SNAP ಕ್ರಿಯೇಟರ್ ಸಬ್‌ಸ್ಕ್ರಿಪ್ಶನ್‌ಗಳ ನಿಯಮಗಳು

ಜಾರಿ ದಿನಾಂಕ: ಸೆಪ್ಟೆಂಬರ್ 1, 2026

ಪರಿಚಯ

ಸ್ವಾಗತ! ಕ್ರಿಯೇಟರ್ ಸಬ್‌ಸ್ಕ್ರಿಪ್ಶನ್‌ಗಳಲ್ಲಿ ನೀವು ಆಸಕ್ತರಾಗಿದ್ದೀರಿ ಎನ್ನುವುದಕ್ಕೆ ನಾವು ಉತ್ಸುಕರಾಗಿದ್ದೇವೆ, ಇದು ಅರ್ಹ ಕ್ರಿಯೇಟರ್‌ಗಳು ತಮ್ಮ ಪ್ರೇಕ್ಷಕರಿಗೆ ("ಕಾರ್ಯಕ್ರಮ") ಚಂದಾದಾರಿಕೆಯಿಂದ ಮಾತ್ರ ಪ್ರವೇಶವಿರುವ ಶ್ರೇಣಿಯನ್ನು ಒದಗಿಸಲು ಅವಕಾಶ ನೀಡುತ್ತದೆ. ಈ ಕ್ರಿಯೇಟರ್ ಸಬ್‌ಸ್ಕ್ರಿಪ್ಶನ್‌ ನಿಯಮಗಳು ("ನಿಯಮಗಳು") ಕ್ರಿಯೇಟರ್ ಸಬ್‌ಸ್ಕ್ರಿಪ್ಶನ್‌ಗಳಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ನಿಯಂತ್ರಿಸುತ್ತವೆ ಮತ್ತು ನಿಮ್ಮ ಮತ್ತು Snap ("Snap," "ನಾವು," ಅಥವಾ "ನಮಗೆ")ಮಧ್ಯ ಕಾನೂನು ಬಾಧ್ಯತೆಯ ಕರಾರನ್ನು ರೂಪಿಸುತ್ತವೆ. ದಯವಿಟ್ಟು ಅವುಗಳನ್ನು ಎಚ್ಚರಿಕೆಯಿಂದ ಓದಿ.

ಈ ಕ್ರಿಯೇಟರ್ ಸಬ್‌ಸ್ಕ್ರಿಪ್ಶನ್‌ಗಳ ನಿಯಮಗಳನ್ನು ಸ್ವೀಕರಿಸುವ ಮತ್ತು ಅನುಸರಣೆ ಮಾಡುವ ಬಳಕೆದಾರರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಈ ನಿಯಮಗಳು ಉಲ್ಲೇಖದ ಮೂಲಕ Snap ಕ್ರಿಯೇಟರ್ ಪಾವತಿ ನಿಯಮಗಳು ಮತ್ತು Snap ಸೇವಾ ನಿಯಮಗಳು, ಹಾಗೂ ಯಾವುದೇ ಇತರ ಅನ್ವಯಿಸುವ ಮಾರ್ಗಸೂಚಿಗಳು ಮತ್ತು ನೀತಿಗಳನ್ನು ಒಳಗೊಳ್ಳುತ್ತವೆ. ಈ ನಿಯಮಗಳಿಗೆ ಇತರ ನಿಯಮಗಳೊಂದಿಗೆ ಸಂಘರ್ಷವಾದರೆ, ಕ್ರಿಯೇಟರ್ ಸಬ್‌ಸ್ಕ್ರಿಪ್ಶನ್‌ಗಳ ನಿಮ್ಮ ಬಳಕೆಗೆ ಸಂಬಂಧಿಸಿ ಈ ನಿಯಮಗಳು ನಿಯಂತ್ರಿಸುತ್ತವೆ.

ಈ ಕ್ರಿಯೇಟರ್ ಸಬ್‌ಸ್ಕ್ರಿಪ್ಶನ್‌ಗಳ ನಿಯಮಗಳಲ್ಲಿ ನಾವು ಸಾರಾಂಶಗಳನ್ನು ಒದಗಿಸಿದ್ದಲ್ಲಿ, ನಿಮ್ಮ ಅನುಕೂಲಕ್ಕಾಗಿ ಮಾತ್ರ ನಾವು ಹಾಗೆ ಮಾಡಿದ್ದೇವೆ. ನಿಮ್ಮ ಕಾನೂನು ಹಕ್ಕುಗಳು ಮತ್ತು ಬಾಧ್ಯತೆಗಳನ್ನು ಅರ್ಥಮಾಡಿಕೊಳ್ಳಲು ನೀವು ಈ ಕ್ರಿಯೇಟರ್ ಸಬ್‌ಸ್ಕ್ರಿಪ್ಶನ್‌ಗಳ ನಿಯಮಗಳನ್ನು ಪೂರ್ಣವಾಗಿ ಓದಬೇಕು.