Specs Inc. ಸೇವೆಯ ನಿಯಮಗಳು
ಜಾರಿ ದಿನಾಂಕ: ಜೂನ್ 15, 2026
ನಾವು ಈ ಸೇವೆಯ ನಿಯಮಗಳನ್ನು (ಅವುಗಳನ್ನು ನಾವು "ನಿಯಮಗಳು" ಎಂದು ಕರೆಯುತ್ತೇವೆ) ರೂಪಿಸಿದ್ದೇವೆ, ಇದರಿಂದ SPECS ವೆಬ್‌ಸೈಟ್, SPECS ಆ್ಯಪ್, ಅಥವಾ ಇವುಗಳಿಗೆ ಒಳಪಡುವ ನಮ್ಮ ಯಾವುದೇ ಇತರ ಉತ್ಪನ್ನಗಳು ಅಥವಾ ಸೇವೆಗಳ (ಇವುಗಳನ್ನು ನಾವು ಒಟ್ಟಾರೆಯಾಗಿ “Specs ಸೇವೆಗಳು” ಎಂದು ಕರೆಯುತ್ತೇವೆ) ಬಳಕೆದಾರರಾಗಿ ನಿಮ್ಮೊಂದಿಗೆ ನಮ್ಮ ಸಂಬಂಧವನ್ನು ನಿಯಂತ್ರಿಸುವ ನಿಯಮಗಳನ್ನು ನೀವು ತಿಳಿದುಕೊಳ್ಳಬಹುದು. ಈ ನಿಯಮಗಳು ನಿಮ್ಮ ಮತ್ತು Specs Inc. ("Specs") ನಡುವೆ ಕಾನೂನು ಬಾಧ್ಯತೆಯ ಕರಾರನ್ನು ರೂಪಿಸುತ್ತವೆ. ಆದ್ದರಿಂದ ದಯವಿಟ್ಟು ಅವುಗಳನ್ನು ಎಚ್ಚರಿಕೆಯಿಂದ ಓದಿ.
ಕೆಲವು Specs ಸೇವೆಗಳನ್ನು ವೈಯಕ್ತೀಕರಿಸಲಾಗಿದೆ ಮತ್ತು ಈ ನಿಯಮಗಳು, ನಮ್ಮ ಗೌಪ್ಯತೆ ನೀತಿ, ನಮ್ಮ ಬೆಂಬಲ ಸೈಟ್‌ನಲ್ಲಿ ಮತ್ತು Specs ಸೇವೆಗಳ ಒಳಗೆ (ಉದಾಹರಣೆಗೆ ಸೂಚನೆಗಳು, ಸಮ್ಮತಿಗಳು ಮತ್ತು ಸೆಟ್ಟಿಂಗ್‌ಗಳಲ್ಲಿ) ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಎನ್ನುವ ಕುರಿತು ನಾವು ಮಾಹಿತಿಯನ್ನು ಒದಗಿಸುತ್ತೇವೆ. ಈ ಸಂಪನ್ಮೂಲಗಳು ಒಟ್ಟಾಗಿ SPECS ಸೇವೆಗಳ ನಿಮ್ಮ ಬಳಕೆಯನ್ನು ನಿಯಂತ್ರಿಸುತ್ತವೆ ಮತ್ತು ನಿಮ್ಮೊಂದಿಗೆ ನಮ್ಮ ಒಪ್ಪಂದವನ್ನು ರೂಪಿಸುತ್ತವೆ.
ಈ ನಿಯಮಗಳು Snap ಸೇವೆಯ ನಿಯಮಗಳನ್ನು ಸಹ ಒಳಗೊಳ್ಳುತ್ತವೆ. Snap ಸೇವೆಯ ನಿಯಮಗಳಲ್ಲಿ ವ್ಯಾಖ್ಯಾನಿಸಲಾಗಿರುವಂತೆ Specs ಸೇವೆಗಳು ಒಂದು "ಸೇವೆ" ಆಗಿದ್ದು, ಅಂದರೆ ಇತರ ವಿಷಯಗಳ ಜೊತೆಗೆ, Specs ಸೇವೆಗಳ ನಿಮ್ಮ ಬಳಕೆಯು Snap ಸೇವೆಯ ನಿಯಮಗಳಲ್ಲಿನ ಹಕ್ಕುನಿರಾಕರಣೆಗಳು ಮತ್ತು ಹೊಣೆಗಾರಿಕೆಯ ಮಿತಿಗಳಿಗೆ ಒಳಪಡುತ್ತದೆ ಎಂದರ್ಥ.
ನಮ್ಮ ಯಾವುದೇ SPECS ಸೇವೆಗಳನ್ನು ಬಳಸುವ ಮೂಲಕ, ನೀವು ನಿಯಮಗಳಿಗೆ ಒಪ್ಪುತ್ತೀರಿ. ಸಹಜವಾಗಿ, ನೀವು ನಿಯಮಗಳನ್ನು ಒಪ್ಪದಿದ್ದರೆ, ಆಗ SPECS ಸೇವೆಗಳನ್ನು ಬಳಸಬೇಡಿ.
ಈ ನಿಯಮಗಳು SNAP ಸೇವೆಯ ನಿಯಮಗಳಲ್ಲಿ ಮಧ್ಯಸ್ಥಿಕೆಯ ವಿಧಿಯನ್ನು ಒಳಗೊಳ್ಳುತ್ತವೆ. ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದರೆ, ಆ ಮಧ್ಯಸ್ಥಿಕೆಯ ವಿಧಿಯಲ್ಲಿ ಉಲ್ಲೇಖಿಸಲಾಗಿರುವ ಕೆಲವು ವಿಧದ ವಿವಾದಗಳನ್ನು ಹೊರತುಪಡಿಸಿ, ನಮ್ಮ ನಡುವಿನ ವಿವಾದಗಳನ್ನು ಕಡ್ಡಾಯ ಬಾಧ್ಯತೆಯ ಮಧ್ಯಸ್ಥಿಕೆಯಿಂದ ಪರಿಹರಿಸಲಾಗುತ್ತದೆ ಎಂಬುದಕ್ಕೆ ನೀವು ಮತ್ತು SPECS ಒಪ್ಪುತ್ತೀರಿ, ಹಾಗೂ ಸಮೂಹ-ಕ್ರಮ ದಾವೆ ಅಥವಾ ಸಮೂಹ-ವ್ಯಾಪ್ತಿಯ ಮಧ್ಯಸ್ಥಿಕೆಯಲ್ಲಿ ಭಾಗವಹಿಸುವ ಯಾವುದೇ ಹಕ್ಕನ್ನು ತ್ಯಜಿಸುತ್ತೀರಿ ಎಂದು ನೀವು ಮತ್ತು SPECS ಒಪ್ಪುತ್ತೀರಿ. ಆ ಮಧ್ಯಸ್ಥಿಕೆಯ ವಿಧಿಯಲ್ಲಿ ವಿವರಿಸಿದಂತೆ ನೀವು ಮಧ್ಯಸ್ಥಿಕೆಯಿಂದ ಹೊರಗುಳಿಯುವ ಹಕ್ಕನ್ನು ಹೊಂದಿದ್ದೀರಿ.
ನೀವು ಯುನೈಟೆಡ್ ಸ್ಟೇಟ್ಸ್ ಹೊರಗೆ ವಾಸಿಸುತ್ತಿದ್ದರೆ, ನಮ್ಮೊಂದಿಗಿನ ನಿಮ್ಮ ಒಪ್ಪಂದಕ್ಕೆ ಅನ್ವಯಿಸುವ ಕೆಲವು ಹೆಚ್ಚುವರಿ ಹಕ್ಕುಗಳು ಇರಬಹುದು. ಈ ನಿಯಮಗಳ ನಿಬಂಧನೆಗಳು ನೀವು ವಾಸಿಸುವ ದೇಶದ ಕಾನೂನುಗಳ ಅಡಿಯಲ್ಲಿ ನೀವು ಹೊಂದಿರಬಹುದಾದ ಶಾಸನಬದ್ಧ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ.
ನಮ್ಮ ಕೆಲವು SPECS ಸೇವೆಗಳು ಆ SPECS ಸೇವೆ ಅಥವಾ ನಿಮ್ಮ ವಾಸಸ್ಥಳಕ್ಕೆ ವಿಶಿಷ್ಟವಾದ ವಿವಾದ ಪರಿಹರಿಸುವ ನಿಬಂಧನೆಗಳನ್ನು ಒಳಗೊಂಡಿರುವ ಹೆಚ್ಚುವರಿ ನಿಯಮಗಳನ್ನು ಹೊಂದಿರಬಹುದು.
ಒಂದು ವ್ಯವಹಾರದ ಪರವಾಗಿ ನೀವು SPECS ಸೇವೆಗಳನ್ನು ಬಳಸುತ್ತಿದ್ದರೆ (ನಿಮ್ಮ ವೈಯಕ್ತಿಕ ಬಳಕೆಯ ಬದಲಾಗಿ), ಕಾನೂನಿನಿಂದ ಅನುಮತಿಸಿರುವ ಮಟ್ಟಿಗೆ, ಈ ನಿಯಮಗಳು ಅಥವಾ SPECS ಸೇವೆಗಳ ಬಳಕೆಯಿಂದ ಅಥವಾ ಅದಕ್ಕೆ ಸಂಬಂಧಿಸಿದ ನಮ್ಮ ನಡುವೆ ಉದ್ಭವಿಸುವ ಎಲ್ಲ ಹಕ್ಕುಗಳು ಮತ್ತು ವಿವಾದಗಳನ್ನು LCIA ಮಧ್ಯಸ್ಥಿಕೆ ನಿಯಮಗಳ ಅಡಿಯಲ್ಲಿ ಬಾಧ್ಯತೆಯ ಮಧ್ಯಸ್ಥಿಕೆಯ ಮೂಲಕ ಅಂತಿಮವಾಗಿ ಇತ್ಯರ್ಥಗೊಳಿಸಲಾಗುತ್ತದೆ ಎಂಬುದಕ್ಕೆ ನೀವು ಮತ್ತು SPECS ಒಪ್ಪುತ್ತೀರಿ. ಒಬ್ಬ ಆರ್ಬಿಟ್ರೇಟರ್ ಇರುತ್ತಾರೆ (LCIA ನಿಂದ ನೇಮಕಗೊಳ್ಳುವುದು), ಮಧ್ಯಸ್ಥಿಕೆ ಲಂಡನ್‌ನಲ್ಲಿ ನಡೆಯುತ್ತದೆ ಮತ್ತು ಮಧ್ಯಸ್ಥಿಕೆ ಇಂಗ್ಲಿಷ್‌ನಲ್ಲಿ ನಡೆಯಲಿದೆ. ಈ ವಿಧಿಗೆ ಒಪ್ಪಲು ನೀವು ಬಯಸದಿದ್ದರೆ, ನೀವು SPECS ಸೇವೆಗಳನ್ನು ಬಳಸಬಾರದು.
SPECS ಸೇವೆಗಳನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರ ಕಡೆಗೂ ನಿರ್ದೇಶಿಸಲಾಗಿಲ್ಲ ಮತ್ತು SPECS ಸೇವೆಗಳನ್ನು ಬಳಸಲು ನೀವು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. Spec ಸೇವೆಗಳನ್ನು ಬಳಸಲು, ಈ ನಿಯಮಗಳು ಮತ್ತು ನಮ್ಮ ನೀತಿಗಳಿಗೆ ಅನುಸಾರವಾಗಿ ನಿಯೋಜಿಸಲಾಗದ, ವಿಶೇಷವಲ್ಲದ, ಹಿಂಪಡೆಯಬಹುದಾದ ಮತ್ತು ಉಪ-ಪರವಾನಗಿ ಪಡೆಯಲಾಗದ ಪರವಾನಗಿಯನ್ನು SPECS ನಿಮಗೆ ಒದಗಿಸುತ್ತದೆ. ನಮ್ಮ ವರ್ಚುವಲ್ ಟ್ರೈ-ಆನ್ ವೈಶಿಷ್ಟ್ಯಗಳು ಅಂದಾಜು ಮಾತ್ರ ಒದಗಿಸುತ್ತವೆ ಮತ್ತು ನಿಖರವಾದ ಹೊಂದಾಣಿಕೆ ಅಥವಾ ಗಾತ್ರವನ್ನು ನಾವು ಖಾತರಿಪಡಿಸುವುದಿಲ್ಲ.
ಹೆಚ್ಚುವರಿ ನಿಯಮಗಳೊಂದಿಗೆ ನಾವು ಹೆಚ್ಚುವರಿ SPECS ಸೇವೆಗಳನ್ನು ಒದಗಿಸಬಹುದು, ಅವುಗಳನ್ನು ಬಳಸಲು ನಿಮಗೆ ಇನ್ನೂ ಹೆಚ್ಚಿನ ವಯಸ್ಸಾಗಿರುವುದನ್ನು ಅಗತ್ಯಪಡಿಸಬಹುದು. ಆದ್ದರಿಂದ ದಯವಿಟ್ಟು ಅಂತಹ ಎಲ್ಲ ನಿಯಮಗಳನ್ನು ಎಚ್ಚರಿಕೆಯಿಂದ ಓದಿ. SPECS ಸೇವೆಗಳನ್ನು ಬಳಸುವ ಮೂಲಕ, ನೀವು ಈ ಕೆಳಗಿನವುಗಳನ್ನು ಪ್ರತಿನಿಧಿಸುತ್ತೀರಿ, ಖಾತರಿಪಡಿಸುತ್ತೀರಿ ಮತ್ತು ಒಪ್ಪುತ್ತೀರಿ:
ನೀವು SPECS ಜೊತೆಗೆ ಬಾಧ್ಯತೆಯ ಕರಾರನ್ನು ರೂಪಿಸಬಹುದು;
ಯುನೈಟೆಡ್ ಸ್ಟೇಟ್ಸ್ ಅಥವಾ ಯಾವುದೇ ಇತರ ಅನ್ವಯಿಸುವ ನ್ಯಾಯವ್ಯಾಪ್ತಿಯ ಕಾನೂನುಗಳ ಅಡಿಯಲ್ಲಿ SPECS ಸೇವೆಗಳನ್ನು ಬಳಸುವುದನ್ನು ನಿಷೇಧಿಸಲಾಗಿರುವ ವ್ಯಕ್ತಿಯಲ್ಲ — ಉದಾಹರಣೆಗೆ, U.S. ಹಣಕಾಸು ಇಲಾಖೆಯ ವಿಶೇಷ ನಿಯೋಜಿತ ರಾಷ್ಟ್ರೀಯರ ಪಟ್ಟಿಯಲ್ಲಿ ನೀವು ಕಾಣಿಸಿಕೊಳ್ಳುವುದಿಲ್ಲ ಅಥವಾ ಯಾವುದೇ ಇತರ ರೀತಿಯ ನಿಷೇಧವನ್ನು ಎದುರಿಸುತ್ತಿಲ್ಲ ಎಂಬುದು ಸೇರಿದಂತೆ;
ನೀವು ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಅಲ್ಲ; ಮತ್ತು
ಈ ನಿಯಮಗಳು (ಈ ನಿಯಮಗಳಲ್ಲಿ ಉಲ್ಲೇಖಿಸಲಾಗಿರುವ ಇತರ ನಿಯಮಗಳು ಮತ್ತು ನೀತಿಗಳು ಸೇರಿದಂತೆ) ಮತ್ತು ಎಲ್ಲ ಅನ್ವಯಿಸುವ ಸ್ಥಳೀಯ, ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾನೂನುಗಳು, ನಿಯಮಗಳು ಮತ್ತು ನಿಬಂಧನೆಗಳನ್ನು ನೀವು ಅನುಸರಣೆ ಮಾಡುತ್ತೀರಿ.
ಒಂದು ವ್ಯವಹಾರ ಅಥವಾ ಇತರ ಯಾವುದಾದರೂ ಘಟಕದ ಪರವಾಗಿ ನೀವು SPECS ಸೇವೆಗಳನ್ನು ಬಳಸುತ್ತಿದ್ದರೆ, ಈ ನಿಯಮಗಳಿಗೆ ಆ ವ್ಯವಹಾರ ಅಥವಾ ಘಟಕವನ್ನು ಬದ್ಧಗೊಳಿಸಲು ನೀವು ಅಧಿಕಾರ ಹೊಂದಿದ್ದೀರಿ ಮತ್ತು ಆ ವ್ಯವಹಾರ ಅಥವಾ ಘಟಕದ ಪರವಾಗಿ ಈ ನಿಯಮಗಳಿಗೆ ನೀವು ಒಪ್ಪುತ್ತೀರಿ ಎಂದು ನೀವು ಪ್ರತಿನಿಧಿಸುತ್ತೀರಿ (ಮತ್ತು ಈ ನಿಯಮಗಳಲ್ಲಿನ "ನೀವು" ಮತ್ತು "ನಿಮ್ಮ" ಎಂಬ ಎಲ್ಲ ಉಲ್ಲೇಖಗಳು ಅಂತಿಮ ಬಳಕೆದಾರರಾಗಿ ಮತ್ತು ಆ ವ್ಯವಹಾರ ಅಥವಾ ಘಟಕ ಎರಡನ್ನೂ ಅರ್ಥೈಸುತ್ತವೆ).
ನಿಮ್ಮ ಗೌಪ್ಯತೆಯು ನಮಗೆ ಮುಖ್ಯವಾಗಿದೆ. ನಮ್ಮ ಗೌಪ್ಯತೆ ನೀತಿ ಓದುವ ಮೂಲಕ ನಮ್ಮ Specs ಸೇವೆಗಳನ್ನು ನೀವು ಬಳಸಿದಾಗ ನಿಮ್ಮ ಮಾಹಿತಿಯನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದನ್ನು ನೀವು ತಿಳಿಯಬಹುದು.
ನಿಮ್ಮ ಮತ್ತು ನಮ್ಮ ನಡುವೆ, Specs ಸೇವೆಗಳಿಗೆ Specs ಮಾಲೀಕರಾಗಿದ್ದು, ಇದರಲ್ಲಿ ಎಲ್ಲ ಸಂಬಂಧಿಸಿದ ಬ್ರ್ಯಾಂಡ್‌ಗಳು, ಕರ್ತೃತ್ವದ ಕಾರ್ಯಗಳು, ಸಾಫ್ಟ್‌ವೇರ್ ಮತ್ತು ಇತರ ಸ್ವಾಮ್ಯದ ವಿಷಯ, ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನವು ಸೇರಿರುತ್ತದೆ. www.specs.com/patents ನಲ್ಲಿ ಪಟ್ಟಿ ಮಾಡಲಾಗಿರುವಂತಹ, Specs ಅಥವಾ ಅದರ ಅಂಗಸಂಸ್ಥೆಗಳ ಮಾಲೀಕತ್ವದ ಪೇಟೆಂಟ್‌ಗಳ ವ್ಯಾಪ್ತಿಯಲ್ಲಿ ಕೂಡ Specs ಸೇವೆಗಳು ಒಳಗೊಳ್ಳಬಹುದು.
ನೀವು Specs ಹಕ್ಕುಗಳನ್ನು ಕೂಡ ಗೌರವಿಸಬೇಕು ಮತ್ತು SPECS ಬ್ರ್ಯಾಂಡ್ ಮಾರ್ಗಸೂಚಿಗಳು ಮತ್ತು Specs ಅಥವಾ ನಮ್ಮ ಅಂಗಸಂಸ್ಥೆಗಳು ಪ್ರಕಟಿಸುವ ಯಾವುದೇ ಇತರ ಮಾರ್ಗಸೂಚಿಗಳು, ಬೆಂಬಲ ಪುಟಗಳು ಅಥವಾ FAQ ಗಳನ್ನು ಅನುಸರಣೆ ಮಾಡಬೇಕು. ಅಂದರೆ, ಇತರ ವಿಷಯಗಳೊಂದಿಗೆ, ಈ ಕೆಳಗಿನ ಯಾವುದನ್ನೂ ನೀವು ಮಾಡಬಾರದು, ಮಾಡಲು ಪ್ರಯತ್ನಿಸಬಾರದು ಅಥವಾ ಮಾಡುವಂತೆ ಬೇರೆ ಯಾರನ್ನೂ ಪ್ರೋತ್ಸಾಹಿಸಬಾರದು ಮತ್ತು ಹಾಗೆ ಮಾಡುವುದರಿಂದ Specs ಸೇವೆಗಳಿಗೆ ನಿಮ್ಮ ಪ್ರವೇಶವನ್ನು ನಾವು ಸಮಾಪ್ತಿಗೊಳಿಸುವುದಕ್ಕೆ ಅಥವಾ ಅಮಾನತುಗೊಳಿಸುವುದಕ್ಕೆ ಕಾರಣವಾಗಬಹುದು:
ಈ ನಿಯಮಗಳು, Specs ಬ್ರ್ಯಾಂಡ್ ಮಾರ್ಗಸೂಚಿಗಳು ಅಥವಾ Specs ನಿಂದ ಅಥವಾ ನಮ್ಮ ಅಂಗಸಂಸ್ಥೆಗಳಿಂದ ಪ್ರಕಟಿಸಲಾಗಿರುವ ಇತರ ಬ್ರ್ಯಾಂಡ್ ಮಾರ್ಗಸೂಚಿಗಳಿಂದ ಸ್ಪಷ್ಟವಾಗಿ ಅನುಮತಿಸಿರುವುದನ್ನು ಹೊರತುಪಡಿಸಿ, ಬ್ರ್ಯಾಂಡಿಂಗ್, ವ್ಯವಹಾರ ಚಿಹ್ನೆಗಳು, ಲಾಂಛನಗಳು, ಚಿಹ್ನೆಗಳು, ಬಳಕೆದಾರ ಸಂಪರ್ಕಸಾಧನ ಅಂಶಗಳು, ಉತ್ಪನ್ನ ಅಥವಾ ಬ್ರ್ಯಾಂಡ್‌ನ ನೋಟ ಮತ್ತು ಭಾವ, ವಿನ್ಯಾಸಗಳು, ಛಾಯಾಚಿತ್ರಗಳು, ವೀಡಿಯೊಗಳು ಅಥವಾ Specs ಸೇವೆಗಳ ಮೂಲಕ Specs ಲಭ್ಯವಾಗಿಸುವ ಇತರ ಯಾವುದೇ ಸಾಮಗ್ರಿಗಳನ್ನು ಬಳಸುವುದು.
ಸಾರಾಂಶದಲ್ಲಿ: SPECS ಸೇವೆಗಳ ಎಲ್ಲ ವಿಷಯ, ವೈಶಿಷ್ಟ್ಯಗಳು ಮತ್ತು ಕ್ರಿಯಾತ್ಮಕತೆಗಳು ನಮ್ಮ ಮಾಲೀಕತ್ವದ್ದಾಗಿವೆ ಅಥವಾ ನಾವು ನಿಯಂತ್ರಿಸುತ್ತೇವೆ. Specs ಸೇವೆಗಳು ಮತ್ತು ಇತರ ಬಳಕೆದಾರರನ್ನು ಹಾನಿಯಿಂದ ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು, ನಮ್ಮ Specs ಸೇವೆಗಳನ್ನು ನೀವು ಬಳಸುವಾಗ ನೀವು ಅನುಸರಿಸಬೇಕಾದ ನಿಯಮಗಳಿವೆ.
ಡಿಜಿಟಲ್ ಸಹಸ್ರಮಾನ ಕೃತಿಸ್ವಾಮ್ಯ ಕಾಯ್ದೆ ಸೇರಿದಂತೆ ವ್ಯವಹಾರ ಚಿಹ್ನೆ, ಹಕ್ಕುಸ್ವಾಮ್ಯ ಮತ್ತು ಇತರ ಬೌದ್ಧಿಕ ಸ್ವತ್ತು ಕಾನೂನುಗಳನ್ನು Specs ಗೌರವಿಸುತ್ತದೆ ಮತ್ತು ನಮ್ಮ ಅರಿವಿಗೆ ಬರುವ ಯಾವುದೇ ಉಲ್ಲಂಘಿಸುವ ವಸ್ತುಗಳನ್ನು ನಮ್ಮ Specs ಸೇವೆಗಳಿಂದ ತ್ವರಿತವಾಗಿ ತೆಗೆದುಹಾಕಲು ಸಮಂಜಸವಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. Specs ಸೇವೆಗಳಲ್ಲಿನ ಯಾವುದಾದರೂ ನೀವು ಹೊಂದಿರುವ ಅಥವಾ ನಿಯಂತ್ರಿಸುವ ಕೃತಿಸ್ವಾಮ್ಯವನ್ನು ಉಲ್ಲಂಘಿಸುತ್ತದೆ ಎಂದು ನೀವು ಭಾವಿಸಿದರೆ, ಈ ಉಪಕರಣ ಮೂಲಕ ಪ್ರವೇಶಿಸಬಹುದಾದ ನಮೂನೆಯನ್ನು ಬಳಸಿಕೊಂಡು ದಯವಿಟ್ಟು ಅದನ್ನು ವರದಿ ಮಾಡಿ. ಅಥವಾ ನಮ್ಮ ನಿಯೋಜಿತ ಪ್ರತಿನಿಧಿ ಜೊತೆ ನೀವು ಸೂಚನೆಯನ್ನು ಸಲ್ಲಿಸಬಹುದು: Specs Inc., Attn: Copyright Agent, 3000 31st Street, Santa Monica, CA 90405, ಇಮೇಲ್: copyright@specs.com. ಕೃತಿಸ್ವಾಮ್ಯ ಉಲ್ಲಂಘನೆಯನ್ನು ವರದಿ ಮಾಡುವುದನ್ನು ಬಿಟ್ಟು ಬೇರೆ ಯಾವುದಕ್ಕೂ ಈ ಇಮೇಲ್ ವಿಳಾಸವನ್ನು ಬಳಸಬೇಡಿ, ಏಕೆಂದರೆ ಅಂತಹ ಇಮೇಲ್‌ಗಳನ್ನು ನಿರ್ಲಕ್ಷಿಸಲಾಗುತ್ತದೆ. Specs ಸೇವೆಗಳಲ್ಲಿ ವ್ಯವಹಾರ ಚಿಹ್ನೆ ಉಲ್ಲಂಘನೆ ಸೇರಿದಂತೆ, ಇತರ ರೀತಿಯ ಉಲ್ಲಂಘನೆಗಳನ್ನು ವರದಿ ಮಾಡಲು, ದಯವಿಟ್ಟು ಇಲ್ಲಿ ಪ್ರವೇಶಿಸಬಹುದಾದ ಉಪಕರಣ ಬಳಸಿ.
ಸಾರಾಂಶದಲ್ಲಿ: ನಿಮ್ಮ ಬೌದ್ಧಿಕ ಸ್ವತ್ತು ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ನೀವು ನಂಬುವ ಯಾವುದನ್ನಾದರೂ ನೀವು ನೋಡಿದರೆ, ನಮಗೆ ತಿಳಿಸಿ.
ನಾವು ನಮ್ಮ Specs ಸೇವೆಗಳನ್ನು ದಣಿವರಿಯದೆ ಸುಧಾರಿಸುತ್ತಿದ್ದೇವೆ ಮತ್ತು ಎಲ್ಲ ಸಮಯದಲ್ಲೂ ಹೊಸದನ್ನು ರಚಿಸುತ್ತಿದ್ದೇವೆ. ಇದರರ್ಥ ನಾವು ವೈಶಿಷ್ಟ್ಯಗಳು, ಉತ್ಪನ್ನಗಳು ಅಥವಾ ಕ್ರಿಯಾತ್ಮಕತೆಗಳನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು ಮತ್ತು ನಾವು Specs ಸೇವೆಗಳನ್ನು ಒಟ್ಟಾರೆಯಾಗಿ ಅಮಾನತುಗೊಳಿಸಬಹುದು ಅಥವಾ ನಿಲ್ಲಿಸಬಹುದು. ಯಾವುದೇ ಕಾರಣಕ್ಕೂ ನಾವು ಯಾವುದೇ ಸಮಯದಲ್ಲಿ ಈ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಹುದು, ಮತ್ತು ನಾವು ಮಾಡಿದಾಗ, ನಾವು ನಿಮಗೆ ಯಾವುದೇ ಸೂಚನೆ ನೀಡದೇ ಇರಬಹುದು.
ಅಂದರೆ ನಮ್ಮ Specs ಸೇವೆಗಳಲ್ಲಿನ ಯಾವುದೇ ಬದಲಾವಣೆಗಳನ್ನು ಅಥವಾ ಅವುಗಳನ್ನು ನಾವು ಹೇಗೆ ಒದಗಿಸುತ್ತೇವೆ ಎಂಬುದನ್ನು ಪ್ರತಿಬಿಂಬಿಸಲು ಹಾಗೂ ಕಾನೂನು ಅಗತ್ಯಗಳ ಅನುಸರಣೆ ಮಾಡಲು ಅಥವಾ ಇತರ ಕಾನೂನು ಅಥವಾ ಭದ್ರತಾ ಕಾರಣಗಳಿಗಾಗಿ ಈ ನಿಯಮಗಳನ್ನು ನಾವು ನವೀಕರಿಸಬೇಕಾಗಬಹುದು ಎಂದೂ ಇದರರ್ಥವಾಗಿದೆ. ಈ ನಿಯಮಗಳ ಆ ಬದಲಾವಣೆಗಳು ಗಮನಾರ್ಹವಾಗಿದ್ದರೆ ನಾವು ನಿಮಗೆ ಸಮಂಜಸವಾದ ಮುಂಚಿತ ಸೂಚನೆಯನ್ನು ಒದಗಿಸುತ್ತೇವೆ (ಶೀಘ್ರದಲ್ಲಿ ಬದಲಾವಣೆಗಳ ಅಗತ್ಯವಿಲ್ಲದಿದ್ದರೆ, ಉದಾಹರಣೆಗೆ, ಕಾನೂನು ಅಗತ್ಯಗಳಲ್ಲಿನ ಬದಲಾವಣೆಯ ಪರಿಣಾಮವಾಗಿ ಅಥವಾ ನಾವು ಹೊಸ Specs ಸೇವೆಗಳು ಅಥವಾ ವೈಶಿಷ್ಟ್ಯಗಳನ್ನು ಪ್ರಾರಂಭಿಸುತ್ತಿರುವಲ್ಲಿ). ಬದಲಾವಣೆಗಳು ಜಾರಿಗೆ ಬಂದ ನಂತರ ನೀವು Specs ಸೇವೆಗಳನ್ನು ಬಳಸುವುದನ್ನು ಮುಂದುವರಿಸಿದರೆ, ಅದನ್ನು ನಿಮ್ಮ ಸಮ್ಮತಿ ಎಂದು ನಾವು ಪರಿಗಣಿಸುತ್ತೇವೆ.
ಸಾರಾಂಶದಲ್ಲಿ: Specs ಸೇವೆಗಳು ಕಾಲಾನಂತರದಲ್ಲಿ ವಿಕಸನಗೊಳ್ಳುತ್ತವೆ. ಈ ಬದಲಾವಣೆಗಳನ್ನು ಪ್ರತಿಬಿಂಬಿಸಲು ಅಥವಾ ಇತರ ಕಾರಣಗಳಿಗಾಗಿ ಕಾಲಕಾಲಕ್ಕೆ ಈ ನಿಯಮಗಳನ್ನು ನಾವು ನವೀಕರಿಸಬಹುದು.
ದಯವಿಟ್ಟು SNAP ಸೇವೆಯ ನಿಯಮಗಳಲ್ಲಿನ ಮಧ್ಯಸ್ಥಿಕೆಯ ವಿಧಿಯನ್ನು ಎಚ್ಚರಿಕೆಯಿಂದ ಓದಿ ಏಕೆಂದರೆ ಬಾಧ್ಯತೆಯ ವೈಯಕ್ತಿಕ ಮಧ್ಯಸ್ಥಿಕೆಯ ಮೂಲಕ ನಮ್ಮ ನಡುವಿನ ಎಲ್ಲ ವಿವಾದಗಳನ್ನು ಪರಿಹರಿಸಲು ನೀವು ಮತ್ತು SPECS ಒಪ್ಪುತ್ತೀರಿ ಮತ್ತು ಅದು ಸಾಮೂಹಿಕ ಮೊಕದ್ದಮೆ ಹಕ್ಕು ಮನ್ನಾ ಮತ್ತು ತೀರ್ಪುಗಾರರ ವಿಚಾರಣೆ ಹಕ್ಕು ಮನ್ನಾವನ್ನು ಒಳಗೊಂಡಿರುತ್ತವೆ ಎಂದು ಅವು ನಿರ್ದಿಷ್ಟಪಡಿಸುತ್ತವೆ.
ಹೊರಗುಳಿಯುವುದು. Snap ಸೇವೆಯ ನಿಯಮಗಳಲ್ಲಿ ವಿವರಿಸಿರುವಂತೆ ಮಧ್ಯಸ್ಥಿಕೆಯ ಕರಾರು ಒಪ್ಪಂದದಿಂದ ನೀವು ಹೊರಗುಳಿಯಬಹುದು. ನಿಮ್ಮ ಹೊರಗುಳಿಯುವ ಸೂಚನೆಗಾಗಿ ಸಂಪರ್ಕ ಮಾಹಿತಿಯು ಹೀಗಿದೆ: Specs Inc., Attn: Arbitration Opt-out, 3000 31st Street, Santa Monica, CA 90405, ಅಥವಾ ಹೊರಗುಳಿಯುವ ಸೂಚನೆಯನ್ನು arbitration-opt-out@specs.comಗೆ ಇಮೇಲ್ ಮಾಡಿ.
ಸಾರಾಂಶದಲ್ಲಿ: ಹೊರಗುಳಿಯುವ ನಿಮ್ಮ ಹಕ್ಕನ್ನು ನೀವು ಚಲಾಯಿಸದ ಹೊರತು, SPECS ಮತ್ತು ನೀವು ಎಲ್ಲ ಹಕ್ಕುಗಳು ಮತ್ತು ವಿವಾದಗಳನ್ನು ಮೊದಲು ಅನೌಪಚಾರಿಕ ವಿವಾದ ಪರಿಹಾರ ಪ್ರಕ್ರಿಯೆಯ ಮೂಲಕ ಹಾಗೂ ಅದು ಸಮಸ್ಯೆಯನ್ನು ಪರಿಹರಿಸದಿದ್ದರೆ, ಬಾಧ್ಯತೆಯ ಮಧ್ಯಸ್ಥಿಕೆಯನ್ನು ಬಳಸಿಕೊಂಡು ವೈಯಕ್ತಿಕ ಆಧಾರದ ಮೇಲೆ ಪರಿಹರಿಸುತ್ತೀರಿ. ಅಂದರೆ, ನೀವು ಯಾವುದೇ ಒಂದು ಹಕ್ಕುಸಾಧನೆ ಅಥವಾ ವಿವಾದದ ಸಂದರ್ಭದಲ್ಲಿ ನಮ್ಮ ವಿರುದ್ಧ ನಿರ್ದಿಷ್ಟ ಸಮೂಹ ಕ್ರಮ ದಾವೆಯನ್ನು ಹೂಡಲು ಆಗುವುದಿಲ್ಲ.
U.S. ಫೆಡರಲ್ ಕಾನೂನು ಮೇಲುಗೈ ಹೊಂದಿರುವ ಮಟ್ಟಿಗೆ ಹೊರತುಪಡಿಸಿ, ಕ್ಯಾಲಿಫೋರ್ನಿಯಾದ ಕಾನೂನು-ಸಂಘರ್ಷದ ತತ್ವಗಳಿಗೆ ಹೊರತಾದ ಕ್ಯಾಲಿಫೋರ್ನಿಯಾದ ಕಾನೂನುಗಳು, ಈ ನಿಯಮಗಳನ್ನು ಹಾಗೂ ಈ ನಿಯಮಗಳು ಅಥವಾ ಅವುಗಳ ವಿಷಯದಿಂದ ಉದ್ಭವಿಸುವ ಅಥವಾ ಅವುಗಳಿಗೆ ಸಂಬಂಧಿಸಿದಂತೆ ಯಾವುದೇ ದಾವೆಗಳು ಮತ್ತು ವಿವಾದಗಳನ್ನು (ಕರಾರು, ಖಾಸಗಿ ತಕ್ಸೀರು ಅಥವಾ ಇತರ ಆಗಿರಲಿ) ನಿಯಂತ್ರಿಸುತ್ತವೆ.
ನೀವು ಕ್ಯಾಲಿಫೋರ್ನಿಯಾ ನಿವಾಸಿಯಾಗಿದ್ದರೆ, ಕ್ಯಾಲಿಫೋರ್ನಿಯಾ ಸಿವಿಲ್ ಕೋಡ್ § 1789.3 ಗೆ ಅನುಗುಣವಾಗಿ ನೀವು 1625 North Market Blvd., Suite N 112 Sacramento, CA 95834 ವಿಳಾಸಕ್ಕೆ ಲಿಖಿತ ರೂಪದಲ್ಲಿ ಸಂಪರ್ಕಿಸುವ ಮೂಲಕ ಅಥವಾ (800) 952-5210 ಸಂಖ್ಯೆಗೆ ದೂರವಾಣಿ ಕರೆ ಮಾಡುವ ಮೂಲಕ ಕ್ಯಾಲಿಫೋರ್ನಿಯಾ ಗ್ರಾಹಕ ವ್ಯವಹಾರಗಳ ಇಲಾಖೆಯ ಗ್ರಾಹಕ ಸೇವೆಗಳ ವಿಭಾಗದ ದೂರು ಸಹಾಯ ಘಟಕಕ್ಕೆ ದೂರುಗಳನ್ನು ಸಲ್ಲಿಸಬಹುದು
ಆರಂಭದಲ್ಲಿ ಉಲ್ಲೇಖಿಸಿರುವ ಹೆಚ್ಚುವರಿ ನಿಯಮಗಳು ಸೇರಿದಂತೆ ಈ ನಿಯಮಗಳು, ನಿಮ್ಮ ಮತ್ತು SPECS ನಡುವಿನ ಸಂಪೂರ್ಣ ಒಪ್ಪಂದವನ್ನು ರೂಪಿಸುತ್ತವೆ ಮತ್ತು ಯಾವುದೇ ಹಿಂದಿನ ಒಪ್ಪಂದಗಳನ್ನು ರದ್ದುಗೊಳಿಸುತ್ತವೆ. ಈ ನಿಯಮಗಳು ಯಾವುದೇ ತೃತೀಯ-ಪಕ್ಷದ ಫಲಾನುಭವಿ ಹಕ್ಕುಗಳನ್ನು ರಚಿಸುವುದಿಲ್ಲ ಅಥವಾ ನೀಡುವುದಿಲ್ಲ. ಒಂದು ವೇಳೆ ಈ ನಿಯಮಗಳಲ್ಲಿ ಒಂದು ನಿಬಂಧನೆಯನ್ನು ನಾವು ಜಾರಿಗೊಳಿಸದಿದ್ದರೆ, ಅದು ಈ ನಿಯಮಗಳನ್ನು ಜಾರಿಗೊಳಿಸುವ ನಮ್ಮ ಹಕ್ಕಿನ ವರ್ಜನೆ ಎಂದು ಪರಿಗಣಿಸುವುದಿಲ್ಲ. ಈ ನಿಯಮಗಳ ಅಡಿಯಲ್ಲಿ ನಮ್ಮ ಹಕ್ಕುಗಳನ್ನು ವರ್ಗಾಯಿಸುವ ಮತ್ತು ಈ ನಿಯಮಗಳನ್ನು ಎತ್ತಿಹಿಡಿಯುವ ಷರತ್ತುಬದ್ಧವಾಗಿ, ಇನ್ನೊಂದು ಘಟಕವನ್ನು ಬಳಸಿಕೊಂಡು SPECS ಸೇವೆಗಳನ್ನು ಒದಗಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ನಮ್ಮ ಒಪ್ಪಿಗೆಯಿಲ್ಲದೆ ಈ ನಿಯಮಗಳ ಅಡಿಯಲ್ಲಿರುವ ನಿಮ್ಮ ಯಾವುದೇ ಹಕ್ಕುಗಳು ಅಥವಾ ಬಾಧ್ಯತೆಗಳನ್ನು ನೀವು ವರ್ಗಾಯಿಸುವಂತಿಲ್ಲ. ನಿಮಗೆ ನಾವು ವ್ಯಕ್ತವಾಗಿ ನೀಡದ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಿದ್ದೇವೆ.
ಅನಿಸಿಕೆಗಳು, ಪ್ರಶ್ನೆಗಳು, ಕಳವಳಗಳು ಅಥವಾ ಸಲಹೆಗಳನ್ನು Specs ಸ್ವಾಗತಿಸುತ್ತದೆ. ನೀವು ನಮ್ಮನ್ನು ಸಂಪರ್ಕಿಸಬಹುದು ಅಥವಾ ಇಲ್ಲಿ ಬೆಂಬಲ ಪಡೆಯಬಹುದು. ನಮ್ಮ ಬಳಕೆದಾರರ ಅಭಿಪ್ರಾಯವನ್ನು ಕೇಳಿಸಿಕೊಳ್ಳಲು ನಾವು ಯಾವಾಗಲೂ ಇಷ್ಟಪಡುತ್ತೇವೆ. ಆದಾಗ್ಯೂ, ನೀವು ಪ್ರತಿಕ್ರಿಯೆ ಅಥವಾ ಸಲಹೆಗಳನ್ನು ನೀಡಿದರೆ, ನಿಮಗೆ ಪರಿಹಾರ ನೀಡದೆ ಮತ್ತು ನಿಮ್ಮ ಮೇಲೆ ಯಾವುದೇ ನಿರ್ಬಂಧಗಳು ಅಥವಾ ಕಟ್ಟುಪಾಡುಗಳಿಲ್ಲದೆ ನಾವು ಅವುಗಳನ್ನು ಬಳಸಬಹುದು ಎಂದು ದಯವಿಟ್ಟು ತಿಳಿದುಕೊಳ್ಳಿ. ಅಂತಹ ಪ್ರತಿಕ್ರಿಯೆ ಅಥವಾ ಸಲಹೆಗಳನ್ನು ಆಧರಿಸಿ ನಾವು ಅಭಿವೃದ್ಧಿಪಡಿಸುವ ಎಲ್ಲವುಗಳಲ್ಲೂ ನಾವು ಹಕ್ಕುಗಳನ್ನು ಹೊಂದಿರುತ್ತೇವೆ ಎನ್ನುವುದಕ್ಕೆ ನೀವು ಒಪ್ಪುತ್ತೀರಿ.
Specs Inc. ಯುನೈಟೆಡ್ ಸ್ಟೇಟ್ಸ್‌ನಲ್ಲಿ 3000, 31st Street, Santa Monica, California 90405 ಈ ವಿಳಾಸದಲ್ಲಿ ಇದೆ.