ಸಂರಕ್ಷಿತ ಡೇಟಾ-ವಿಶ್ಲೇಷಣಾ ಕೊಠಡಿ ನಿಯಮಗಳು
ಪರಿಣಾಮಕಾರಿ ದಿನಾಂಕ: 25 ಜುಲೈ 2025
ಮಧ್ಯಸ್ಥಿಕೆ ಸೂಚನೆ: ನೀವು ವ್ಯವಹಾರ ಸೇವೆಗಳ ನಿಯಮಗಳಲ್ಲಿ ನಿರೂಪಿಸಲಾಗಿರುವ ಮಧ್ಯಸ್ಥಿಕೆ ನಿಬಂಧನೆಗಳಿಗೆ ಬಾಧ್ಯರಾಗಿರುತ್ತೀರಿ. ಒಂದು ವೇಳೆ ನೀವು SNAP INC. ನೊಂದಿಗೆ ಒಪ್ಪಂದಕ್ಕೆ ಪ್ರವೇಶಿಸುತ್ತಿದ್ದರೆ, ನೀವು ಮತ್ತು SNAP INC. ಸಾಮೂಹಿಕ ವರ್ಗ ದಾವೆ ಅಥವಾ ಸಾಮೂಹಿಕ ವರ್ಗ ರಾಜಿ ಸಂಧಾನದಲ್ಲಿ ಭಾಗವಹಿಸಲು ಯಾವುದೇ ಹಕ್ಕನ್ನು ತ್ಯಜಿಸುತ್ತೀರಿ.
ಈ ಸಂರಕ್ಷಿತ ಡೇಟಾ-ವಿಶ್ಲೇಷಣಾ ಕೊಠಡಿಯ ನಿಯಮಗಳು ನಿಮ್ಮ ಮತ್ತು Snap ನ ನಡುವೆ ಕಾನೂನುಬದ್ಧ ಬಾಧ್ಯತೆಯ ಒಪ್ಪಂದವನ್ನು ರೂಪಿಸುತ್ತವೆ, ಅಧಿಕೃತ ತೃತೀಯ-ಪಕ್ಷದ ಡೇಟಾ ಸ್ವಚ್ಛ ಕೊಠಡಿ ಪೂರೈಕೆದಾರರು ("ಸಂರಕ್ಷಿತ ಡೇಟಾ-ವಿಶ್ಲೇಷಣಾ ಕೊಠಡಿಯ ಕಾರ್ಯಕ್ರಮ") ಒದಗಿಸುವ ಸಂರಕ್ಷಿತ ಡೇಟಾ-ವಿಶ್ಲೇಷಣಾ ಕೊಠಡಿಯ ಸೇವೆಗಳನ್ನು ಬಳಸಿಕೊಂಡು ಜಾಹೀರಾತುಗಳ ಕಾರ್ಯಕ್ಷಮತೆಯ ಒಳನೋಟಗಳನ್ನು ರಚಿಸುವುದಕ್ಕಾಗಿ ವ್ಯವಹಾರ ಸೇವೆಗಳ ನಿಮ್ಮ ಬಳಕೆಯನ್ನು ನಿಯಂತ್ರಿಸುತ್ತವೆ, ಹಾಗೂ ವ್ಯವಹಾರದ ಸೇವೆಗಳ ನಿಯಮಗಳಲ್ಲಿ ಅಳವಡಿಸಲಾಗಿದೆ. ಈ ಸಂರಕ್ಷಿತ ಡೇಟಾ-ವಿಶ್ಲೇಷಣಾ ಕೊಠಡಿ ನಿಯಮಗಳಲ್ಲಿ ಬಳಸಲಾಗಿರುವ ಕೆಲವು ನಿಯಮಗಳನ್ನು ವ್ಯವಹಾರದ ಸೇವೆಗಳ ನಿಯಮಗಳಲ್ಲಿವ್ಯಾಖ್ಯಾನಿಸಲಾಗಿದೆ.
a. ಈ ಸಂರಕ್ಷಿತ ಡೇಟಾ-ವಿಶ್ಲೇಷಣಾ ಕೊಠಡಿ ಕಾರ್ಯಕ್ರಮವು ವ್ಯವಹಾರದ ಸೇವೆಗಳ ನಿಮ್ಮ ಬಳಕೆಗೆ ಸಂಬಂಧಿಸಿದ ಒಳನೋಟಗಳನ್ನು ರಚಿಸುವುದಕ್ಕಾಗಿ ನಿಮ್ಮ ಮೂಲಕ ಸೇವೆಗಳು, ವೆಬ್‌ಸೈಟ್‌ಗಳು, ಆ್ಯಪ್‌ಗಳು ಅಥವಾ ಸ್ಟೋರ್‌ಗಳಲ್ಲಿ ತೆಗೆದುಕೊಳ್ಳಲ್ಪಡುವ ಕ್ರಮಗಳ ಕುರಿತೂ ಸೇರಿದಂತೆ ವಿವಿಧ ಡೇಟಾಗಳನ್ನು ಒಂದು ಅಥವಾ ಹೆಚ್ಚಿನ ಸಂಖ್ಯೆಯ ಪರಸ್ಪರ ಒಪ್ಪಿದ ತೃತೀಯ-ಪಕ್ಷದ ಸಂರಕ್ಷಿತ ಡೇಟಾ-ವಿಶ್ಲೇಷಣಾ ಕೊಠಡಿ ಸೇವಾ ಪೋರೈಕೆದಾರರಿಗೆ ಲಭ್ಯಗೊಳಿಸಲು ನಮ್ಮಲ್ಲಿನ ಪ್ರತಿಯೊಬ್ಬರನ್ನೂ (ಪ್ರತಿಯೊಬ್ಬರೂ ಒಬ್ಬ “DCR ಪೂರೈಕೆದಾರರು” ಆಗಿರುವರು) ಸಶಕ್ತಗೊಳಿಸುತ್ತದೆ. ಆಯಾ ಪಕ್ಷವು ಲಿಖಿತವಾಗಿ ಮುಂಚಿತವಾಗಿಯೇ ಅನುಮೋದಿಸಿರುವ ಪ್ರಶ್ನೆಗಳು ಮತ್ತು ಸೂಚನೆಗಳನ್ನು ಮಾತ್ರ ಬಳಸಿಕೊಂಡು ವ್ಯವಹಾರದ ಸೇವೆಗಳ ನಿಮ್ಮ ಬಳಕೆಗೆ ಸಂಬಂಧಿಸಿದ ಯಾವುದೇ ಡೇಟಾವನ್ನು ಒಳಗೊಂಡ ಕ್ರೋಢೀಕರಿಸಲ್ಪಡುವ ಮತ್ತು ಅನಾಮಧೇಯಗೊಳಿಸಲ್ಪಡುವ ಒಳನೋಟಗಳನ್ನು ರಚಿಸುವಂತೆ DCR ಪೂರೈಕೆದಾರರಿಗೆ ಪ್ರತೀ ಪಕ್ಷದವರು ಸೂಚಿಸಬಹುದು ಎಂದು ನಮ್ಮಲ್ಲಿನ ಪ್ರತಿಯೊಬ್ಬರೂ ಒಪ್ಪುತ್ತೇವೆ.
b. ನೀವು ಮತು Snap ನಮ್ಮಲ್ಲಿನ ಪ್ರತಿಯೊಬ್ಬರೂ ಕೂಡ ಈ ಮುಂದಿನ ಕ್ರಮಗಳನ್ನು ಅಂಗೀಕರಿಸುತ್ತೇವೆ ಮತ್ತು ಒಪ್ಪುತ್ತೇವೆ: (i) ಯಾವುದೇ DCR ಪೂರೈಕೆದಾರರಿಗೆ ಯಾವ ಡೇಟಾವನ್ನು ಒದಗಿಸಬೇಕು ಎಂಬುದನ್ನು ಸ್ವತಂತ್ರವಾಗಿ ನಿರ್ಧರಿಸುತ್ತೇವೆ; (ii) ಆ ಡೇಟಾವನ್ನು ಬೇರೊಬ್ಬ ಪಕ್ಷದವರು ಪಡೆಯಬೇಕು ಅಥವಾ ಪ್ರವೇಶಿಸಬೇಕೆಂದು ಉದೇಶಿಸುವುದಿಲ್ಲ ಅಥವಾ ಅನುಮತಿಸುವುದಿಲ್ಲ; ಹಾಗೂ (iii) ಒಳನೋಟಗಳನ್ನು ಒದಗಿಸುವುದಕ್ಕಾಗಿ ಆ ಡೇಟಾದ ಪ್ರಕ್ರಿಯೆಗೊಳಿಸುವಿಕೆಗೆ ಸಂಬಂಧಿಸಿದಂತೆ DCR ಪೂರೈಕೆದಾರರಿಗೆ ಸ್ವತಂತ್ರ ಸೂಚನೆಗಳನ್ನು ಒದಗಿಸುತ್ತೇವೆ. ಜೊತೆಗೆ, ನಿಮ್ಮ ಡೇಟಾದಲ್ಲಿ ವ್ಯೆಯಕ್ತಿಕ ಡೇಟಾ ಒಳಗೊಂಡಿರುವ ಸಂದರ್ಭಗಳಲ್ಲಿ, ನೀವು ಈ ಮುಂದಿನವುಗಳಿಗೆ ಅಂಗೀಕಾರ ಮತ್ತು ಒಪ್ಪಿಗೆ ಸೂಚಿಸುತ್ತೀರಿ: (aa) ಸಂರಕ್ಷಿತ ಡೇಟಾ-ವಿಶ್ಲೇಷಣಾ ಕೊಠಡಿ ಕಾರ್ಯಕ್ರಮದ ಉದ್ದೇಶಗಳಿಗಾಗಿ ನಾವು ಅನುಕ್ರಮವಾಗಿ ನಿರ್ವಹಿಸುವ (ಅಥವಾ DCR ಪೂರೈಕೆದಾರರಿಗೆ ನಿರ್ವಹಿಸುವಂತೆ ಸೂಚಿಸುವ) ಡೇಟಾ ಸಂಸ್ಕರಣಾ ಚಟುವಟಿಕೆಗಳಿಗಾಗಿ ನಮ್ಮಲ್ಲಿನ ಪ್ರತಿಯೊಬ್ಬರೂ ಸ್ವತಂತ್ರ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತೇವೆ; (bb) Snap ನಿಮ್ಮ ವೈಯಕ್ತಿಕ ಡೇಟಾವನ್ನು ಪ್ರವೇಶಿಸುವುದಿಲ್ಲ ಅಥವಾ ನಿಮ್ಮ ಪರವಾಗಿ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸುವುದಿಲ್ಲ; ಹಾಗೂ (cc) DCR ಪೂರೈಕೆದಾರರು ಸಂರಕ್ಷಿತ ಡೇಟಾ-ವಿಶ್ಲೇಷಣಾ ಕೊಠಡಿ ಕಾರ್ಯಕ್ರಮದ ಉದ್ದೇಶಗಳಿಗಾಗಿ ನಿಮ್ಮ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸಲು ನಿಮ್ಮಿಂದ ನೇಮಿಸಲ್ಪಟ್ಟಿರುವ ಏಕಮಾತ್ರ ಡೇಟಾ ಪ್ರಕ್ರಿಯಕರಾಗಿರುತ್ತಾರೆ. ಸಂರಕ್ಷಿತ ಡೇಟಾ-ವಿಶ್ಲೇಷಣಾ ಕೊಠಡಿ ಕಾರ್ಯಕ್ರಮದ ಉದ್ದೇಶಗಳಿಗಾಗಿ ನೀವು ಲಭ್ಯಗೊಳಿಸುವ ಡೇಟಾವು ಯಾವುದೇ ವೈಯಕ್ತಿಕ ಡೇಟಾವನ್ನು ಒಳಗೊಂಡಿದ್ದರೆ, ವೈಯಕ್ತಿಕ ಡೇಟಾ ನಿಯಮಗಳು ಅನ್ವಯವಾಗುತ್ತವೆ.
c. ಸಂರಕ್ಷಿತ ಡೇಟಾ-ವಿಶ್ಲೇಷಣಾ ಕೊಠಡಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯಾವುದೇ ತೃತೀಯ-ಪಕ್ಷಗಳು ಒದಗಿಸುವ ಉತ್ಪನ್ನಗಳು ಅಥವಾ ಸೇವೆಗಳ (DCR ಪೂರೈಕೆದಾರರು ಒದಗಿಸುವ ಉತ್ಪನ್ನಗಳು ಮತ್ತು ಸೇವೆಗಳನ್ನು ಒಳಗೊಂಡಂತೆ) ನಿಮ್ಮ ಬಳಕೆಯು ನಿಮ್ಮ ಸ್ವಂತ ಹೊಣೆಗಾರಿಕೆಯ ಅಡಿಯಲ್ಲಿ ಇರುತ್ತದೆ ಹಾಗೂ ಆಯಾ ತೃತೀಯ-ಪಕ್ಷಗಳ ನಿಯಮಗಳಿಗೆ ಒಳಪಟ್ಟಿರುತ್ತದೆ. ಅಂತಹ ತೃತೀಯ-ಪಕ್ಷಗಳ ಉತ್ಪನ್ನಗಳು ಅಥವಾ ಸೇವೆಗಳ ನಿಮ್ಮ ಬಳಕೆಯ ಪರಿಣಾಮವಾಗಿ ನೀವು ಅನುಭವಿಸುವ ಯಾವುದೇ ಹಾನಿಗಳು ಅಥವಾ ನಷ್ಟಗಳಿಗಾಗಿ Snap ಜವಾಬ್ದಾರರಾಗಿರುವುದಿಲ್ಲ.
a. ವ್ಯವಹಾರದ ಸೇವೆಗಳ ನಿಯಮಗಳಲ್ಲಿ ಹೇಳಲಾಗಿರುವ ಯಾವುದೇ ನಿರ್ಬಂಧಗಳ ಜೊತೆಗೆ, ಈ ಕೆಳಗಿನ ಕ್ರಮಗಳನ್ನು ಅನುಸರಿಸುವಂತೆ ನಾವು ಯಾವುದೇ ಪಕ್ಷಗಳಿಗೆ (ಯಾವುದೇ DCR ಪೂರೈಕೆದಾರರನ್ನೂ ಒಳಗೊಂಡಂತೆ) ಸೂಚನೆ ನೀಡುವುದಿಲ್ಲ, ಅಧಿಕಾರ ನೀಡುವುದಿಲ್ಲ ಅಥವಾ ಪ್ರೋತ್ಸಾಹಿಸುವುದಿಲ್ಲ ಎಂದು Snap ಮತ್ತು ನೀವು ಇಬ್ಬರೂ ಕೂಡ ಒಪ್ಪುತ್ತೀರಿ: (i) ಈ ಸಂರಕ್ಷಿತ ಡೇಟಾ-ವಿಶ್ಲೇಷಣಾ ಕೊಠಡಿ ನಿಯಮಗಳಲ್ಲಿ ಸ್ಪಷ್ಟವಾಗಿ ಅನುಮತಿಸಿರುವ ರೀತಿಗಳಲ್ಲಿ ಹೊರತುಪಡಿಸಿ, ಸಂರಕ್ಷಿತ ಡೇಟಾ-ವಿಶ್ಲೇಷಣಾ ಕೊಠಡಿ ಕಾರ್ಯಕ್ರಮದ ಮೂಲಕ ಒಳನೋಟಗಳನ್ನು ರಚಿಸಲು DCR ಪೂರೈಕೆದಾರರಿಗೆ ಅನ್ಯ ಪಕ್ಷದವರು ಲಭ್ಯಗೊಳಿಸುವ ಡೇಟಾದೊಂದಿಗೆ ಅಥವಾ ಅದನ್ನು ಬಳಸಿ ಯಾವುದೇ ಕ್ರಮಗಳನ್ನು ಕೈಗೊಳ್ಳುವುದು ಅಥವಾ ವಿಶ್ಲೇಷಣೆಯನ್ನು ಮಾಡುವುದು; ಅಥವಾ (ii) ಇಲ್ಲದಿದ್ದಲ್ಲಿ, DCR ಪೂರೈಕೆದಾರರಿಗೆ ಅನ್ಯ ಪಕ್ಷದವರು ಲಭ್ಯಗೊಳಿಸುವ ಯಾವುದೇ ಡೇಟಾವನ್ನು (ವೈಯಕ್ತಿಕ ಡೇಟಾ ಸೇರಿದಂತೆ) ಬಳಸುವುದು ಅಥವಾ ವಿಶ್ಲೇಷಿಸುವುದು, ಅಥವಾ ಪ್ರವೇಶಿಸುವುದು, ನಕಲಿಸುವುದು, ಮಾರ್ಪಡಿಸುವುದು, ಬಹಿರಂಗಪಡಿಸುವುದು, ವರ್ಗಾಯಿಸುವುದು, ಹಿಮ್ಮುಖ-ವಿನ್ಯಾಸಾನ್ವೇಷಣೆಯಲ್ಲಿ ತೊಡಗುವುದು, ಗುರುತಿಸುವಿಕೆಗಳನ್ನು ಪುನಃಸ್ಥಾಪಿಸುವುದು ಅಥವಾ ಅಂತಹ ಡೇಟಾಗೆ ಪ್ರವೇಶವನ್ನು ನೀಡುವುದು.
b. Snap ಸಂರಕ್ಷಿತ ಡೇಟಾ-ವಿಶ್ಲೇಷಣಾ ಕೊಠಡಿ ಕಾರ್ಯಕ್ರಮದಿಂದ(DCR ಪೂರೈಕೆದಾರರು ಒದಗಿಸುವಂತಹವುಗಳೂ ಸೇರಿದಂತೆ) ಪಡೆಯುವ ಯಾವುದೇ ಫಲಿತಾಂಶಗಳನ್ನು ಈ ಕೆಳಗಿನ ಕ್ರಮಗಳಿಗಾಗಿಯೂ ಸೇರಿದಂತೆ, ತನ್ನ ಸೇವೆಗಳನ್ನು ಒದಗಿಸುವುದಕ್ಕಾಗಿ ಬಳಸಬಹುದು: (i) DCR ಪೂರೈಕೆದಾರರು ಒದಗಿಸುವುದಕ್ಕೆ ಹೆಚ್ಚುವರಿಯಾಗಿ ಇನ್ನಷ್ಟು ಒಳನೋಟಗಳಿಗೆ ಒದಗಿಸುವುದಕ್ಕಾಗಿ; ಹಾಗೂ (ii) ಸೇವೆಗಳನ್ನು ಸುಧಾರಿಸುವುದಕ್ಕಾಗಿ ಮತ್ತು ಪೂರಕಗೊಳಿಸುವುದಕ್ಕಾಗಿ. ಸಂರಕ್ಷಿತ ಡೇಟಾ-ವಿಶ್ಲೇಷಣಾ ಕೊಠಡಿ ಕಾರ್ಯಕ್ರಮದಿಂದ ನಿಮಗೆ ಲಭ್ಯಗೊಳಿಸಲಾಗುವ(Snap ನಿಂದ ಅಥವಾ DCR ಪೂರೈಕೆದಾರರಿಂದಲೂ ಸೇರಿದಂತೆ) ಯಾವುದೇ ಫಲಿತಾಂಶಗಳು, ಡೇಟಾ ಮತ್ತು ಒಳನೋಟಗಳು ವ್ಯವಹಾರದ ಸೇವೆಗಳ ಡೇಟಾವನ್ನು ರೂಪಿಸುತ್ತವೆ, ಹಾಗೂ ಸೇವೆಗಳ ಮೂಲಕ ಚಾಲನೆಗೊಳಿಸಲ್ಪಡುವ ನಿಮ್ಮ ಜಾಹೀರಾತುಗಳ ಅಭಿಯಾನಗಳನ್ನು ನಿರ್ವಹಿಸಲು ನಿಮ್ಮ ಆಂತರಿಕ ಬಳಕೆಗಾಗಿ ಕ್ರೋಢೀಕೃತ ಮತ್ತು ಅನಾಮಧೇಯಗೊಳಿಸಲ್ಪಟ್ಟ ರೂಪದಲ್ಲಿ ಮಾತ್ರ ಬಳಸಬಹುದಾಗಿದೆ.
ಈ ಸಂರಕ್ಷಿತ ಡೇಟಾ-ವಿಶ್ಲೇಷಣಾ ಕೊಠಡಿ ನಿಯಮಗಳು ಈ ಸಂರಕ್ಷಿತ ಡೇಟಾ-ವಿಶ್ಲೇಷಣಾ ಕೊಠಡಿ ಕಾರ್ಯಕ್ರಮದ ನಿಮ್ಮ ಬಳಕೆಗೆ ಸಂಬಂಧಿಸಿದಂತೆ ನಿಮ್ಮ ಮತ್ತು Snap ನ ನಡುವೆ ಸ್ಥಾಪಿಸಲ್ಪಟ್ಟಿರುವ ಸಂಪೂರ್ಣ ತಿಳುವಳಿಕೆ ಮತ್ತು ಒಪ್ಪಂದವನ್ನು ರೂಪಿಸುತ್ತವೆ, ಹಾಗೂ ಸಂರಕ್ಷಿತ ಡೇಟಾ-ವಿಶ್ಲೇಷಣಾ ಕೊಠಡಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಿಮ್ಮ ಮತ್ತು Snap ನ ನಡುವೆ ಇರುವ ಎಲ್ಲಾ ಇತರ ಒಪ್ಪಂದಗಳನ್ನು ರದ್ದುಗೊಳಿಸುತ್ತವೆ.