಿಸುವಲ್ಲಿ ತೊಡಗಿಸಿಕೊಂಡಿರುವ ಯಾವುದೇ ಪ್ರಧಾನ, ಉಪಸಂಸ್ಥೆ ಅಥವಾ ಅಂಗಸಂಸ್ಥೆಯು) ಉದಾಹರಣೆಯ ರೂಪದಲ್ಲಿ, U.S. ಹಣಕಾಸು ಕಚೇರಿಯ ವಿದೇಶಿ ಸ್ವತ್ತುಗಳ ನಿಯಂತ್ರಣ ಘಟಕವು ನಿರ್ವಹಿಸುವ U.S. ವಿಶೇಷ ನಿಯೋಜಿತ ರಾಷ್ಟ್ರೀಯರ ಪಟ್ಟಿ ಮತ್ತು ವಿದೇಶಿ ನಿರ್ಬಂಧಗಳನ್ನು ಉಲ್ಲಂಘಿಸಿದವರ ಪಟ್ಟಿ, U.S. ಉದ್ಯಮ ಮತ್ತು ಭದ್ರತೆಗಳ ಆಯೋಗವು ನಿರ್ವಹಿಸುವ ನಿರಾಕರಿಸಿದವರ ಪಟ್ಟಿ, ಪರಿಶೀಲಿಸಿಲ್ಲದ ಪಟ್ಟಿ ಮತ್ತು ಘಟಕಗಳ ಪಟ್ಟಿ (“ನಿರ್ಬಂಧಿತ ಪಕ್ಷದ ಪಟ್ಟಿಗಳು”) ಸೇರಿದಂತೆ, ಯಾವುದೇ ಸಂಬಂಧಿಸಿದ ಸರ್ಕಾರಿ ಪ್ರಾಧಿಕಾರ ನಿರ್ವಹಿಸುವ ಯಾವುದೇ ನಿರ್ಬಂಧಿತ ಪಕ್ಷದ ಪಟ್ಟಿಯಲ್ಲಿ ಸೇರಿಸಲ್ಪಟ್ಟಿಲ್ಲ ಮತ್ತು (2) ಅಂತಹ ಪಕ್ಷವು ನಿರ್ಬಂಧಿತ ಪಕ್ಷದ ಪಟ್ಟಿಯಲ್ಲಿರುವ ಯಾರದೇ ಮಾಲೀಕತ್ವ ಹೊಂದಿಲ್ಲ ಅಥವಾ ಯಾರಿಂದಲೂ ನಿಯಂತ್ರಿಸಲ್ಪಡುತ್ತಿಲ್ಲ. ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳನ್ನು ನಿರ್ವಹಿಸುವಾಗ, ನಿರ್ಬಂಧಿತ ಪಕ್ಷದ ಪಟ್ಟಿಯಲ್ಲಿರುವ ಯಾರೊಂದಿಗೂ ಅಥವಾ ಯಾವುದೇ ಅನ್ವಯಿಸುವ ನಿರ್ಬಂಧಗಳಿಂದ ವ್ಯಾಪಾರವನ್ನು ನಿಷೇಧಿಸಲಾಗಿರುವ ಯಾವುದೇ ದೇಶದೊಂದಿಗೂ ಅಂತಹ ಪಕ್ಷವು ನೇರವಾಗಿ ಅಥವಾ ಪರೋಕ್ಷವಾಗಿ, ವ್ಯವಹಾರವನ್ನು ನಡೆಸುವುದಿಲ್ಲ ಅಥವಾ ಸರಕುಗಳು ಅಥವಾ ಸೇವೆಗಳನ್ನು ಒದಗಿಸುವುದಿಲ್ಲ. ಒಂದು ವೇಳೆ ಕ್ರಮ ಕೈಗೊಳ್ಳುವಿಕೆ ಅಥವಾ ಕೈಗೊಳ್ಳದಿರುವಿಕೆಯು ಯಾವುದೇ ಅನ್ವಯಿಸುವ ಅಧಿಕಾರ ವ್ಯಾಪ್ತಿಯ ಕಾನೂನುಗಳನ್ನು ಉಲ್ಲಂಘಿಸುವುದಾದರೆ, ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳಿಗೆ ಸಂಬಂಧಿಸಿ Snap ಅಂತಹ ಕ್ರಮವನ್ನು ಕೈಗೊಳ್ಳಬೇಕಾದ ಅಥವಾ ಕೈಗೊಳ್ಳುವುದರಿಂದ ದೂರ ಉಳಿಯಬೇಕಾದ ಅಗತ್ಯವಿಲ್ಲ ಎಂದು ನೀವು ಒಪ್ಪುತ್ತೀರಿ.
ನೀವು (ಅಥವಾ ಅನ್ವಯಿಸುವುದಾದರೆ, ವ್ಯವಹಾರ ಘಟಕವು) ನಮ್ಮ, ಅಥವಾ ನಮ್ಮ ಪ್ಲ್ಯಾಟ್ಫಾರ್ಮ್ ಪೂರೈಕೆದಾರರ ಅನುಸರಣಾ ವಿಮರ್ಶೆಯಲ್ಲಿ ತೇರ್ಗಡೆಯಾಗದಿದ್ದರೆ, ಪಾವತಿಗೆ ನೀವು ಅರ್ಹರಾಗಿರುವುದಿಲ್ಲ. ಅಂತಹ ವಿಮರ್ಶೆಯಲ್ಲಿ, ಯಾವುದೇ ಸಂಬಂಧಿಸಿದ ಸರ್ಕಾರಿ ಪ್ರಾಧಿಕಾರವು ನಿರ್ವಹಿಸುವ ಯಾವುದೇ ನಿರ್ಬಂಧಿತ ಪಕ್ಷದ ಪಟ್ಟಿಯಲ್ಲಿ ನೀವು ಕಾಣಿಸಿಕೊಂಡಿದ್ದೀರಾ ಎಂದು ನಿರ್ಧರಿಸಲು ಪರೀಕ್ಷಿಸುವುದು ಸೇರಿರಬಹುದು ಆದರೆ ಇಷ್ಟಕ್ಕೆ ಸೀಮಿತವಾಗಿರುವುದಿಲ್ಲ. ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳಲ್ಲಿ ವಿವರಿಸಿರುವ ಯಾವುದೇ ಇತರ ಬಳಕೆಗಳಿಗೆ ಹೆಚ್ಚುವರಿಯಾಗಿ, ನಿಮ್ಮ ಗುರುತನ್ನು ಪರಿಶೀಲಿಸುವುದಕ್ಕಾಗಿ, ನಮ್ಮ ಅನುಸರಣಾ ವಿಮರ್ಶೆಗಳನ್ನು ನಡೆಸುವುದಕ್ಕಾಗಿ, ಮತ್ತು ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಕ್ಕಾಗಿ ನೀವು ನಮಗೆ ಒದಗಿಸುವ ಮಾಹಿತಿಯನ್ನು ತೃತೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಬಹುದು.
ಸಾರಾಂಶದಲ್ಲಿ: ನೀವು ಮತ್ತು Snap ಇಬ್ಬರೂ, ಮೇಲೆ ಹೇಳಿರುವಂತೆ ಅನ್ವಯಿಸುವ ಭ್ರಷ್ಟಾಚಾರ ನಿಗ್ರಹ ಕಾನೂನುಗಳು, ಆರ್ಥಿಕ ನಿರ್ಬಂಧಗಳು, ರಫ್ತು ನಿಯಂತ್ರಣ ಕಾನೂನುಗಳು ಮತ್ತು ಬಹಿಷ್ಕಾರ ನಿಗ್ರಹ ಕಾನೂನುಗಳನ್ನು ಅನುಸರಣೆ ಮಾಡುತ್ತೀರಿ. ಪಾವತಿಯನ್ನು ಪಡೆಯಲು ಅರ್ಹರಾಗುವುದಕ್ಕಾಗಿ, ನೀವು ಅನುಸರಣಾ ವಿಮರ್ಶೆಯಲ್ಲಿ ತೇರ್ಗಡೆಯಾಗಬೇಕು.
a. Snap ನ ಪೂರ್ವ ಲಿಖಿತ ಸಮ್ಮತಿಯಿಲ್ಲದೆ Snap ನ ಗೌಪ್ಯ ಮಾಹಿತಿಯನ್ನು ಯಾವುದೇ ತೃತೀಯ ಪಕ್ಷಕ್ಕೆ ನೀವು ಹಂಚಿಕೊಳ್ಳುವುದಿಲ್ಲ. Snap ನೋಟಿಸ್ ಸ್ವೀಕರಿಸಬಾರದು ಎಂದು ನ್ಯಾಯಾಲಯ ಆದೇಶ ಮಾಡಿದ ಹೊರತು, ನೀವು Snap ಗೆ ಸಮಂಜಸವಾದ ಪೂರ್ವ ಸೂಚನೆ ನೀಡಿದಲ್ಲಿ ಕಾನೂನಿನಿಂದ ಹಾಗೆ ಮಾಡಬೇಕಾದ ಒತ್ತಾಯವಿರುವಾಗ ನೀವು Snap ಗೌಪ್ಯತೆಯ ಮಾಹಿತಿಯನ್ನು ಬಹಿರಂಗಪಡಿಸಬಹುದು.
b. Snap ನ ವಿನಂತಿಯ ಮೇರೆಗೆ ಅಥವಾ ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳನ್ನು ಸಮಾಪ್ತಿಗೊಳಿಸಿದಾಗ ನಿಮ್ಮ ಸ್ವಾಧೀನದಲ್ಲಿ ಅಥವಾ ನಿಯಂತ್ರಣದಲ್ಲಿ ಇರುವ ಎಲ್ಲ Snap ಗೌಪ್ಯ ಮಾಹಿತಿಯನ್ನು ನೀವು ತಕ್ಷಣವೇ ಅಳಿಸುತ್ತೀರಿ. Snap ನ ವಿನಂತಿಯ ಮೇರೆಗೆ, ನಿಮ್ಮ ಅಳಿಸುವಿಕೆ ಮತ್ತು ನಾಶಪಡಿಸುವಿಕೆಯನ್ನು ನೀವು ಪ್ರಮಾಣೀಕರಿಸುತ್ತೀರಿ.
"Snap ಗೌಪ್ಯ ಮಾಹಿತಿ" ಅಂದರೆ, ಸ್ಪಷ್ಟತೆಗಾಗಿ, ಬೆಲೆನಿಗದಿ, ನಿಮ್ಮಿಂದ ಅಥವಾ Snap ನಿಂದ ಪಾವತಿಸಬೇಕಿರುವ ಯಾವುದೇ ಮೊತ್ತಗಳು ಮತ್ತು ಯಾವುದೇ ಆರ್ಡರ್ ಫಾರ್ಮ್ಗಳು, ಸೇರ್ಪಡೆಗಳು, ಅಥವಾ ನಿಮ್ಮ ಮತ್ತು Snap ಅಥವಾ Snap ನ ಅಂಗಸಂಸ್ಥೆಗಳ ನಡುವಿನ ತಿದ್ದುಪಡಿಗಳು ಸೇರಿದಂತೆ, ಆದರೆ ಈಗಾಗಲೇ ನೀವು ಕಾನೂನುಬದ್ಧವಾಗಿ ತಿಳಿದಿರುವ, ನಿಮ್ಮದಲ್ಲದ ತಪ್ಪಿನಿಂದ ಸಾರ್ವಜನಿಕಗೊಳ್ಳುವ, ನೀವು ಸ್ವತಂತ್ರವಾಗಿ ಅಭಿವೃದ್ಧಿಪಡಿಸಿರುವ ಅಥವಾ ಗಾಪ್ಯತೆಯ ಬಾಧ್ಯತೆಯನ್ನು ಹೊಂದಿಲ್ಲದಿರುವ ತೃತೀಯ ಪಕ್ಷದಿಂದ ನಿಮಗೆ ಕಾನೂನುಬದ್ಧವಾಗಿ ನೀಡಲಾಗಿರುವುದನ್ನು ಒಳಗೊಂಡಿಲ್ಲದಿರುವ, ಗೌಪ್ಯ ಎಂದು ಗುರುತು ಮಾಡಲಾಗಿರುವ ಅಥವಾ Snap ಗೆ ಗೌಪ್ಯ ಎಂದು ಸಮಂಜಸವಾಗಿ ಅರ್ಥಮಾಡಿಕೊಳ್ಳಬಹುದಾದ ಯಾವುದೇ ಸಾಮಗ್ರಿಗಳು, ಡಾಕ್ಯುಮೆಂಟೇಶನ್, ಸಂವಹನ ಮತ್ತು ಮಾಹಿತಿ ಆಗಿರುತ್ತದೆ.
a. Snap ಅಂಗಸಂಸ್ಥೆ ಪ್ರೊಗ್ರಾಂನಲ್ಲಿ ಭಾಗವಹಿಸುವ ಸಲುವಾಗಿ ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳಿಗೆ ನೀವು ಅನುಸರಣೆ ಹೊಂದಿರಬೇಕು. ನೀವು ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳೊಂದಿಗೆ ಅನುಸರಣೆ ಹೊಂದಿಲ್ಲದಿದ್ದರೆ, ಇನ್ನುಮುಂದೆ ನಿಮಗೆ Snap ಅಂಗಸಂಸ್ಥೆ ಪ್ರೊಗ್ರಾಂನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಮತ್ತು ನಾವು ಸೂಕ್ತ ಎಂದು ಪರಿಗಣಿಸುವ ಇತರ ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದು ಸೇರಿದಂತೆ, ಸೇವೆಗಳಿಗೆ ನಿಮ್ಮ ಆ್ಯಕ್ಸೆಸ್ ಅನ್ನು ಅಮಾನತುಗೊಳಿಸುವುದು ಅಥವಾ ಶಾಶ್ವತವಾಗಿ ಹಿಂಪಡೆಯುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಮುಂದುವರಿದು, ಕಾನೂನಿನಿಂದ ಅನುಮತಿಸಿರುವ ಮಟ್ಟಿಗೆ, ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳ ಅನುಸರಣೆ ಮಾಡದಿರುವುದಕ್ಕಾಗಿ ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳ ಅಡಿಯಲ್ಲಿ ಯಾವುದೇ ಪಾವತಿಗಳನ್ನು ತಡೆಹಿಡಿಯುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ (ಮತ್ತು ಸ್ವೀಕರಿಸಲು ನೀವು ಅರ್ಹರಲ್ಲ ಎಂಬುದನ್ನು ನೀವು ಒಪ್ಪುತ್ತೀರಿ). ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳಿಗೆ ನೀವು ಯಾವುದೇ ಸಮಯದಲ್ಲಿ ಒಪ್ಪದಿದ್ದರೆ, ಅನ್ವಯಿಸುವ ಸೇವೆಗಳನ್ನು ಬಳಸುವುದನ್ನು ನೀವು ತಕ್ಷಣವೇ ನಿಲ್ಲಿಸಬೇಕು.
b. ನೀವು ಇವುಗಳನ್ನು ಮಾಡಿದ್ದೀರಿ ಎಂದು ನಾವು ಶಂಕಿಸಿದರೆ Snap ಅಂಗಸಂಸ್ಥೆ ಪ್ರೊಗ್ರಾಂನಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ತಕ್ಷಣವೇ ಸಮಾಪ್ತಿಗೊಳಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ: (i) ಯಾವುದೇ ಅನ್ವಯಿಸುವ ಕಾನೂನುಗಳು ಅಥವಾ ನಿಬಂಧನೆಗಳನ್ನು ಉಲ್ಲಂಘಿಸಿದ್ದೀರಿ; (ii) ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳನ್ನು ಉಲ್ಲಂಘಿಸಿದ್ದೀರಿ; (iii) Snap ತನ್ನ ಸ್ವಂತ ವಿವೇಚನೆಯ ಮೇರೆಗೆ, Snap ಅಥವಾ ತನ್ನ ಅಂಗಸಂಸ್ಥೆಗಳಿಗೆ ಅಪಖ್ಯಾತಿ ತರಬಹುದು ಎಂದು ನಿರ್ಧರಿಸುವ ಯಾವುದೇ ವರ್ತನೆಯನ್ನು ಮಾಡಿದ್ದೀರಿ; ಅಥವಾ (iv) ಯಾವುದೇ ನಿಷೇಧಿತ ಚಟುವಟಿಕೆಗಳನ್ನು ಮಾಡಿದ್ದೀರಿ.
c. ಅನ್ವಯಿಸುವ ಕಾನೂನುಗಳಿಂದ ಅನುಮತಿಸಲಾಗಿರುವ ಗರಿಷ್ಠ ಮಟ್ಟಕ್ಕೆ, ನಿಮಗೆ ಪೂರ್ವ ಸೂಚನೆ ನೀಡದೆ ಅಥವಾ ಬಾಧ್ಯತೆಯಿಲ್ಲದೆ, ನಮ್ಮ ಸ್ವಂತ ವಿವೇಚನೆ ಮೇರೆಗೆ, ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಕ್ಕಾಗಿ Snap ಅಂಗಸಂಸ್ಥೆ ಪ್ರೊಗ್ರಾಂ ಅಥವಾ ಯಾವುದೇ ಇತರ ಸೇವೆಗಳನ್ನು ಮುಂದುವರಿಸದಿರುವ, ಮಾರ್ಪಡಿಸುವ, ಆಫರ್ ಮಾಡದಿರುವ ಅಥವಾ ಆಫರ್ ಮಾಡುವುದನ್ನು ಅಥವಾ ಬೆಂಬಲಿಸುವುದನ್ನು ನಿಲ್ಲಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಮೇಲೆ ಹೇಳಿರುವ ಯಾವುದಾದರೂ ಎಲ್ಲ ಸಮಯಗಳಲ್ಲೂ ಅಥವಾ ಯಾವುದೇ ನಿರ್ದಿಷ್ಟ ಸಮಯದಲ್ಲಿ ಲಭ್ಯವಿರುತ್ತದೆ ಎಂದಾಗಲೀ ಅಥವಾ ಮೇಲೆ ಹೇಳಿರುವ ಯಾವುದನ್ನಾದರೂ ಯಾವುದೇ ನಿರ್ದಿಷ್ಟ ಸಮಯಾವಧಿಯವರೆಗೆ ಒದಗಿಸುವುದನ್ನು ಮುಂದುವರಿಸುತ್ತೇವೆ ಎಂದಾಗಲೀ ನಾವು ಖಾತರಿ ನೀಡುವುದಿಲ್ಲ. ಯಾವುದೇ ಕಾರಣಕ್ಕಾಗಿ ನೀವು Snap ಅಂಗಸಂಸ್ಥೆ ಪ್ರೊಗ್ರಾಂ ಅಥವಾ ಯಾವುದೇ ಸೇವೆಗಳ ನಿರಂತರ ಲಭ್ಯತೆಯ ಮೇಲೆ ಅವಲಂಬಿತರಾಗಬಾರದು.
ಸಾರಾಂಶದಲ್ಲಿ: ಯಾವುದೇ ಸಮಯದಲ್ಲಿ ಯಾವುದೇ ಕಾರಣಕ್ಕಾಗಿ Snap ಅಂಗಸಂಸ್ಥೆ ಪ್ರೊಗ್ರಾಂನಲ್ಲಿ ನಿಮ್ಮ ತೊಡಗಿಸಿಕೊಳ್ಳುವಿಕೆಯನ್ನು ನಾವು ನಿರ್ಬಂಧಿಸಬಹುದು ಅಥವಾ ಸಮಾಪ್ತಿಗೊಳಿಸಬಹುದು, ಅಥವಾ Snap ಅಂಗಸಂಸ್ಥೆ ಪ್ರೊಗ್ರಾಂ ಅನ್ನು ಮಾರ್ಪಾಡು, ಅಮಾನತು ಅಥವಾ ಸಮಾಪ್ತಿ ಮಾಡಬಹುದು.
a. ನೀವು ಇವುಗಳನ್ನು ಪ್ರತಿನಿಧಿಸುತ್ತೀರಿ ಮತ್ತು ವಾರಂಟಿ ನೀಡುತ್ತೀರಿ: (i) Snap ಅಂಗಸಂಸ್ಥೆ ಪ್ರೊಗ್ರಾಂನಲ್ಲಿ ಭಾಗವಹಿಸಲು ಮತ್ತು ಈ Snap ಅಂಗಸಂಸ್ಥೆ ನಿಯಮಗಳಿಗೆ ಪ್ರವೇಶಿಸಲು ನೀವು ಅಧಿಕಾರ ಹೊಂದಿದ್ದೀರಿ ಹಾಗೂ ಇಲ್ಲಿ ಹೇಳಲಾಗಿರುವ ಯಾವುದೇ ಪರವಾನಗಿಗಳನ್ನು ನೀಡಲು ಸಾಕಷ್ಟು ಹಕ್ಕುಗಳನ್ನು ಹೊಂದಿದ್ದೀರಿ; (ii) ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳ ಅಡಿಯಲ್ಲಿ ನಿಮ್ಮ ಎಲ್ಲ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ನಿರ್ವಹಿಸುವುದಕ್ಕಾಗಿ, ನಿಯಮಗಳ ಅನುಸರಣೆ ಮಾಡುತ್ತೀರಿ; ಮತ್ತು (iii) ಯಾವುದೇ ನಿಷೇಧಿತ ಚಟುವಟಿಕೆಗಳನ್ನು ನಡೆಸುವುದಿಲ್ಲ.
b. ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳು ನಿಮ್ಮ ಮತ್ತು Snap ನಡುವೆ ಯಾವುದೇ ಏಜೆನ್ಸಿ, ಪಾಲುದಾರಿಕೆ ಅಥವಾ ಜಂಟಿ ಉದ್ಯಮವನ್ನು ಸ್ಥಾಪಿಸುವುದಿಲ್ಲ.
c. ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳು ಅಥವಾ Snap ಅಂಗಸಂಸ್ಥೆ ಪ್ರೊಗ್ರಾಂನಿಂದ ಉದ್ಭವಿಸುವ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಕ್ರಮದಲ್ಲಿ, ಅನುಕೂಲಕರ ತೀರ್ಪು ಪಡೆಯುವ ಪಕ್ಷವು ತನ್ನ ಸಮಂಜಸ ಕಾನೂನು ಶುಲ್ಕಗಳು ಮತ್ತು ವೆಚ್ಚಗಳನ್ನು ಮರಳಿಪಡೆಯುವ ಹಕ್ಕನ್ನು ಹೊಂದಿರುತ್ತದೆ.
d. ಯಾವುದೇ ಸಮಯದಲ್ಲಿ ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳನ್ನು Snap ಅಪ್ಡೇಟ್ ಮಾಡಬಹುದು. ಪರಿಷ್ಕರಿಸಿದ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳನ್ನು ನಾವು ನಮ್ಮ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದಾಗ ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳಿಗೆ ಯಾವುದೇ ಬದಲಾವಣೆಗಳು ಜಾರಿಗೆ ಬರುತ್ತವೆ. ಆ ಅಪ್ಡೇಟ್ಗಳು ಜಾರಿಗೆ ಬಂದ ಬಳಿಕ ನೀವು Snap ಅಂಗಸಂಸ್ಥೆ ಪ್ರೊಗ್ರಾಂನಲ್ಲಿ ಭಾಗವಹಿಸಿದರೆ ಆ ಅಪ್ಡೇಟ್ಗಳಿಗೆ ಬದ್ಧರಾಗಿರಲು ನೀವು ಒಪ್ಪುತ್ತೀರಿ. ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳಲ್ಲಿ ಬೇರೆ ರೀತಿ ಹೇಳಿರುವುದನ್ನು ಹೊರತುಪಡಿಸಿ ಅಥವಾ Snap ಸಹಿ ಮಾಡಿರುವ ಲಿಖಿತ ರೂಪದ ಒಪ್ಪಂದದಲ್ಲಿ ಸ್ಪಷ್ಟವಾಗಿ ಒಪ್ಪಿಕೊಳ್ಳದ ಹೊರತು, ಬೇರೆ ಯಾವುದೇ ಒಪ್ಪಂದದಲ್ಲಿ ಒಳಗೊಂಡಿರುವ ಯಾವುದೂ ಕೂಡ ಯಾವುದೇ ರೀತಿಯಲ್ಲಿ ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳನ್ನು ಮಾರ್ಪಾಡು, ಸೂಪರ್ಸೀಡ್ ಮಾಡುವುದಿಲ್ಲ ಅಥವಾ ಯಾವುದೇ ಹೆಚ್ಚುವರಿ ನಿಯಮಗಳು ಅಥವಾ ಷರತ್ತುಗಳನ್ನು ಸೇರಿಸುವುದಿಲ್ಲ.
e. ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳು ಅಥವಾ Snap ಸೇವೆಯ ನಿಯಮಗಳ ನಡುವೆ ಸಂಘರ್ಷ ಅಥವಾ ಅಸಂಗತತೆ ಕಂಡುಬಂದರೆ, ಆದ್ಯತೆಯ ಅನುಕ್ರಮವು ಹೀಗಿರುತ್ತದೆ: ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳು ಮತ್ತು Snap ಸೇವೆಯ ನಿಯಮಗಳು.
f. ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳ ಅಡಿಯಲ್ಲಿನ ಎಲ್ಲ ಹಕ್ಕುಗಳು ಮತ್ತು ಬಾಧ್ಯತೆಗಳು ಸೇರಿದಂತೆ, ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳನ್ನು Snap ತನ್ನ ಯಾವುದೇ ಅಂಗಸಂಸ್ಥೆಗಳಿಗೆ ನಿಯೋಜಿಸಬಹುದು.
g. ನಿಮ್ಮ ಅನುಕೂಲಕ್ಕಾಗಿ ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳನ್ನು ಇಂಗ್ಲಿಷ್ಗೆ ಹೊರತಾದ ಭಾಷೆಯಲ್ಲಿ Snap ಪ್ರಸ್ತುತಪಡಿಸಬಹುದು, ಆದರೆ ನೀವು ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳ ಇಂಗ್ಲಿಷ್ ಆವೃತ್ತಿಯನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದೀರಿ. ಇಂಗ್ಲಿಷ್ನಲ್ಲಿರುವ ಮತ್ತು ಬೇರೆ ಯಾವುದೇ ಭಾಷೆಯಲ್ಲಿರುವ ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳ ನಡುವೆ ಸಂಘರ್ಷ ಅಥವಾ ಅಸಂಗತತೆ ಇದ್ದರೆ, ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳ ಇಂಗ್ಲಿಷ್ ಆವೃತ್ತಿಯು ನಿಯಂತ್ರಣ ಹೊಂದಿರುತ್ತದೆ.
ಸಾರಾಂಶದಲ್ಲಿ: ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳು Snap ಜೊತೆಗೆ ಏಜೆನ್ಸಿ ಅಥವಾ ಪಾಲುದಾರಿಕೆಯನ್ನು ರಚಿಸುವುದಿಲ್ಲ. ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳಿಗೆ ಸಂಬಂಧಿಸಿದ ಕಾನೂನು ಕ್ರಮಗಳಲ್ಲಿ, ಗೆಲ್ಲುವ ಪಕ್ಷವು ಕಾನೂನು ಶುಲ್ಕಗಳನ್ನು ವಸೂಲಿ ಮಾಡಬಹುದು. Snap ಯಾವುದೇ ಸಮಯದಲ್ಲಿ ನಿಯಮಗಳನ್ನು ಅಪ್ಡೇಟ್ ಮಾಡಬಹುದು ಮತ್ತು ಪೋಸ್ಟ್ ಮಾಡಿದ ಬಳಿಕ ಬದಲಾವಣೆಗಳು ಜಾರಿಗೆ ಬರುತ್ತವೆ. ನಿಯಮಗಳು ಸಂಘರ್ಷಿಸಿದರೆ, ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳು Snap ಸೇವೆಯ ನಿಯಮಗಳ ಮೇಲೆ ಮೇಲುಗೈ ಹೊಂದಿರುತ್ತವೆ. ಈ Snap ಅಂಗಸಂಸ್ಥೆ ಪ್ರೊಗ್ರಾಂ ನಿಯಮಗಳ ಅಡಿಯಲ್ಲಿ Snap ಹಕ್ಕುಗಳನ್ನು ನಿಯೋಜಿಸಬಹುದು ಯಾವುದೇ ಅನುವಾದಗಳ ಹೊರತಾಗಿ ನಿಯಮಗಳ ಇಂಗ್ಲಿಷ್ ಆವೃತ್ತಿಯು ಅಧಿಕಾರಯುತವಾಗಿರುತ್ತದೆ.
ಈ Snap ಅಂಗಸಂಸ್ಥೆ ನಿಯಮಗಳ ಕುರಿತು ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.