ದಯವಿಟ್ಟು ಗಮನಿಸಿ: ನಾವು ಈ SNAP ಹಣಗಳಿಕೆ ನಿಯಮಗಳನ್ನು ಅಪ್‌ಡೇಟ್ ಮಾಡಿದ್ದೇವೆ. ಹಿಂದಿನ ಆವೃತ್ತಿಯು ಇಲ್ಲಿ ಲಭ್ಯವಿದೆ. ಈ ಪರಿಷ್ಕೃತ SNAP ಹಣಗಳಿಕೆ ನಿಯಮಗಳು ಕೆಳಗಿನ ದಿನಾಂಕದಂದು ಜಾರಿಗೆ ಬರುತ್ತವೆ.
Snap ಹಣಗಳಿಕೆ ನಿಯಮಗಳು
ಪರಿಣಾಮಕಾರಿ ದಿನಾಂಕ: 1 ನವೆಂಬರ್ 2025
ಸ್ವಾಗತ! Snap ನ ಹಣಗಳಿಕೆ ಪ್ರೊಗ್ರಾಂನಲ್ಲಿ ("ಪ್ರೊಗ್ರಾಂ") ನೀವು ಆಸಕ್ತರಾಗಿರುವ ಕುರಿತು ನಾವು ಹರ್ಷಿತರಾಗಿದ್ದೇವೆ, ಇದು ನಾವು "ಅರ್ಹತೆ ಪಡೆಯುವ ಚಟುವಟಿಕೆ" ಎಂದು ವ್ಯಾಖ್ಯಾನಿಸಿರುವ ಮತ್ತು ಮುಂದುವರಿದು ಕೆಳಗೆ ವಿವರಿಸಿರುವ ಈ ಹಣಗಳಿಕೆ ನಿಯಮಗಳಿಂದ ಒಳಗೊಳ್ಳಲ್ಪಡುವ ಕೆಲವು ಸೇವೆಗಳನ್ನು ಮಾಡುವುದಕ್ಕಾಗಿ ಹಣದ ರೂಪದಲ್ಲಿ ಪ್ರೋತ್ಸಾಹವನ್ನು ಸ್ವೀಕರಿಸಲು ಪ್ರೊಗ್ರಾಂಗೆ ಸೇರಿಸಿಕೊಳ್ಳಲಾಗಿರುವ ಅರ್ಹ ಬಳಕೆದಾರರಿಗೆ ಅವಕಾಶ ಕಲ್ಪಿಸುತ್ತದೆ. ಪ್ರೊಗ್ರಾಂನಲ್ಲಿ ನಿಮ್ಮ ಭಾಗವಹಿಸುವಿಕೆಗೆ ಅನ್ವಯಿಸುವ ಮತ್ತು ನಿಯಂತ್ರಿಸುವ ನಿಯಮಗಳನ್ನು ನೀವು ತಿಳಿದುಕೊಳ್ಳುವ ಸಲುವಾಗಿ ನಾವು ಈ ಹಣಗಳಿಕೆ ನಿಯಮಗಳನ್ನು ರೂಪಿಸಿದ್ದೇವೆ. ಈ ಹಣಗಳಿಕೆ ನಿಯಮಗಳು ನಿಮ್ಮ ಮತ್ತು Snap ಕ್ರಿಯೇಟರ್ ಪಾವತಿ ನಿಯಮಗಳಲ್ಲಿ ಪಟ್ಟಿ ಮಾಡಲಾಗಿರುವ Snap ಘಟಕದ ನಡುವೆ ಕಾನೂನು ಬಾಧ್ಯತೆಯ ಕರಾರನ್ನು ರೂಪಿಸುತ್ತವೆ, ಆದ್ದರಿಂದ ದಯವಿಟ್ಟು ಅವುಗಳನ್ನು ಗಮನವಿಟ್ಟು ಓದಿ. ಈ ಹಣಗಳಿಕೆ ನಿಯಮಗಳನ್ನು ಸ್ವೀಕರಿಸುವ ಮತ್ತು ಅನುಸರಣೆ ಮಾಡುವ ಬಳಕೆದಾರರು ಮಾತ್ರ ಪ್ರೊಗ್ರಾಂನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಈ ನಿಯಮಗಳು ಉಲ್ಲೇಖದ ಮೂಲಕ Snap ಕ್ರಿಯೇಟರ್ ಪಾವತಿ ನಿಯಮಗಳು ಮತ್ತು Snap ಸೇವೆಯ ನಿಯಮಗಳು ಮತ್ತು ಯಾವುದೇ ಇತರ ಅನ್ವಯಿಸುವ ಮಾರ್ಗಸೂಚಿಗಳು ಮತ್ತು ನೀತಿಗಳನ್ನು ಒಳಗೊಳ್ಳುತ್ತವೆ. ಈ ನಿಯಮಗಳು ಇತರ ನಿಯಮಗಳೊಂದಿಗೆ ಸಂಘರ್ಷ ಹೊಂದಿದ್ದರೆ, ಕಾರ್ಯಕ್ರಮದಲ್ಲಿ ನಿಮ್ಮ ಭಾಗವಹಿಸುವಿಕೆಗೆ ಸಂಬಂಧಿಸಿ ಈ ನಿಯಮಗಳು ನಿಯಂತ್ರಿಸುತ್ತವೆ
ಈ ಹಣಗಳಿಕೆ ನಿಯಮಗಳಲ್ಲಿ ನಾವು ಸಾರಾಂಶವನ್ನು ಒದಗಿಸಿರುವಲ್ಲಿ, ನಿಮ್ಮ ಅನುಕೂಲಕ್ಕಾಗಿ ಮಾತ್ರ ನಾವು ಹಾಗೆ ಮಾಡಿದ್ದೇವೆ. ನಿಮ್ಮ ಕಾನೂನು ಹಕ್ಕುಗಳು ಮತ್ತು ಬಾಧ್ಯತೆಗಳನ್ನು ಅರ್ಥಮಾಡಿಕೊಳ್ಳಲು ಈ ಹಣಗಳಿಕೆ ನಿಯಮಗಳನ್ನು ನೀವು ಪೂರ್ಣವಾಗಿ ಓದಬೇಕು.
ಪ್ರೊಗ್ರಾಂ ಕೇವಲ ಆಹ್ವಾನದ ಮೂಲಕ ಮಾತ್ರ ತೆರೆದಿದೆ. ಪಾವತಿಗಾಗಿ ಕನಿಷ್ಠ ಅರ್ಹತೆಯು ಕ್ರಿಯೇಟರ್ ಪಾವತಿ ನಿಯಮಗಳಲ್ಲಿ ತಿಳಿಸಲಾಗಿರುವಂತೆ ಇರುತ್ತದೆ. ನೀವು ಕನಿಷ್ಠ ಅರ್ಹತಾ ಅಗತ್ಯಗಳನ್ನು ಪೂರೈಸಿದರೆ ಹಾಗೂ ಕಾರ್ಯಕ್ರಮಕ್ಕೆ ಆಹ್ವಾನಿಸಲ್ಪಟ್ಟರೆ, ಆಗ ಅರ್ಹತೆ ಪಡೆಯುವ ಚಟುವಟಿಕೆಯನ್ನು ನಿರ್ವಹಿಸುವುದಕ್ಕಾಗಿ ನಿಮಗೆ ಪಾವತಿಸುವ ಮೂಲಕ Snap ನಿಮಗೆ ಬಹುಮಾನ ನೀಡಬಹುದು, ಏಕೆಂದರೆ ಆ ನಿಯಮವನ್ನು ಕ್ರಿಯೇಟರ್ ಪಾವತಿ ನಿಯಮಗಳಲ್ಲಿ ವ್ಯಾಖ್ಯಾನಿಸಲಾಗಿದೆ.
ಅರ್ಹತೆ ಪಡೆಯುವ ಚಟುವಟಿಕೆಗಳಲ್ಲಿ ಇವು ಸೇರಿರಬಹುದು:
ನಾವು ಜಾಹೀರಾತುಗಳನ್ನು ವಿತರಿಸುವ ಅಥವಾ ಜಾಹೀರಾತುಗಳಾಗಿ ವಿತರಿಸುವಂತಹ ಸಾರ್ವಜನಿಕ ವಿಷಯವನ್ನು ಪೋಸ್ಟ್ ಮಾಡುವುದು; ಅಥವಾ
ನಾವು ಅಗತ್ಯಪಡಿಸಬಹುದಾದ ಯಾವುದೇ ಹೆಚ್ಚುವರಿ ನಿಯಮಗಳನ್ನು (ಅವುಗಳನ್ನು ಈ ಹಣಗಳಿಕೆ ನಿಯಮಗಳಲ್ಲಿ ಅಳವಡಿಸಿಕೊಳ್ಳಲಾಗುತ್ತದೆ) ನೀವು ಸ್ವೀಕರಿಸುವುದಕ್ಕೆ ಒಳಪಟ್ಟು, ನಾವು ಅರ್ಹತೆ ಪಡೆಯುವ ಚಟುವಟಿಕೆ ಎಂದು ನಿಯೋಜಿಸುವ ಯಾವುದೇ ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು.
ಅರ್ಹತೆ ಪಡೆಯುವ ಚಟುವಟಿಕೆಯನ್ನು Snap ಸ್ವಂತ ವಿವೇಚನೆ ಮೇರೆಗೆ ನಿರ್ಧರಿಸುತ್ತದೆ. Snap ಸೇವಾ ನಿಯಮಗಳು ಎಂಬಲ್ಲಿ ವ್ಯಾಖ್ಯಾನಿಸಲಾಗಿರುವಂತೆ, ಈ ಕಾರ್ಯಕ್ರಮವು Snap ನ "ಸೇವೆಗಳ" ಭಾಗವಾಗಿದೆ. ಕ್ರಿಯೇಟರ್ ಪಾವತಿ ನಿಯಮಗಳನ್ನು ಅಥವಾ ಈ ಹಣಗಳಿಕೆ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಬಳಕೆದಾರರು, ಖಾತೆ ಅಥವಾ ವಿಷಯವು ಹಣಗಳಿಕೆಗಾಗಿ ಅರ್ಹರಾಗಿರುವುದಿಲ್ಲ.
ಸಾರಾಂಶದಲ್ಲಿ: ಕೆಲವು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಕ್ಕಾಗಿ ಪಾವತಿಸುವ ಮೂಲಕ ನಾವು ನಿಮಗೆ ರಿವಾರ್ಡ್ ನೀಡಬಹುದು. ನಿಮ್ಮ ಚಟುವಟಿಕೆಗಳು, ಖಾತೆ ಮತ್ತು ನೀವು ಪೋಸ್ಟ್ ಮಾಡುವ ಕಂಟೆಂಟ್ ಯಾವಾಗಲೂ ನಮ್ಮ ನಿಯಮಗಳು, ನೀತಿಗಳು ಮತ್ತು ಮಾರ್ಗಸೂಚಿಗಳೊಂದಿಗೆ ಅನುಸರಣೆ ಹೊಂದಿರಬೇಕು. ನೀವು ಅನುಸರಣೆ ಮಾಡುತ್ತಿದ್ದೀರಾ ಎಂದು ನಿರ್ಧರಿಸಲು ನಿಮ್ಮ ಖಾತೆ ಮತ್ತು ನೀವು ಪೋಸ್ಟ್ ಮಾಡುವ ವಿಷಯವನ್ನು ನಾವು ಪರೀಕ್ಷಿಸಬಹುದು. Snapchat ಗೆ ನೀವು ಪೋಸ್ಟ್ ಮಾಡುವ ವಿಷಯವನ್ನು ವಿತರಣೆ ಮಾಡುವ ಬಾಧ್ಯತೆಯನ್ನು ನಾವು ಹೊಂದಿಲ್ಲ ಮತ್ತು ಅಂತಹ ವಿಷಯವನ್ನು ನೀವು ಯಾವುದೇ ಸಮಯದಲ್ಲಿ ಅಳಿಸಬಹುದು.
Snap ಸೇವೆಯ ನಿಯಮಗಳಲ್ಲಿ ಹೇಳಿರುವಂತೆ, ಸೇವೆಯು ಜಾಹೀರಾತುಗಳನ್ನು ಒಳಗೊಂಡಿರಬಹುದು. ಪ್ರೊಗ್ರಾಂನಲ್ಲಿ ನಿಮ್ಮ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ, ನಮ್ಮ ಸ್ವಂತ ವಿವೇಚನೆ ಮೇರೆಗೆ ನೀವು ಪೋಸ್ಟ್ ಮಾಡುವ ಸಾರ್ವಜನಿಕ ವಿಷಯದೊಂದಿಗೆ ಸಂಬಂಧಿಸಿ ಜಾಹೀರಾತನ್ನು ವಿತರಿಸಲು ನಮ್ಮೊಂದಿಗೆ, ನಮ್ಮ ಅಂಗಸಂಸ್ಥೆಗಳೊಂದಿಗೆ ಮತ್ತು ನಮ್ಮ ತೃತೀಯ-ಪಕ್ಷದ ಪಾಲುದಾರರೊಂದಿಗೆ ನೀವು ತೊಡಗಿಕೊಳ್ಳುತ್ತಿದ್ದೀರಿ ಎಂದು ನೀವು ಒಪ್ಪುತ್ತೀರಿ. ನೀವು ಕ್ರಿಯೇಟರ್ ಪಾವತಿ ನಿಯಮಗಳಿಗೆ ಒಪ್ಪುವ ಮತ್ತು ಅವುಗಳನ್ನು ಅನುಸರಿಸುವ ಮೂಲಕ ಹಾಗೂ ಕ್ರಿಯೇಟರ್ ಪಾವತಿ ನಿಯಮಗಳಿಗೆ ಒಳಪಟ್ಟು ಕಾರ್ಯಕ್ರಮದ ಭಾಗವಾಗಿ ಸಲ್ಲಿಸುವ ಯಾವುದೇ ಸಾರ್ವಜನಿಕ ವಿಷಯಕ್ಕೆ Snap ಗೆ ಪ್ರವೇಶವನ್ನು ಒದಗಿಸುವುದನ್ನು ಮುಂದುವರಿಸುವ ಮೂಲಕ, ಅಂತಹ ಜಾಹೀರಾತುಗಳ ವಿತರಣೆಗೆ ಅನುಕೂಲ ಕಲ್ಪಿಸಲು ನೀವು ಒಪ್ಪುತ್ತೀರಿ. ನಾವು ನಮ್ಮ ಸ್ವಂತ ವಿವೇಚನೆಯ ಮೇರೆಗೆ, ಅನ್ವಯವಾಗುವ ಕಾರ್ಯಕ್ರಮದ(ಗಳ) ಭಾಗವಾಗಿ ನೀವು ಸಲ್ಲಿಸುವ ಯಾವುದೇ ಸಾರ್ವಜನಿಕ ವಿಷಯಕ್ಕೆ ಸಂಬಂಧಿಸಿ ವಿತರಿಸಲಾಗುವ ಜಾಹೀರಾತುಗಳ ವಿಧ, ಸ್ವರೂಪ ಮತ್ತು ಆವರ್ತನ ಸೇರಿದಂತೆ, ಸೇವೆಗಳಲ್ಲಿ ವಿತರಣೆ ಮಾಡಲಾಗಿರುವ ಜಾಹೀರಾತುಗಳ ಎಲ್ಲ ಅಂಶಗಳನ್ನು(ಯಾವುದಾದರೂ ಇದ್ದರೆ) ನಿರ್ಧರಿಸುತ್ತೇವೆ. ನೀವು ಪೋಸ್ಟ್ ಮಾಡುವ ಸಾರ್ವಜನಿಕ ವಿಷಯದ ಮೇಲೆ, ಅದರಲ್ಲಿ ಅಥವಾ ಪಕ್ಕದಲ್ಲಿ ಯಾವುದೇ ಕಾರಣಕ್ಕಾಗಿ ನಮ್ಮ ವಿವೇಚನೆ ಮೇರೆಗೆ ಜಾಹೀರಾತುಗಳನ್ನು ತೋರಿಸದೆ ಇರುವುದಕ್ಕೂ ಕೂಡ ನಾವು ಹಕ್ಕನ್ನು ಕಾಯ್ದಿರಿಸಿದ್ದೇವೆ. ನೀವು ಯುನೈಟೆಡ್ ಸ್ಟೇಟ್ಸ್ ಹೊರಗೆ ವಾಸಿಸುತ್ತಿದ್ದರೆ, ಯಾವುದೇ ಸೇವೆಗಳನ್ನು ಮಾಡುವಾಗ ಮತ್ತು ನಿಮ್ಮ ಅರ್ಹತೆ ಪಡೆಯುವ ಚಟುವಟಿಕೆಗೆ ಸಂಬಂಧಿಸಿ ಜಾಹೀರಾತುಗಳ ವಿತರಣೆಗೆ ಸೌಲಭ್ಯ ಕಲ್ಪಿಸುವಾಗ ನೀವು (ಮತ್ತು ಯಾವುದೇ ಸಹಯೋಗಿ, ಕೊಡುಗೆದಾರ ಅಥವಾ ನಿಮ್ಮ ಖಾತೆಯಿಂದ ಪೋಸ್ಟ್ ಮಾಡುವ ನಿರ್ವಾಹಕರು) ಯುನೈಟೆಡ್ ಸ್ಟೇಟ್ಸ್ ಹೊರಗೆ ಮತ್ತು ಅರ್ಹವಾದ ಪ್ರದೇಶದ ಒಳಗೆ ಭೌತಿಕವಾಗಿ ನೆಲೆಸಿರಬೇಕು.
ಸಾರಾಂಶದಲ್ಲಿ: ನೀವು ಭಾಗವಹಿಸುವ ಯಾವುದೇ ಕಾರ್ಯಕ್ರಮಕ್ಕೆ ಸಂಬಂಧಿಸಿ Snapchat ಗೆ ನೀವು ಪೋಸ್ಟ್ ಮಾಡುವ ವಿಷಯಗಳಲ್ಲಿ ಜಾಹೀರಾತುಗಳನ್ನು ವಿತರಿಸಲು ನೀವು ನಮ್ಮನ್ನು ಕೇಳುತ್ತಿದ್ದೀರಿ. ಯಾವುದೇ ಕಂಟೆಂಟ್‌ನಲ್ಲಿ ವಿತರಣೆ ಮಾಡಲಾಗಿರುವ ಅಥವಾ ಮಾಡಲಾಗಿಲ್ಲದ ಜಾಹೀರಾತನ್ನು ನಾವು ನಿರ್ಧರಿಸುತ್ತೇವೆ. ನೀವು ಯುನೈಟೆಡ್ ಸ್ಟೇಟ್ಸ್‌ನಿಂದ ಹೊರಗೆ ವಾಸಿಸುತ್ತಿದ್ದರೆ, ಅರ್ಹತೆ ಪಡೆಯುವ ಚಟುವಟಿಕೆಯನ್ನು ನಿರ್ವಹಿಸುವ ಸಮಯದಲ್ಲಿ ನೀವು ಉಪಸ್ಥಿತರಿರುವ ಭೌತಿಕ ಸ್ಥಳವು ಮುಖ್ಯವಾಗುತ್ತದೆ.
ಕಾಲಕಾಲಕ್ಕೆ ಈ ಹಣಗಳಿಕೆ ನಿಯಮಗಳನ್ನು ನಾವು ಅಪ್‌ಡೇಟ್ ಮಾಡಬೇಕಾಗಬಹುದು. ಒಂದು ವೇಳೆ ಈ ಹಣಗಳಿಕೆ ನಿಯಮಗಳಿಗೆ ಆ ಬದಲಾವಣೆಗಳು ವಾಸ್ತವಿಕವಾಗಿದ್ದರೆ, ನಾವು ಸಾಕಷ್ಟು ಮುಂಚಿತವಾಗಿ ನಿಮಗೆ ಸೂಚನೆ ನೀಡುತ್ತೇವೆ (ಶೀಘ್ರದಲ್ಲಿ ಬದಲಾವಣೆಗಳ ಅಗತ್ಯವಿಲ್ಲದ ಹೊರತು, ಉದಾಹರಣೆಗೆ, ಕಾನೂನು ಅಗತ್ಯಗಳಲ್ಲಿನ ಬದಲಾವಣೆಯ ಪರಿಣಾಮವಾಗಿ ಅಥವಾ ನಾವು ಹೊಸ ಸೇವೆಗಳು ಅಥವಾ ವೈಶಿಷ್ಟ್ಯಗಳನ್ನು ಪ್ರಾರಂಭಿಸುತ್ತಿದ್ದಲ್ಲಿ). ಬದಲಾವಣೆಗಳು ಜಾರಿಗೆ ಬಂದ ಬಳಿಕ ನೀವು ಪ್ರೊಗ್ರಾಂನಲ್ಲಿ ಭಾಗವಹಿಸುವುದನ್ನು ಮುಂದುವರಿಸಿದರೆ, ಅದನ್ನು ನಿಮ್ಮ ಸ್ವೀಕೃತಿ ಎಂದು ನಾವು ಪರಿಗಣಿಸುತ್ತೇವೆ. ಒಂದು ವೇಳೆ ಯಾವುದೇ ಸಮಯದಲ್ಲಿ ನೀವು ಈ ಹಣಗಳಿಕೆ ನಿಯಮಗಳಿಗೆ ಮಾಡಿದ ಯಾವುದೇ ಬದಲಾವಣೆಗಳನ್ನು ಒಪ್ಪದಿದ್ದರೆ, ನನ್ನ ಪ್ರೊಫೈಲ್‌ನಲ್ಲಿ ಸಂಬಂಧಿಸಿದ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸುವ ಮೂಲಕ ನೀವು ಪ್ರೊಗ್ರಾಂನಲ್ಲಿ ಭಾಗವಹಿಸುವುದನ್ನು ನಿಲ್ಲಿಸಬೇಕು. ಈ ಹಣಗಳಿಕೆ ನಿಯಮಗಳು ಯಾವುದೇ ತೃತೀಯ-ಪಕ್ಷದ ಫಲಾನುಭವಿ ಹಕ್ಕುಗಳನ್ನು ರಚಿಸುವುದಿಲ್ಲ ಅಥವಾ ನೀಡುವುದಿಲ್ಲ. ಈ ಹಣಗಳಿಕೆ ನಿಯಮಗಳಲ್ಲಿರುವ ಯಾವುದನ್ನೂ ನೀವು ಮತ್ತು Snap ಅಥವಾ Snap ನ ಅಂಗಸಂಸ್ಥೆಗಳ ನಡುವಿನ ಜಂಟಿ-ಉದ್ಯಮ, ಮುಖ್ಯಸ್ಥ-ಏಜೆಂಟ್ ಅಥವಾ ಉದ್ಯೋಗದ ಸಂಬಂಧ ಎಂದು ಪರಿಗಣಿಸಲಾಗುವುದಿಲ್ಲ. ಈ ಹಣಗಳಿಕೆ ನಿಯಮಗಳಲ್ಲಿ ನಾವು ಒಂದು ನಿಬಂಧನೆಯನ್ನು ಜಾರಿಗೊಳಿಸದಿದ್ದರೆ, ಅದನ್ನು ವಿನಾಯಿತಿ ಎಂದು ಪರಿಗಣಿಸಲಾಗುವುದಿಲ್ಲ. ನಿಮಗೆ ನಾವು ವ್ಯಕ್ತವಾಗಿ ನೀಡದ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಿದ್ದೇವೆ. ಈ ಹಣಗಳಿಕೆ ನಿಯಮಗಳನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ ಮತ್ತು ಈ ಹಣಗಳಿಕೆ ನಿಯಮಗಳ ಯಾವುದೇ ಅನುವಾದಿತ ಆವೃತ್ತಿಯು ಇಂಗ್ಲಿಷ್ ಆವೃತ್ತಿಯೊಂದಿಗೆ ಸಂಘರ್ಷ ಹೊಂದಿದ್ದಲ್ಲಿ. ಇಂಗ್ಲಿಷ್ ಆವೃತ್ತಿಯೇ ನಿಯಂತ್ರಣ ಹೊಂದಿರುತ್ತದೆ. ಈ ಹಣಗಳಿಕೆ ನಿಯಮಗಳ ಯಾವುದೇ ನಿಬಂಧನೆಯು ಜಾರಿಮಾಡಲಾಗದ್ದು ಎಂದು ಕಂಡುಬಂದರೆ, ಆಗ ಆ ನಿಬಂಧನೆಯನ್ನು ಈ ಹಣಗಳಿಕೆ ನಿಯಮಗಳಿಂದ ತೆಗೆದುಹಾಕಲಾಗುತ್ತದೆ ಹಾಗೂ ಆ ಕ್ರಮವು ಯಾವುದೇ ಉಳಿದಿರುವ ನಿಬಂಧನೆಗಳ ಮಾನ್ಯತೆ ಮತ್ತು ಜಾರಿಗೊಳಿಸುವಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ.
ಸಾರಾಂಶದಲ್ಲಿ: ನಿಮ್ಮ ಖಾತೆಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳಿಗೆ ನೀವೇ ಜವಾಬ್ದಾರರು. ನೀವು ಈ ಹಣಗಳಿಕೆ ನಿಯಮಗಳನ್ನು ವಿಮರ್ಶಿಸಬೇಕು, ಏಕೆಂದರೆ ನಾವು ಅವುಗಳನ್ನು ಪರಿಷ್ಕರಿಸಬಹುದು. ಈ ಹಣಗಳಿಕೆ ನಿಯಮಗಳು ನಮ್ಮ ನಡುವೆ ಯಾವುದೇ ವಿಧದ ಉದ್ಯೋಗದ ಸಂಬಂಧಗಳನ್ನು ರಚಿಸುವುದಿಲ್ಲ. ಈ ಹಣಗಳಿಕೆ ನಿಯಮಗಳ ಆಂಗ್ಲ ಆವೃತ್ತಿಯೇ ಅಂತಿಮವಾಗಿರುತ್ತದೆ ಹಾಗೂ ಹಣಗಳಿಕೆ ನಿಯಮಗಳ ಅವಧಿ ಮುಗಿಯುವಿಕೆ ಅಥವಾ ಸಮಾಪ್ತಿಯ ಬಳಿಕವೂ ಸಹ ಕೆಲವು ನಿಬಂಧನೆಗಳು ಜಾರಿಯಲ್ಲಿ ಉಳಿಯುತ್ತವೆ.
ಈ ಹಣಗಳಿಕೆ ನಿಯಮಗಳ ಕುರಿತು ನಿಮ್ಮಲ್ಲಿ ಯಾವುದೇ ಪ್ರಶ್ನೆಗಳಿದ್ದಲ್ಲಿ, ನಮ್ಮನ್ನು ಸಂಪರ್ಕಿಸಿ.