ನನ್ನ ಸೆಲ್ಫಿ ನಿಯಮಗಳು

ಜಾರಿ: ಏಪ್ರಿಲ್ 29, 2024

ಮಧ್ಯಸ್ಥಿಕೆಯ ಸೂಚನೆ: ನೀವು ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದರೆ ಅಥವಾ ನಿಮ್ಮ ವ್ಯವಹಾರದ ಪ್ರಧಾನ ಸ್ಥಳ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇದ್ದರೆ SNAP INC. ಸೇವೆಯ ನಿಯಮಗಳು ಇದರಲ್ಲಿ ವಿವರಿಸಿರುವ ಮಧ್ಯಸ್ಥಿಕೆ ನಿಬಂಧನೆಗಳಿಗೆ ನೀವು ಒಳಪಡುತ್ತೀರಿ: ಆ ಮಧ್ಯಸ್ಥಿಕೆಯ ವಿಧಿಯಲ್ಲಿ ಉಲ್ಲೇಖಿಸಿರುವ ಕೆಲವು ವಿಧದ ವಿವಾದಗಳನ್ನು ಹೊರತುಪಡಿಸಿ, ನೀವು ಮತ್ತು SNAP INC. SNAP INC. ನಲ್ಲಿ ನಿಗದಿಪಡಿಸಿದಂತೆ ಕಡ್ಡಾಯವಾಗಿ ಬಂಧಿಸುವ ಮಧ್ಯಸ್ಥಿಕೆಯ ಮೂಲಕ ನಮ್ಮ ನಡುವಿನ ವಿವಾದಗಳನ್ನು ಪರಿಹರಿಸಲಾಗುವುದು ಎಂದು ಒಪ್ಪುತ್ತೀರಿ. ಸೇವೆಯ ನಿಯಮಗಳು ಮತ್ತು ನೀವು ಮತ್ತು SNAP INC. ಯಾವುದೇ ಭಾಗವಹಿಸುವ ಹಕ್ಕನ್ನು ಸಮೂಹ ಕ್ರಮ ದಾವೆ ಅಥವಾ ಸಾಮೂಹಿಕ ಮಧ್ಯಸ್ಥಿಕೆಯಲ್ಲಿ ಬಿಟ್ಟುಕೊಡಿ.

1. ಪ್ರಸ್ತಾವನೆ

ದಯವಿಟ್ಟು ಈ ನನ್ನ ಸೆಲ್ಫಿ ನಿಯಮಗಳನ್ನು ("ನನ್ನ ಸೆಲ್ಫಿ ನಿಯಮಗಳು) ಗಮನವಿಟ್ಟು ಓದಿ. ಈ ನನ್ನ ಸೆಲ್ಫಿ ನಿಯಮಗಳು ನಿಮ್ಮ ಮತ್ತು Snap ನಡುವೆ ಕಾನೂನು ಬಾಧ್ಯತೆಯ ಕರಾರನ್ನು ರೂಪಿಸುತ್ತವೆ ಮತ್ತು Snapchat ನಲ್ಲಿ AI Snaps, ಡ್ರೀಮ್ಸ್, ಕ್ಯಾಮಿಯೋಗಳ ವೈಶಿಷ್ಟ್ಯಗಳು ಮತ್ತು ನಿಮ್ಮ ಚಿತ್ರ ಅಥವಾ ಸಾಮ್ಯತೆಯನ್ನು ಬಳಸುವ ಇತರ ಜನರೇಟಿವ್ AI ವೈಶಿಷ್ಟ್ಯಗಳಂತಹ ನನ್ನ ಸೆಲ್ಫಿ ಮತ್ತು ಸಂಬಂಧಿತ ವೈಶಿಷ್ಟ್ಯಗಳ ನಿಮ್ಮ ಬಳಕೆಯನ್ನು ನಿಯಂತ್ರಿಸುತ್ತವೆ. ಈ ನನ್ನ ಸೆಲ್ಫಿ ನಿಯಮಗಳು ಉಲ್ಲೇಖದ ಮೂಲಕ Snap ಸೇವೆಯ ನಿಯಮಗಳು, ಗೌಪ್ಯತಾ ನೀತಿ ಮತ್ತು ಯಾವುದೇ ಇತರ ಅನ್ವಯಿಸುವ ನಿಯಮಗಳು, ಮಾರ್ಗಸೂಚಿಗಳು ಮತ್ತು ನೀತಿಗಳನ್ನು ಒಳಗೊಳ್ಳುತ್ತವೆ. ಈ ನನ್ನ ಸೆಲ್ಫಿ ನಿಯಮಗಳು ಇತರ ಯಾವುದೇ ನಿಯಮಗಳ ಜೊತೆಗೆ ಸಂಘರ್ಷಿಸುವ ಮಟ್ಟಿಗೆ, ಈ ನನ್ನ ಸೆಲ್ಫಿ ನಿಯಮಗಳೇ ನಿಯಂತ್ರಿಸುತ್ತವೆ. Snap ಸೇವೆಯ ನಿಯಮಗಳಲ್ಲಿ ವ್ಯಾಖ್ಯಾನಿಸಿರುವಂತೆ ನನ್ನ ಸೆಲ್ಫಿಯು Snap ನ "ಸೇವೆಗಳ" ಭಾಗವಾಗಿದೆ.

ಸಾರಾಂಶದಲ್ಲಿ: ಈ ನನ್ನ ಸೆಲ್ಫಿ ನಿಯಮಗಳಲ್ಲಿ ಉಲ್ಲೇಖಿಸಿರುವ ಇತರ ನಿಯಮಗಳು ಮತ್ತು ನೀತಿಗಳ ಜೊತೆಗೆ, ಈ ನನ್ನ ಸೆಲ್ಫಿ ನಿಯಮಗಳು ಕಾನೂನು ಬಾಧ್ಯತೆಯ ಕರಾರನ್ನು ರೂಪಿಸುತ್ತವೆ ಮತ್ತು ನನ್ನ ಸೆಲ್ಫಿ ಮತ್ತು ನನ್ನ ಸೆಲ್ಫಿ ವೈಶಿಷ್ಟ್ಯಗಳ ಯಾವುದೇ ಬಳಕೆಯನ್ನು ನಿಯಂತ್ರಿಸುತ್ತವೆ.

2. ಪ್ರಾಥಮಿಕ ಸಂಗತಿಗಳು

a. ನನ್ನ ಸೆಲ್ಫಿ ಅನ್ನುವುದು ನನ್ನ ಸೆಲ್ಫಿ ವೈಶಿಷ್ಟ್ಯಗಳು ಸೇರಿದಂತೆ, ಜನರೇಟಿವ್ AI ವೈಶಿಷ್ಟ್ಯಗಳನ್ನು ಸಂಚಾಲಿತಗೊಳಿಸಲು Snapchat ಗೆ ನೀವು ಸಲ್ಲಿಸುವ ನಿಮ್ಮ ಫೋಟೋಗಳ ಒಂದು ತಾಣದ ನಿಲುಗಡೆಯಾಗಿದೆ. ನಿಮ್ಮನ್ನು (ಅಥವಾ ನಿಮ್ಮ ಸಾಮ್ಯತೆಯ ಚಿತ್ರವನ್ನು) ಪ್ರದರ್ಶಿಸುವ ಶೈಲಿಗೊಳಿಸಿದ ಪೋರ್ಟ್ರೇಟ್‌ಗಳನ್ನು ಜನರೇಟ್ ಮಾಡುವ ನನ್ನ ಸೆಲ್ಫಿ ವೈಶಿಷ್ಟ್ಯಗಳು ಸೇರಿದಂತೆ, ಜನರೇಟಿವ್ AI ವೈಶಿಷ್ಟ್ಯಗಳನ್ನು ನಿಮಗೆ ಒದಗಿಸಲು ನಾವು ನಿಮ್ಮ ಕುರಿತು ತಿಳಿದಿರುವ ಇತರ ಮಾಹಿತಿಯ ಜೊತೆಗೆ ಮೈ ಸೆಲ್ಫಿ ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ಬಳಸಲಾಗುತ್ತದೆ. ಸೇವೆಗಳಾದ್ಯಂತ ಬಳಸಲು ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಮೆಷಿನ್ ಲರ್ನಿಂಗ್ ಮಾಡೆಲ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು ಕೂಡ ನನ್ನ ಸೆಲ್ಫಿ ಅನ್ನು ಬಳಸಲಾಗುತ್ತದೆ. ನೀವು, Snap ಮತ್ತು ನಿಮ್ಮ Snapchat ಸ್ನೇಹಿತರು ಕೂಡ ನನ್ನ ಸೆಲ್ಫಿಯಿಂದ ಜನರೇಟ್ ಆದ ಚಿತ್ರಗಳನ್ನು ಸ್ವತಂತ್ರವಾಗಿ ರಚಿಸಬಹುದು ಮತ್ತು ಹಂಚಿಕೊಳ್ಳಬಹುದು, ಆ ಸನ್ನಿವೇಶದಲ್ಲಿ, ನಿಮ್ಮ Snapchat ಸ್ನೇಹಿತರು ಅಥವಾ Snap ಜನರೇಟ್ ಮಾಡಿದ ಚಿತ್ರಗಳಲ್ಲಿ ನಿಮಗೆ ಯಾವುದೇ ಸೂಚನೆ ನೀಡದೆ, ನೀವು (ಅಥವಾ ನಿಮ್ಮ ಸಾಮ್ಯತೆಯ ಚಿತ್ರ) ಕಾಣಿಸಿಕೊಳ್ಳಬಹುದು. ನನ್ನ ಸೆಲ್ಫಿ ಬಳಸುವ ಮೂಲಕ, ನೀವು (ಅಥವಾ ನಿಮ್ಮ ಸಾಮ್ಯತೆಯ ಚಿತ್ರ) ನಿಮಗೆ ಮಾತ್ರ ಕಾಣಿಸುವ ವೈಯಕ್ತಿಕಗೊಳಿಸಿದ ಪ್ರಾಯೋಜಿತ ಕಂಟೆಂಟ್ ಮತ್ತು ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಳ್ಳಬಹುದು ಹಾಗೂ ನಿಮಗೆ ಯಾವುದೇ ಪರಿಹಾರ ನೀಡದೆ Snap ನ ಅಥವಾ ಅದರ ವ್ಯವಹಾರ ಪಾಲುದಾರರ ಬ್ರ್ಯಾಂಡಿಂಗ್ ಅಥವಾ ಇತರ ಜಾಹೀರಾತು ನೀಡುವಿಕೆ ಕಂಟೆಂಟ್ ಅನ್ನು ಒಳಗೊಂಡಿರಬಹುದು ಎನ್ನುವುದನ್ನು ಕೂಡ ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ. 

b. ನನ್ನ ಸೆಲ್ಫಿ ಬಳಸುವ ಮೂಲಕ, ವಾಣಿಜ್ಯ ಮತ್ತು ವಾಣಿಜ್ಯೇತರ ಉದ್ದೇಶಗಳಿಗಾಗಿ, ಈಗ ತಿಳಿದಿರುವ ಅಥವಾ ನಂತರ ಅಭಿವೃದ್ಧಿಪಡಿಸಲಾಗುವ ಯಾವುದೇ ಸ್ವರೂಪ ಮತ್ತು ಯಾವುದೇ ಮತ್ತು ಎಲ್ಲ ಮಾಧ್ಯಮ ಅಥವಾ ವಿತರಣಾ ವಿಧಾನಗಳಲ್ಲಿ ನಿಮ್ಮ ನನ್ನ ಸೆಲ್ಫಿಯಿಂದ ವ್ಯುತ್ಪತ್ತಿಯಾದ ನಿಮ್ಮ ಮತ್ತು ನಿಮ್ಮ ಸಾಮ್ಯತೆಯ ರಚಿಸಿದ ಚಿತ್ರಗಳ ಎಲ್ಲ ಅಥವಾ ಯಾವುದೇ ಭಾಗದ ವ್ಯುತ್ಪನ್ನ ಕಾರ್ಯಗಳನ್ನು ಬಳಸಲು, ಸೃಷ್ಟಿಸಲು, ಪ್ರಚಾರ ಮಾಡಲು, ಪ್ರದರ್ಶಿಸಲು, ಪ್ರಸಾರ ಮಾಡಲು, ಒಟ್ಟುಗೂಡಿಸಲು, ಮರುಉತ್ಪಾದಿಸಲು, ವಿತರಣೆ ಮಾಡಲು, ಸಿಂಕ್ರೊನೈಸ್ ಮಾಡಲು, ಗ್ರಾಫಿಕ್‌ಗಳನ್ನು ಓವರ್‌ಲೇ ಮಾಡಲು ಮತ್ತು ಆಡಿಟರಿ ಎಫೆಕ್ಟ್‌ಗಳನ್ನು ಓವರ್‌ಲೇ ಮಾಡಲು, ಸಾರ್ವಜನಿಕವಾಗಿ ನಿರ್ವಹಿಸಲು ಮತ್ತು ಸಾರ್ವಜನಿಕವಾಗಿ ಪ್ರದರ್ಶಿಸಲು ಅನಿರ್ಬಂಧಿತ, ವಿಶ್ವಾದ್ಯಂತದ, ರಾಯಲ್ಟಿ-ಮುಕ್ತ, ಹಿಂಪಡೆಯಲಾಗದ ಮತ್ತು ಶಾಶ್ವತವಾದ ಹಕ್ಕು ಮತ್ತು ಪರವಾನಗಿಗಳನ್ನು ನೀವು Snap, ನಮ್ಮ ಅಂಗಸಂಸ್ಥೆಗಳು, ಸೇವೆಗಳ ಇತರ ಬಳಕೆದಾರರು ಮತ್ತು ನಮ್ಮ ವ್ಯವಹಾರ ಪಾಲುದಾರರಿಗೆ ನೀಡುತ್ತೀರಿ. 

c. ಬೇರೆ ಯಾರದೇ Snapchat ಅಕೌಂಟ್‌ಗಾಗಿ ನೀವು ನನ್ನ ಸೆಲ್ಫಿ ರಚಿಸಲಾಗದು, ಆದರೆ ನಿಮ್ಮ ನನ್ನ ಸೆಲ್ಫಿ ಬಳಸಿಕೊಂಡು Snapchat ನಲ್ಲಿ ಮತ್ತು Snapchat ಹೊರಗೆ ನೀವು ನಿಮ್ಮ AI Snap ಗಳು, ಡ್ರೀಮ್ಸ್, ಕ್ಯಾಮಿಯೋಗಳು ಮತ್ತು ಇತರ ನನ್ನ ಸೆಲ್ಫಿ ವೈಶಿಷ್ಟ್ಯಗಳನ್ನು ಹಂಚಿಕೊಳ್ಳಬಹುದು. ನೀವು Snapchat ಹೊರಗೆ ಹಂಚಿಕೊಳ್ಳಲು ನಿರ್ಧರಿಸಿದರೆ, ನೀವು Snap ವಾಟರ್‌ಮಾರ್ಕ್‌ಗಳು, ಮೆಟಾಡೇಟಾ ಅಥವಾ ಇತರ ಯಾವುದೇ ವೈಶಿಷ್ಟ್ಯಗಳು ಅಥವಾ ಲೋಗೋಗಳನ್ನು ತೆಗೆದುಹಾಕಲಾಗದು ಮತ್ತು ಹಾಗೆ ಮಾಡುವುದು ಈ ನನ್ನ ಸೆಲ್ಫಿ ನಿಯಮಗಳ ಉಲ್ಲಂಘನೆಯಾಗುತ್ತದೆ.

d. ನನ್ನ ಸೆಲ್ಫಿಗೆ ನಿಮ್ಮದನ್ನು ಹೊರತುಪಡಿಸಿ ಬೇರೆ ಯಾರದೇ ಫೋಟೋಗಳನ್ನು ಸಲ್ಲಿಸಲು ಅಥವಾ ಯಾವುದೇ ಡೀಪ್‌ಫೇಕ್‌ಗಳನ್ನು ಜನರೇಟ್ ಮಾಡಲು ನಿಮಗೆ ಅನುಮತಿಯಿಲ್ಲ ಮತ್ತು ಹಾಗೆ ಮಾಡುವುದು ಈ ನನ್ನ ಸೆಲ್ಫಿ ನಿಯಮಗಳ ಉಲ್ಲಂಘನೆಯಾಗುತ್ತದೆ.

e. ಈ ನನ್ನ ಸೆಲ್ಫಿ ನಿಯಮಗಳನ್ನು ನೀವು ಉಲ್ಲಂಘಿಸಿದರೆ, Snap ತನ್ನ ಸ್ವಂತ ವಿವೇಚನೆಯ ಮೇರೆಗೆ ಮತ್ತು ಕಾನೂನು ಮತ್ತು ಅದಕ್ಕೆ ಸಮಾನವಾದುದರಲ್ಲಿ ನಾವು ಹೊಂದಿರಬಹುದಾದ ಯಾವುದೇ ಪರಿಹಾರದ ಜೊತೆಗೆ, ನನ್ನ ಸೆಲ್ಫಿ ಬಳಸಲು ನಿಮಗೆ ಅನುಮತಿಯನ್ನು ತಕ್ಷಣವೇ ಸಮಾಪ್ತಿಗೊಳಿಸಬಹುದು ಮತ್ತು ನಿಮಗೆ ಯಾವುದೇ ಬಾಧ್ಯತೆಯಿಲ್ಲದೆ, ನಿಮ್ಮ Snapchat ಅಕೌಂಟ್‌ನಲ್ಲಿ ಯಾವುದೇ ನನ್ನ ಸೆಲ್ಫಿ ವೈಶಿಷ್ಟ್ಯಗಳನ್ನು ಹಿಂಪಡೆಯಬಹುದು.

ಸಾರಾಂಶದಲ್ಲಿ: ನನ್ನ ಸೆಲ್ಫಿ ಅನ್ನು ಕೇವಲ Snapchat ನಲ್ಲಿ ಮಾತ್ರ ಬಳಸಬಹುದು. ನೀವು ನನ್ನ ಸೆಲ್ಫಿಗೆ ಚಿತ್ರಗಳನ್ನು ಸಲ್ಲಿಸಿದರೆ, AI Snap ಗಳು, ಡ್ರೀಮ್ಸ್, ಕ್ಯಾಮಿಯೋಗಳು ಮತ್ತು ಇತರ ನನ್ನ ಸೆಲ್ಫಿ ವೈಶಿಷ್ಟ್ಯಗಳಂತಹವುಗಳಿಗಾಗಿ, ಚಿತ್ರಗಳನ್ನು ನಿಮ್ಮೊಂದಿಗೆ ತಯಾರಿಸುವ ಮತ್ತು ಜನರೇಟ್ ಮಾಡಿದ ಚಿತ್ರಗಳನ್ನು ವಿತರಣೆ ಮಾಡುವ ಸಲುವಾಗಿ ಚಿತ್ರ ಮತ್ತು ನಿಮ್ಮ ಸಾಮ್ಯತೆಯ ಚಿತ್ರವನ್ನು ಬಳಸಲು ನೀವು Snap ಮತ್ತು ಇತರರಿಗೆ ಅನುಮತಿಸುತ್ತೀರಿ, ಅವುಗಳನ್ನು ನಿಮ್ಮ ಸ್ನೇಹಿತರು, Snapchat ನಲ್ಲಿ ನಿಮಗೆ ತಲುಪಿಸಲಾಗುವ ವೈಯಕ್ತಿಕಗೊಳಿಸಲಾದ ಜಾಹೀರಾತುಗಳಲ್ಲಿ ಮತ್ತು ಇತರ ವಿಧಾನಗಳಲ್ಲಿ ಬಳಸಬಹುದು. ನನ್ನ ಸೆಲ್ಫಿ ವೈಶಿಷ್ಟ್ಯಗಳಿಂದ ಜನರೇಟ್ ಮಾಡಿದ ಚಿತ್ರಗಳನ್ನು Snapchat ನಲ್ಲಿ ಮತ್ತು ಹೊರಗೆ ಹಂಚಿಕೊಳ್ಳಬಹುದು. ನೀವು ಈ ನನ್ನ ಸೆಲ್ಫಿ ನಿಯಮಗಳನ್ನು ಉಲ್ಲಂಘಿಸಿದರೆ, ನನ್ನ ಸೆಲ್ಫಿ ಮತ್ತು ನನ್ನ ಸೆಲ್ಫಿ ವೈಶಿಷ್ಟ್ಯಗಳನ್ನು ಬಳಸುವ ನಿಮ್ಮ ಹಕ್ಕನ್ನು ನಾವು ಹಿಂಪಡೆಯಬಹುದು.

3. ಖರೀದಿ ಮತ್ತು ಪಾವತಿ

ಈ ನನ್ನ ಸೆಲ್ಫಿ ನಿಯಮಗಳಿಗೆ ಸೀಮಿತವಾಗದೆ, ಯಾವುದೇ ನನ್ನ ಸೆಲ್ಫಿ ವೈಶಿಷ್ಟ್ಯಗಳನ್ನು Snapchat+ ಸಬ್‌ಸ್ಕ್ರೈಬರ್‌ಗಳಿಗೆ ಲಭ್ಯವಾಗಿಸಿದರೆ ಅಥವಾ Snapchat ನಲ್ಲಿ ಪಾವತಿಸಿದ ವೈಶಿಷ್ಟ್ಯವಾಗಿ ಒದಗಿಸಿದರೆ, ನೀವು ಹೊಂದಿರಬಹುದಾದ ಯಾವುದೇ ಮರುಪಾವತಿ ಮತ್ತು ರದ್ದುಮಾಡುವಿಕೆ ಹಕ್ಕುಗಳು ಸೇರಿದಂತೆ (ಯಾವುದಾದರೂ ಇದ್ದಲ್ಲಿ), Snap ಪಾವತಿಸಿದ ವೈಶಿಷ್ಟ್ಯಗಳ ನಿಯಮಗಳು ನಿಮ್ಮ ಖರೀದಿಯನ್ನು ನಿಯಂತ್ರಿಸುತ್ತವೆ. Snap ಪಾವತಿಸಿದ ವೈಶಿಷ್ಟ್ಯಗಳ ನಿಯಮಗಳ ಅಡಿಯಲ್ಲಿ ಯಾವುದೇ ಖರೀದಿಸಿದ ಡಿಜಿಟಲ್ ಕಂಟೆಂಟ್ ಅಥವಾ ಡಿಜಿಟಲ್ ಸೇವೆಗಳನ್ನು "ಪಾವತಿಸಿದ ವೈಶಿಷ್ಟ್ಯ" ಎಂದು ಪರಿಗಣಿಸಲಾಗುತ್ತದೆ.

ಸಾರಾಂಶದಲ್ಲಿ: ನೀವು ಯಾವುದೇ ಪಾವತಿಸಿದ ನನ್ನ ಸೆಲ್ಫಿ ವೈಶಿಷ್ಟ್ಯಗಳನ್ನು ಖರೀದಿಸಿದರೆ ಅಥವಾ ಬಳಸಿದರೆ, ನಿಮ್ಮ ಖರೀದಿ ಮತ್ತು ಬಳಕೆಯನ್ನು ಈ ನನ್ನ ಸೆಲ್ಫಿ ನಿಯಮಗಳ ಜೊತೆಯಲ್ಲಿ Snap ಪಾವತಿಸಿದ ವೈಶಿಷ್ಟ್ಯಗಳ ನಿಯಮಗಳು ನಿಯಂತ್ರಿಸುತ್ತವೆ.

4. ಹಕ್ಕುನಿರಾಕರಣೆ; ಸೇವಾ ವಿವರಣೆ ಮತ್ತು ಲಭ್ಯತೆ; ದೋಷಗಳು

a. ನಿಮ್ಮ ಚಿತ್ರ ಅಥವಾ ಸಾಮ್ಯತೆಯನ್ನು ಒಳಗೊಂಡಿರುವ ಚಿತ್ರಗಳನ್ನು ಜನರೇಟ್ ಮಾಡುವ ನನ್ನ ಸೆಲ್ಫಿ ವೈಶಿಷ್ಟ್ಯವು ನೀವು ಒದಗಿಸುವ ಚಿತ್ರಗಳು ಮತ್ತು ಮಾಹಿತಿಯನ್ನು ಆಧರಿಸಿ (ಯಾವುದೇ ಪಠ್ಯ, ಚಿತ್ರಗಳು ಅಥವಾ ಇತರ ಮಾಹಿತಿಗಳು ಸೇರಿದಂತೆ) AI ನಿಂದ ಜನರೇಟ್ ಮಾಡಲ್ಪಡುತ್ತವೆ. Snapchat ನಲ್ಲಿ ನನ್ನ ಸೆಲ್ಫಿ ವೈಶಿಷ್ಟ್ಯಗಳು ಮತ್ತು ಯಾವುದೇ ಇತರ ಜನರೇಟಿವ್ AI ಸಂಚಾಲಿತ ವೈಶಿಷ್ಟ್ಯಗಳು, ಮುಂಚಿತವಾಗಿ ಊಹಿಸಲಾಗದ ಔಟ್‌ಪುಟ್‌ಗಳನ್ನು ರಚಿಸಬಲ್ಲವು. 

b. Snapchat ನಲ್ಲಿನ ನನ್ನ ಸೆಲ್ಫಿ ವೈಶಿಷ್ಟ್ಯಗಳು ಮತ್ತು ಇತರ ಯಾವುದೇ ಜನರೇಟಿವ್ AI-ಸಂಚಾಲಿತ ವೈಶಿಷ್ಟ್ಯಗಳು ನೀವು ಅವಮಾನಕರ ಅಥವಾ ಆಕ್ಷೇಪಾರ್ಹ ಎಂದು ಪರಿಗಣಿಸಬಹುದಾದ ಕಂಟೆಂಟ್ ಅನ್ನು ಸೃಷ್ಟಿಸಬಹುದು ಮತ್ತು ಈ ನನ್ನ ಸೆಲ್ಫಿ ನಿಯಮಗಳಿಗೆ ಒಪ್ಪುವ ಹಾಗೂ ನನ್ನ ಸೆಲ್ಫಿ, ನನ್ನ ಸೆಲ್ಫಿ ವೈಶಿಷ್ಟ್ಯಗಳು ಅಥವಾ ಇತರ ಯಾವುದೇ ಜನರೇಟಿವ್ AI-ಸಂಚಾಲಿತ ವೈಶಿಷ್ಟ್ಯಗಳನ್ನು ಬಳಸುವ ಮೂಲಕ, ಆ ಅಪಾಯವನ್ನು ನೀವು ಅಂಗೀಕರಿಸುತ್ತೀರಿ ಮತ್ತು ಊಹಿಸುತ್ತೀರಿ. ನನ್ನ ಸೆಲ್ಫಿ ವೈಶಿಷ್ಟ್ಯಗಳ ಮೂಲಕ AI ನಿಂದ ಜನರೇಟ್ ಆದ ಯಾವುದೇ ಕಂಟೆಂಟ್‌ನ ನಿಮ್ಮ ಬಳಕೆ ಮತ್ತು ಅದಕ್ಕೆ ಸಂಬಂಧಿಸಿ ನೀವು ತೆಗೆದುಕೊಳ್ಳುವ ಯಾವುದೇ ಕ್ರಮಗಳಿಗೆ ನೀವೇ ಜವಾಬ್ದಾರರು ಎನ್ನುವುದನ್ನು ಕೂಡ ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ. Snap ಸೇವೆಯ ನಿಯಮಗಳಲ್ಲಿ ಇರುವ ಹಕ್ಕುನಿರಾಕರಣೆಗಳ ಜೊತೆಗೆ, ನನ್ನ ಸೆಲ್ಫಿ ವೈಶಿಷ್ಟ್ಯಗಳು ಅಥವಾ ಇತರ ಜನರೇಟಿವ್ AI-ಸಂಚಾಲಿತ ವೈಶಿಷ್ಟ್ಯಗಳು ಅಥವಾ ಕಂಟೆಂಟ್‌ಗೆ ಸಂಬಂಧಿಸಿ Snap ಯಾವುದೇ ಪ್ರತಿನಿಧಿತ್ವಗಳು ಅಥವಾ ವಾರಂಟಿಗಳನ್ನು ಮಾಡುವುದಿಲ್ಲ ಮತ್ತು ನನ್ನ ಸೆಲ್ಫಿ ವೈಶಿಷ್ಟ್ಯಗಳು ಅಥವಾ ಇತರ ಜನರೇಟಿವ್ AI-ಸಂಚಾಲಿತ ವೈಶಿಷ್ಟ್ಯಗಳು ಅಥವಾ ಕಂಟೆಂಟ್‌ನ ಬಳಕೆ ಅಥವಾ ಅವುಗಳಿಗೆ ಸಂಬಂಧಿದಿದ ಕ್ರಮಗಳಿಗೆ Snap ಜವಾಬ್ದಾರವಾಗಿರುವುದಿಲ್ಲ.

c. ನನ್ನ ಸೆಲ್ಫಿ, ನನ್ನ ಸೆಲ್ಫಿ ವೈಶಿಷ್ಟ್ಯಗಳು ಅಥವಾ ಇತರ ಯಾವುದೇ ಜನರೇಟಿವ್ AI-ಸಂಚಾಲಿತ ವೈಶಿಷ್ಟ್ಯಗಳು ಎಲ್ಲ ಸಮಯದಲ್ಲೂ ಅಥವಾ ಯಾವುದೇ ನಿರ್ದಿಷ್ಟ ಸಮಯದಲ್ಲಿ ಲಭ್ಯವಿರುತ್ತವೆ ಎಂದಾಗಲೀ ಅಥವಾ ಅವುಗಳನ್ನು ನಾವು ಯಾವುದೇ ನಿರ್ದಿಷ್ಟ ಅವಧಿಯವರೆಗೆ ಒದಗಿಸುವುದನ್ನು ಮುಂದುವರಿಸುತ್ತೇವೆ ಎಂದಾಗಲೀ Snap ಖಾತರಿ ನೀಡುವುದಿಲ್ಲ. ನಿಮಗೆ ಪೂರ್ವ ಸೂಚನೆ ನೀಡದೆ ಅಥವಾ ಬಾಧ್ಯತೆಯಿಲ್ಲದೆ, ನಮ್ಮ ಸ್ವಂತ ವಿವೇಚನೆ ಮೇರೆಗೆ, ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಕ್ಕಾಗಿ ನನ್ನ ಸೆಲ್ಫಿ, ನನ್ನ ಸೆಲ್ಫಿ ವೈಶಿಷ್ಟ್ಯಗಳು ಅಥವಾ ಯಾವುದೇ ಜನರೇಟಿವ್ AI-ಸಂಚಾಲಿತ ವೈಶಿಷ್ಟ್ಯಗಳನ್ನು ತಕ್ಷಣವೇ ಮಾರ್ಪಾಡು, ರದ್ದು, ಅಮಾನತು, ಸ್ಥಗಿತ ಅಥವಾ ಸಮಾಪ್ತಿಗೊಳಿಸುವ ಹಕ್ಕನ್ನು Snap ಕಾಯ್ದಿರಿಸಿದೆ. ಇದರ ಜೊತೆಗೆ, ವೈಶಿಷ್ಟ್ಯಗಳನ್ನು ಸಾಧ್ಯವಿರುವಷ್ಟು ನಿಖರವಾಗಿ ವಿವರಿಸಲು ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತೇವಾದರೂ ಸಹ, ನಿರ್ದಿಷ್ಟ ವಿವರಗಳು (ಅಥವಾ ವೈಶಿಷ್ಟ್ಯಗಳು ಜನರೇಟ್ ಮಾಡುವ ಯಾವುದೇ ಔಟ್‌ಪುಟ್) ಸಂಪೂರ್ಣ, ನಿಖರ, ವಿಶ್ವಾಸಾರ್ಹ, ಪ್ರಸ್ತುತ ಅಥವಾ ದೋಷ-ಮುಕ್ತವಾಗಿರುತ್ತದೆ ಎಂದು ನಾವು ವಾರಂಟಿ ನೀಡುವುದಿಲ್ಲ.

ಸಾರಾಂಶದಲ್ಲಿ: ನನ್ನ ಸೆಲ್ಫಿ ವೈಶಿಷ್ಟ್ಯಗಳು ಅಥವಾ ಇತರ ಜನರೇಟಿವ್ AI-ಸಂಚಾಲಿತ ವೈಶಿಷ್ಟ್ಯಗಳು ಅಥವಾ ಕಂಟೆಂಟ್‌ಗೆ ಸಂಬಂಧಿಸಿ Snap ಯಾವುದೇ ಪ್ರತಿನಿಧಿತ್ವಗಳು ಅಥವಾ ವಾರಂಟಿಗಳನ್ನು ಮಾಡುವುದಿಲ್ಲ ಮತ್ತು ನನ್ನ ಸೆಲ್ಫಿ ವೈಶಿಷ್ಟ್ಯಗಳ ನಿಮ್ಮ ಬಳಕೆಗೆ ನೀವೇ ಜವಾಬ್ದಾರರಾಗಿರುತ್ತೀರಿ. ನನ್ನ ಸೆಲ್ಫಿ ವೈಶಿಷ್ಟ್ಯಗಳು ಅಥವಾ ಯಾವುದೇ ಜನರೇಟಿವ್ AI-ಸಂಚಾಲಿತ ವೈಶಿಷ್ಟ್ಯಗಳಿಂದ ಸೃಷ್ಟಿಸಲ್ಪಟ್ಟ ಯಾವುದೇ ಔಟ್‌ಪುಟ್‌ಗಳಿಗೆ Snap ಜವಾಬ್ದಾರವಾಗಿರುವುದಿಲ್ಲ. ನನ್ನ ಸೆಲ್ಫಿ, ನನ್ನ ಸೆಲ್ಫಿ ವೈಶಿಷ್ಟ್ಯಗಳು ಅಥವಾ ಯಾವುದೇ ಜನರೇಟಿವ್ AI-ಸಂಚಾಲಿತ ವೈಶಿಷ್ಟ್ಯಗಳನ್ನು ಯಾವುದೇ ಸಮಯದಲ್ಲಿ Snap, ಮಾರ್ಪಾಡು, ಸ್ಥಗಿತ ಅಥವಾ ಸಮಾಪ್ತಿ ಮಾಡಬಹುದು ಮತ್ತು ವೈಶಿಷ್ಟ್ಯದ ನಿರ್ದಿಷ್ಟವಿವರಗಳಿಗೆ ಸಂಬಂಧಿಸಿ ನಾವು ಯಾವುದೇ ಭರವಸೆಗಳನ್ನು ನೀಡುವುದಿಲ್ಲ.

5. ಈ ನನ್ನ ಸೆಲ್ಫಿ ನಿಯಮಗಳಿಗೆ ಬದಲಾವಣೆಗಳು

ಕಾಲಕಾಲಕ್ಕೆ, Snap ಸೇವೆಯ ನಿಯಮಗಳ ವಿಭಾಗ 14 ಕ್ಕೆ ಅನುಸಾರವಾಗಿ ಈ ನನ್ನ ಸೆಲ್ಫಿ ನಿಯಮಗಳನ್ನು ನಾವು ಪರಿಷ್ಕರಿಸಬಹುದು. ಮೇಲ್ಭಾಗದಲ್ಲಿರುವ "ಜಾರಿ" ದಿನಾಂಕ ಪರಿಶೀಲಿಸುವ ಮೂಲಕ ಈ ನನ್ನ ಸೆಲ್ಫಿ ನಿಯಮಗಳನ್ನು ಕೊನೆಯದಾಗಿ ಯಾವಾಗ ಪರಿಷ್ಕರಿಸಲಾಗಿದೆ ಎನ್ನುವುದನ್ನು ನೀವು ನಿರ್ಧರಿಸಬಹುದು. ಯಾವುದೇ ಸಮಯದಲ್ಲಿ ಈ ನನ್ನ ಸೆಲ್ಫಿ ನಿಯಮಗಳ ಯಾವುದೇ ಭಾಗಕ್ಕೆ ನೀವು ಒಪ್ಪದಿದ್ದರೆ, ನೀವು ನಿಮ್ಮ ಚಿತ್ರಗಳನ್ನು ಅಳಿಸಬಹುದು ಮತ್ತು Snapchat ನಲ್ಲಿ ನಿಮ್ಮ ಸೆಟ್ಟಿಂಗ್‌ಗಳಲ್ಲಿ ನನ್ನ ಸೆಲ್ಫಿಯಿಂದ ಹೊರಗುಳಿಯಬಹುದು.

ಸಾರಾಂಶದಲ್ಲಿ: ಕಾಲಕ್ರಮೇಣ ಈ ನನ್ನ ಸೆಲ್ಫಿ ನಿಯಮಗಳನ್ನು ನಾವು ಅಪ್‌ಡೇಟ್ ಮಾಡಬಹುದು. ಒಂದು ವೇಳೆ ನೀವು ಒಪ್ಪದೆ ಇರುವ ಬದಲಾವಣೆಗಳು ಇದ್ದಲ್ಲಿ, Snapchat ನಲ್ಲಿ ನಿಮ್ಮ ಸೆಟ್ಟಿಂಗ್‌ಗಳಲ್ಲಿ ನನ್ನ ಸೆಲ್ಫಿಯಿಂದ ನೀವು ಹೊರಗುಳಿಯಬಹುದು.

6. ನಮ್ಮಿಂದ ಸಂವಹನಗಳು

a. ಆ್ಯಪ್‌ನಲ್ಲಿನ ಅಧಿಸೂಚನೆಗಳು, Team Snapchat ಅಧಿಸೂಚನೆಗಳು ಅಥವಾ ಇತರ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ನಿಮ್ಮ ಖಾತೆಗೆ ಸೈನ್ ಅಪ್ ಮಾಡಲು ಬಳಸಿದ ಇಮೇಲ್ ಅಥವಾ ಫೋನ್‌ ಸಂಖ್ಯೆಗೆ, ನನ್ನ ಸೆಲ್ಫಿಗೆ ಹೊಸ ವೈಶಿಷ್ಟ್ಯಗಳು ಅಥವಾ ಬದಲಾವಣೆಗಳ ಕುರಿತು ಸೇರಿದಂತೆ, ನನ್ನ ಸೆಲ್ಫಿ ಮತ್ತು ಈ ನನ್ನ ಸೆಲ್ಫಿ ನಿಯಮಗಳ ಕುರಿತು ನಾವು ನಿಮಗೆ ಎಲೆಕ್ಟ್ರಾನಿಕ್ ಅಧಿಸೂಚನೆಗಳನ್ನು ಕಳುಹಿಸಬಹುದು. ನನ್ನ ಸೆಲ್ಫಿ ಬಳಸುವ ಮೂಲಕ, ಈ ನನ್ನ ಸೆಲ್ಫಿ ನಿಯಮಗಳಲ್ಲಿ ವಿವರಿಸಿದ ಎಲೆಕ್ಟ್ರಾನಿಕ್ ಸಂವಹನಗಳನ್ನು Snap ಮತ್ತು ನಮ್ಮ ಅಂಗಸಂಸ್ಥೆಗಳಿಂದ ಸ್ವೀಕರಿಸಲು ನೀವು ಸಮ್ಮತಿಸುತ್ತೀರಿ.

b. ನಾವು ನಿಮಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಒದಗಿಸುವ ಎಲ್ಲ ಒಪ್ಪಂದಗಳು, ಸೂಚನೆಗಳು, ಬಹಿರಂಗಪಡಿಸುವಿಕೆಗಳು ಮತ್ತು ಇತರ ಸಂವಹನಗಳು, ಅಂತಹ ಸಂವಹನಗಳು ಲಿಖಿತ ರೂಪದಲ್ಲಿ ಇರಬೇಕು ಎನ್ನುವ ಯಾವುದೇ ಕಾನೂನು ಅಗತ್ಯಗಳನ್ನು ಪೂರೈಸುತ್ತವೆ ಎಂದು ನೀವು ಒಪ್ಪುತ್ತೀರಿ.

ಸಾರಾಂಶದಲ್ಲಿ: ನಿಮ್ಮ ನನ್ನ ಸೆಲ್ಫಿ ಮತ್ತು ಈ ನನ್ನ ಸೆಲ್ಫಿ ನಿಯಮಗಳ ಕುರಿತ ಸಂದೇಶಗಳಿಗಾಗಿ ಗಮನಿಸುತ್ತಿರಿ.

7. ಅಂತಿಮ ನಿಯಮಗಳು

a. ಈ ನನ್ನ ಸೆಲ್ಫಿ ನಿಯಮಗಳು ಯಾವುದೇ ತೃತೀಯ-ಪಕ್ಷದ ಫಲಾನುಭವಿ ಹಕ್ಕುಗಳನ್ನು ಸೃಷ್ಟಿಸುವುದಿಲ್ಲ ಅಥವಾ ಪ್ರದಾನ ಮಾಡುವುದಿಲ್ಲ. ನಿಮಗೆ ನಾವು ವ್ಯಕ್ತವಾಗಿ ನೀಡದ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಿದ್ದೇವೆ.

b. ಈ ನನ್ನ ಸೆಲ್ಫಿ ನಿಯಮಗಳನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ ಮತ್ತು ಈ ನನ್ನ ಸೆಲ್ಫಿ ನಿಯಮಗಳು ಇಂಗ್ಲಿಷ್ ಆವೃತ್ತಿಯೊಂದಿಗೆ ಸಂಘರ್ಷ ಹೊಂದಿರುವ ಮಟ್ಟಿಗೆ, ಇಂಗ್ಲಿಷ್ ಆವೃತ್ತಿ ನಿಯಂತ್ರಿಸುತ್ತದೆ.

c. ಈ ನನ್ನ ಸೆಲ್ಫಿ ನಿಯಮಗಳ ವಿಭಾಗ 2-6, ಈ ನನ್ನ ಸೆಲ್ಫಿ ನಿಯಮಗಳ ಯಾವುದೇ ಅವಧಿ ಮೀರುವಿಕೆ ಅಥವಾ ಸಮಾಪ್ತಿಯ ಬಳಿಕವೂ ಅಸ್ತಿತ್ವದಲ್ಲಿರುತ್ತವೆ.

ಸಾರಾಂಶದಲ್ಲಿ: ಈ ನನ್ನ ಸೆಲ್ಫಿ ನಿಯಮಗಳು ಯಾವುದೇ ತೃತೀಯ-ಪಕ್ಷದ ನಿಯಮಗಳನ್ನು ಸೃಷ್ಟಿಸುವುದಿಲ್ಲ ಮತ್ತು ಈ ನನ್ನ ಸೆಲ್ಫಿ ನಿಯಮಗಳ ಕೆಲವು ನಿಬಂಧನೆಗಳು ಸಮಾಪ್ತಿಯ ಬಳಿಕವೂ ಅಸ್ತಿತ್ವದಲ್ಲಿರುತ್ತವೆ.

8. ನಮ್ಮನ್ನು ಸಂಪರ್ಕಿಸಿ

ಕಾಮೆಂಟ್‌ಗಳು, ಪ್ರಶ್ನೆಗಳು, ಕಳವಳಗಳು ಅಥವಾ ಸಲಹೆಗಳನ್ನು Snap ಸ್ವಾಗತಿಸುತ್ತದೆ. ಯಾವುದೇ ದೂರುಗಳು ಅಥವಾ ಪ್ರತಿಕ್ರಿಯೆಗಳೊಂದಿಗೆ ನೀವು ಈ ಮುಂದಿನ ಸಂಪರ್ಕ ಬಿಂದುಗಳಲ್ಲಿ ನಮ್ಮನ್ನು ಸಂಪರ್ಕಿಸಬಹುದು:

  • ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದರೆ, ನಮ್ಮ ಮೇಲಿಂಗ್ ವಿಳಾಸ 3000 31st St., Santa Monica, CA 90405.

  • ನೀವು ಏಷ್ಯಾ-ಪೆಸಿಫಿಕ್ ಪ್ರದೇಶದ ಒಂದು ದೇಶದೊಳಗೆ ವಾಸಿಸುತ್ತಿದ್ದರೆ, ನಮ್ಮ ಮೇಲಿಂಗ್ ವಿಳಾಸ Singapore at Marina One West Tower, 018937, Singapore with a UEN of T20FC0031F.

  • ನೀವು ಯುನೈಟೆಡ್ ಸ್ಟೇಟ್ಸ್ ಅಥವಾ ಏಷ್ಯಾ ಪೆಸಿಫಿಕ್ ಪ್ರದೇಶಕ್ಕೆ ಹೊರತಾದ ಬೇರೆ ಯಾವುದೇ ದೇಶದಲ್ಲಿ ವಾಸಿಸುತ್ತಿದ್ದರೆ, ನಮ್ಮ ಮೇಲಿಂಗ್ ವಿಳಾಸ: Snap Group Limited, a company registered in England and located at 50 Cowcross Street, Floor 2, London, EC1M 6AL, United Kingdom, with company number 09763672. ಅಧಿಕೃತ ಪ್ರತಿನಿಧಿ: ರಾನನ್ ಹ್ಯಾರಿಸ್, ನಿರ್ದೇಶಕ. ವ್ಯಾಟ್ ಐಡಿ: GB 237218316.

ನನ್ನ ಸೆಲ್ಫಿ ಬೆಂಬಲ

ಸಾಮಾನ್ಯ ಪ್ರಶ್ನೆಗಳಿಗಾಗಿ: Snapchat ಸಪೋರ್ಟ್

ನಮ್ಮ ಬಳಕೆದಾರರ ಅಭಿಪ್ರಾಯವನ್ನು ಕೇಳಿಸಿಕೊಳ್ಳಲು ನಾವು ಯಾವಾಗಲೂ ಇಷ್ಟಪಡುತ್ತೇವೆ. ಆದರೆ ಒಂದು ವೇಳೆ ನೀವು ಪ್ರತಿಕ್ರಿಯೆ ಅಥವಾ ಸಲಹೆಯನ್ನು ನೀಡಿದರೆ, ನಿಮಗೆ ಯಾವುದೇ ಭತ್ಯೆ ನೀಡದೆ ನಿಮ್ಮ ವಿಚಾರಗಳನ್ನು ನಾವು ಬಳಸಿಕೊಳ್ಳಬಹುದು ಎನ್ನುವುದು ನಿಮಗೆ ತಿಳಿದಿರಲಿ.