Snap ಗಾತ್ರ ಮತ್ತು ಶೈಲಿಯ ಪರಿಹಾರಗಳ ಗೌಪ್ಯತಾ ಸೂಚನೆ
ಜಾರಿ: ಜನವರಿ 19, 2023
ನಮ್ಮ Fit Finder ('ನನ್ನ ಗಾತ್ರ ಕಂಡುಹಿಡಿಯಿರಿ', 'Fit Finder', ಅಥವಾ 'Style Finder' ಮುಂತಾದ ಪದಗಳ ಮೂಲಕ ಆ್ಯಕ್ಸೆಸ್ ಮಾಡಬಹುದು), 2D Try On ಮತ್ತು Style Finder ಸೇವೆಗಳು ಸೇರಿದಂತೆ, ಉಡುಪುಗಳು ಮತ್ತು ಶೂಗಳನ್ನು ಖರೀದಿಸುವ ನಿರೀಕ್ಷೆಯಲ್ಲಿರುವ ಶಾಪರ್‌ಗಳಿಗೆ Snap "ಗಾತ್ರ ಮತ್ತು ಶೈಲಿಯ ಪರಿಹಾರಗಳು" ಅನ್ನು ಒದಗಿಸುತ್ತದೆ. ಗಾತ್ರ ಮತ್ತು ಶೈಲಿಯ ಶಿಫಾರಸುಗಳನ್ನು ಹಾಗೂ ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ಒದಗಿಸಲು, ಶಾಪರ್‌ಗಳು ಒದಗಿಸಿದ ಫಿಟ್ ಮತ್ತು ಗಾತ್ರದ ಮಾಹಿತಿ, ಅಂಗಡಿಗಳು ಒದಗಿಸಿದ ಖರೀದಿ ಮತ್ತು ಹಿಂತಿರುಗಿಸುವಿಕೆ ಡೇಟಾ ಮತ್ತು ಶಾಪರ್ ಬ್ರೌಸಿಂಗ್ ಅವಲೋಕನಗಳನ್ನು ಆಧರಿಸಿ, ಈ ತಂತ್ರಜ್ಞಾನಗಳು ಅತ್ಯಾಧುನಿಕ ಮಷಿನ್ ಲರ್ನಿಂಗ್ ಆಲ್ಗಾರಿದಂಗಳನ್ನು ಬಳಸುತ್ತವೆ. ಈ ಪರಿಹಾರಗಳು Snapchat ನಲ್ಲಿ ಹಾಗೂ ನಮ್ಮ ಪಾಲುದಾರರ ಅಂಗಡಿಗಳ ವೆಬ್‌ಸೈಟ್‌ಗಳು, ಆ್ಯಪ್‌ಗಳು ಮತ್ತು Shopify ಸ್ಟೋರ್‌ಗಳಲ್ಲಿ ಲಭ್ಯವಿರಬಹುದು.
ನೀವು ನಮ್ಮ ಗಾತ್ರ ಮತ್ತು ಶೈಲಿಯ ಪರಿಹಾರಗಳನ್ನು ಬಳಸಿದಾಗ ವೈಯಕ್ತಿಕ ಮಾಹಿತಿಯನ್ನು 'ಯಾರು, ಏನು ಮತ್ತು ಹೇಗೆ' ಪ್ರಕ್ರಿಯೆಗೊಳಿಸುತ್ತಾರೆ ಎನ್ನುವುದನ್ನು ನಿಮಗೆ ತಿಳಿಸಲು ಈ ಸೂಚನೆಯನ್ನು ವಿನ್ಯಾಸಗೊಳಿಸಲಾಗಿದೆ.
ನೀವು ನಮ್ಮ ಗಾತ್ರ ಮತ್ತು ಶೈಲಿಯ ಪರಿಹಾರಗಳನ್ನು ಬಳಸಿದಾಗ, ನಾವು ನಿಮ್ಮ ಕುರಿತ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಇದನ್ನು Snap Inc. ನಿಯಂತ್ರಿಸುತ್ತದೆ. Snap ನಲ್ಲಿ, ನಿಮ್ಮ ಗೌಪ್ಯತೆಗೆ ನಾವು ಆದ್ಯತೆ ನೀಡುತ್ತೇವೆ. ನೀವು ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರತಿ ಬಾರಿ ಬಳಸಿದಾಗ ನಿಮ್ಮ ವಿಶ್ವಾಸವನ್ನು ಗಳಿಸುತ್ತೇವೆ ಎನ್ನುವುದು ನಮಗೆ ತಿಳಿದಿದೆ. ನಮ್ಮ ಗೌಪ್ಯತಾ ತತ್ವಗಳು ಅನ್ನು ಓದುವ ಮೂಲಕ ನಮ್ಮ ಧೋರಣೆಯ ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಬಹುದು. ಒಂದು ವೇಳೆ ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದಲ್ಲಿ, ನಮ್ಮನ್ನು ಸಂಪರ್ಕಿಸಿ.
ನಮ್ಮ ಗಾತ್ರ ಮತ್ತು ಶೈಲಿಯ ಪರಿಹಾರಗಳು ನಿಮ್ಮ ಕುರಿತು ಡೇಟಾವನ್ನು ಸಂಗ್ರಹಿಸಬಹುದು:
ನಮ್ಮ ಪಾಲುದಾರರ ಅಂಗಡಿಗಳ ವೆಬ್‌ಸೈಟ್‌ಗಳಲ್ಲಿ, ಆ್ಯಪ್‌ಗಳಲ್ಲಿ ಮತ್ತು Shopify ಸ್ಟೋರ್‌ಗಳಲ್ಲಿ: ನೀವು ನಮ್ಮ ಗಾತ್ರ ಮತ್ತು ಶೈಲಿಯ ಪರಿಹಾರಗಳನ್ನು ಬಳಸಿದಾಗ ಅಥವಾ ಯಾವುದೇ ಪಾಲುದಾರರ ವೆಬ್‌ಸೈಟ್, ಆ್ಯಪ್ ಅಥವಾ Shopify ಸ್ಟೋರ್‌ನಲ್ಲಿ ನಮ್ಮ ಅವಶ್ಯಕವಲ್ಲದ ಕುಕೀಗಳು ಅನ್ನು ಅನುಮತಿಸಿದಾಗ.
Snapchat ನಲ್ಲಿ: ನೀವು ನಮ್ಮ ಪಾಲುದಾರರ ಅಂಗಡಿಗಳ ಉತ್ಪನ್ನಗಳನ್ನು ಬ್ರೌಸ್ ಮಾಡಿದಾಗ ಮತ್ತು Snapchat ಒಳಗೆ ನಮ್ಮ ಗಾತ್ರ ಮತ್ತು ಶೈಲಿಯ ಪರಿಹಾರಗಳನ್ನು ಬಳಸಿದಾಗ.
ನಾವು ಸಂಗ್ರಹಿಸಬಹುದಾದ ವೈಯಕ್ತಿಕ ಮಾಹಿತಿಯ ಪ್ರವರ್ಗಗಳು:
ವರ್ಗ
ಅದು ಏನು?
ಉದಾಹರಣೆ(ಗಳು)
ಅದು ಎಲ್ಲಿಂದ ಬರುತ್ತದೆ?
Fit Profile
ಇದು Fit Finder ಮೂಲಕ ನೀವು ನಮಗೆ ಒದಗಿಸುವ ಮಾಹಿತಿಯಾಗಿದೆ. ಇರುವಂತೆಯೇ ನಾವು ನಿಮ್ಮ ಅಳತೆಗಳನ್ನು ಬಳಸುತ್ತೇವೆ - ಮತ್ತು ಅವುಗಳಿಂದ ನಾವು ಇತರ ಮಾಹಿತಿಗಳನ್ನು ನಿರ್ಧರಿಸುವುದಿಲ್ಲ.
- ಅಳತೆಗಳು, ಉದಾಹರಣೆಗೆ ಎತ್ತರ, ತೂಕ, ಬ್ರಾ ಗಾತ್ರ
- ಜನಸಂಖ್ಯಾತ್ಮಕ ವಿವರಗಳು, ಉದಾಹರಣೆಗೆ ಲಿಂಗ, ವಯಸ್ಸು
- ಉಲ್ಲೇಖ ಉಡುಪು ಅಥವಾ ಬ್ರ್ಯಾಂಡ್
- ದೇಹದ ಆಕಾರ
- ಫಿಟ್ ಆದ್ಯತೆ
ನೀವು
2D ಟ್ರೈ ಆನ್ ಚಿತ್ರಗಳು
ಒಂದು ವೇಳೆ ನೀವು 2D ಟ್ರೈ ಆನ್ ಬಳಸಿದರೆ, ನೀವು ಒಂದು ಚಿತ್ರವನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ನಿಮ್ಮ ಆಯ್ದ ಉತ್ಪನ್ನವನ್ನು ತೋರಿಸಲು ಎರಡನೆಯ ಚಿತ್ರವನ್ನು ಸ್ವಯಂಚಾಲಿತವಾಗಿ ಸೃಷ್ಟಿಸಲು ನಾವು ಇದನ್ನು ಬಳಸುತ್ತೇವೆ.
Snapchat ನಲ್ಲಿ ತೆಗೆದುಕೊಂಡ ಒಂದು Snap ಅಥವಾ ನಿಮ್ಮ ಫೋನ್‌ನಿಂದ ಒಂದು ಫೋಟೋ ಅಪ್‌ಲೋಡ್.
ನಿಮ್ಮ ಚಿತ್ರವನ್ನು ನೀವೇ ಒದಗಿಸಿದ್ದೀರಿ.
2D ಟ್ರೈ ಆನ್ ಚಿತ್ರವನ್ನು ನಾವು ಸೃಷ್ಟಿಸಿದ್ದೇವೆ.
Fit Finder ಬಳಕೆದಾರ ID
ಇವು ನಾವು ನಿಮಗೆ ನಿಯೋಜಿಸುವ ವಿಶಿಷ್ಟ ಕೋಡ್(ಗಳು). ಅವುಗಳು 'ಹ್ಯಾಶ್ಡ್' IP ವಿಳಾಸವನ್ನು ಒಳಗೊಂಡಿರಬಹುದು ಮತ್ತು ಕುಕೀಗಳಲ್ಲಿ ನಿಮ್ಮ ಸಾಧನದಲ್ಲಿ ಸಂಗ್ರಹಣೆಯಾಗಬಹುದು.
ಕೋಡ್‌ಗಳು ಹೀಗೆ ಕಾಣಬಹುದು: s%3AURyekqSxqbWNDr1uqUTLeQ6InbJ-_qwK.ZDEycZECULwUmwSp2sVvLd-Ge431SMSpNo4wWGuvsPwI
ನಮಗೆ
ಅಂಗಡಿ ಬಳಕೆದಾರ ID (ಲಭ್ಯವಿದ್ದಲ್ಲಿ)
ಇದು ವಿಶಿಷ್ಟ ಐಡೆಂಟಿಫೈಯರ್ ಆಗಿದ್ದು ನೀವು ಭೇಟಿ ನೀಡುತ್ತಿರುವ ಅಂಗಡಿಯು ನಿಮಗೆ ನಿಯೋಜಿಸುತ್ತದೆ ಮತ್ತು ನಮ್ಮೊಂದಿಗೆ ಹಂಚಿಕೊಳ್ಳಬಹುದು.
ಇದು ಸಾಮಾನ್ಯವಾಗಿ ಒಂದು ಹೊಸ ಅಕ್ಷರ ಮತ್ತು ಅಂಕಿಗಳ ಕೋಡ್ ಆಗಿರುತ್ತದೆ (ಉದಾ. 908773243473), ಆದರೆ ನಿಮ್ಮ ಬ್ರೌಸರ್/ಸಾಧನವನ್ನು ಗುರುತಿಸಲು ಈಗಾಗಲೇ ಅಂಗಡಿಯು ಬಳಸುತ್ತಿರುವ ಇತರ ID(ಗಳು) ಕೂಡ ಆಗಿರಬಹುದು.
ಅಂಗಡಿ ಮಾಲೀಕ(ರು)
ಖರೀದಿ ಮತ್ತು ಹಿಂತಿರುಗಿಸುವಿಕೆ ಡೇಟಾ
ಪಾಲುದಾರರ ಅಂಗಡಿಗಳಲ್ಲಿ ನೀವು ಮಾಡುವ ಖರೀದಿಗಳ ವಿವರಗಳು, ನೀವು ಅವುಗಳನ್ನು ಹಿಂತಿರುಗಿಸಿದ್ದೀರಾ ಎನ್ನುವುದು ಸೇರಿದಂತೆ. ಇದು ಹಿಂದಿನ ಖರೀದಿಗಳು ಮತ್ತು ಹಿಂದಿರುಗಿಸುವಿಕೆಗಳ ವಿವರಗಳನ್ನೂ ಒಳಗೊಂಡಿರಬಹುದು.
ಆರ್ಡರ್: 10343432; ಉತ್ಪನ್ನ: 245323; ಗಾತ್ರ L; ವಾಪಸು ಕೊಡಲಾಗಿದೆ
ಅಂಗಡಿ ಮಾಲೀಕ(ರು) (ಮತ್ತು ಒಂದು ವೇಳೆ ಹೋಸ್ಟಿಂಗ್ ಮಾಡುತ್ತಿದ್ದಲ್ಲಿ Shopify)
ಈವೆಂಟ್ ಡೇಟಾ
ಇದು ನಮ್ಮ ಗಾತ್ರ ಮತ್ತು ಶೈಲಿಯ ಪರಿಹಾರಗಳ ನಿಮ್ಮ ಬಳಕೆ ಮತ್ತು ನಮ್ಮ ಪಾಲುದಾರರ ಅಂಗಡಿಯ ವೆಬ್‌ಸೈಟ್‌ಗಳು, ಆ್ಯಪ್‌ಗಳು, Snapchat ಸ್ಟೋರ್‌ಗಳು ಮತ್ತು Shopify ಸ್ಟೋರ್‌ಗಳ ಕುರಿತ ಮಾಹಿತಿಯಾಗಿದೆ.
ಉತ್ಪನ್ನ A ಗಾಗಿ ಶಿಫಾರಸನ್ನು ನೋಡಿದ್ದಾರೆ; ಅಂಗಡಿ Y ನಲ್ಲಿ ಪುಟ X ಮೇಲೆ ಕ್ಲಿಕ್ ಮಾಡಿದ್ದಾರೆ; ಉತ್ಪನ್ನ ID 245323 ನೋಡಿದ್ದಾರೆ; ಫಿಟ್ ಫೈಂಡರ್ ತೆರೆದಿದ್ದಾರೆ; Fit Profile ಸಲ್ಲಿಸಿದ್ದಾರೆ; ಗಾತ್ರ M ಶಿಫಾರಸು ಮಾಡಲಾಗಿದೆ
ನಿಮ್ಮ ಬ್ರೌಸರ್ ಮತ್ತು ನಾವು
ತಾಂತ್ರಿಕ ಡೇಟಾ
ಇದು ನಮ್ಮ ಗಾತ್ರ ಮತ್ತು ಶೈಲಿಯ ಪರಿಹಾರಗಳನ್ನು ಆ್ಯಕ್ಸೆಸ್ ಮಾಡಲು ನೀವು ಬಳಸುತ್ತಿರುವ ಸಾಧನ ಮತ್ತು ಬ್ರೌಸರ್ ಕುರಿತ ಮಾಹಿತಿಯಾಗಿದೆ
ಬ್ರೌಸರ್ ಪ್ರಕಾರ + ಆವೃತ್ತಿ, ಆಪರೇಟಿಂಗ್ ಸಿಸ್ಟಂ, ಸಾಧನದ ಹೆಸರು, IP ವಿಳಾಸ, ನೀವು ಯಾವುದನ್ನು ಕ್ಲಿಕ್ ಮಾಡುತ್ತೀರಿ ಮತ್ತು ಉಂಟಾಗುವ ದೋಷಗಳು.
ನಿಮ್ಮ ಬ್ರೌಸರ್
ನೀವು ನಿಮ್ಮ Fit Profile ಪ್ರವೇಶಿಸುವ ಮತ್ತು ನಮ್ಮಿಂದ ಶಿಫಾರಸುಗಳನ್ನು ಕೋರುವ ಮುನ್ನ, ನಿಮ್ಮ ಹಿಂದಿನ ಖರೀದಿ ಇತಿಹಾಸವನ್ನು ಆಧರಿಸಿ, ನಮ್ಮ ಕೆಲವು ಪಾಲುದಾರ ಅಂಗಡಿಗಳು, ಅವರ ವೆಬ್‌ಸೈಟ್‌ಗಳು, ಆ್ಯಪ್‌ಗಳು, Snapchat ಸ್ಟೋರ್‌ಗಳು ಮತ್ತು Shopify ಸ್ಟೋರ್‌ಗಳಲ್ಲಿ ನಿಮಗೆ ಗಾತ್ರದ ಶಿಫಾರಸುಗಳನ್ನು ಒದಗಿಸುವಂತೆ ನಮ್ಮನ್ನು ಕೇಳುತ್ತವೆ ಎನ್ನುವುದನ್ನು ಗಮನದಲ್ಲಿಟ್ಟಿಕೊಳ್ಳಿ. ಶಾಪ್ ಬಳಕೆದಾರ ID, ಉತ್ಪನ್ನ ಮತ್ತು ಹಿಂದಿನ ಖರೀದಿ ಮಾಹಿತಿಯನ್ನು ನಮಗೆ ಒದಗಿಸುವುದು ಕಾನೂನುಬದ್ಧವಾಗಿದೆ ಎಂದು ನಮ್ಮ ಪಾಲುದಾರ ಅಂಗಡಿಗಳು ಖಚಿತಪಡಿಸಿಕೊಳ್ಳಬೇಕು, ಇದರಿಂದ ನಾವು ಈ ತಕ್ಷಣದ ಶಿಫಾರಸುಗಳನ್ನು ಒದಗಿಸಬಹುದು.
Snapchat ನಲ್ಲಿ ನಮ್ಮ ಶೈಲಿ ಮತ್ತು ಗಾತ್ರದ ಪರಿಹಾರಗಳನ್ನು ಬಳಸುತ್ತಿರಬಹುದು ಅಥವಾ ಪಾಲುದಾರರ ಅಂಗಡಿಯ ವೆಬ್‌ಸೈಟ್ ಅಥವಾ ಸಂಬಂಧಿತ ಆ್ಯಪ್‌ನಲ್ಲಿ ಬಳಸುತ್ತಿರಬಹುದು, ನಾವು ಸಂಗ್ರಹಿಸುವ ವೈಯಕ್ತಿಕ ಮಾಹಿತಿಯನ್ನು ಇದಕ್ಕಾಗಿ ನಾವು ಬಳಸಬಹುದು:
ಉದ್ದೇಶ
ಡೇಟಾ ಪ್ರವರ್ಗಗಳು
ಸಮರ್ಥನೆ (EU/UK GDPR ಮತ್ತು ಅದೇರ ರೀತಿಯವುಗಳ ಅಡಿಯಲ್ಲಿ ಕಾನೂನುಬದ್ಧ ಆಧಾರ)
ನೀವು ವಿನಂತಿಸಿದಾಗ ನಮ್ಮ ಸ್ವಯಂ-ಸುಧಾರಣೆಯ ಗಾತ್ರ ಮತ್ತು ಶೈಲಿಯ ಪರಿಹಾರವನ್ನು ಒದಗಿಸಲು. ಲಭ್ಯವಿರುವಲ್ಲಿ, ಇದು ನಿಮ್ಮ ಮತ್ತು ಇತರರ ನಡವಳಿಕೆಗಳಿಂದ ತಿಳಿದುಕೊಳ್ಳುವ ಮೂಲಕ, ಉತ್ಪನ್ನದ ಗಾತ್ರ ಮತ್ತು ಶೈಲಿಯ ಶಿಫಾರಸುಗಳನ್ನು ನಿಮ್ಮ ಗಾತ್ರ ಮತ್ತು ಶೈಲಿಗೆ ಹೊಂದಿಸಲಾಗಿದೆ ಎಂದು ಖಚಿತಪಡಿಸುವ ಗುರಿ ಹೊಂದಿದೆ.
- Fit Profile
- Fit Analytics ಬಳಕೆದಾರರ ID
- ಅಂಗಡಿ ಬಳಕೆದಾರ ID
- ಖರೀದಿ ಮತ್ತು ಹಿಂತಿರುಗಿಸುವಿಕೆ ಡೇಟಾ
- ಈವೆಂಟ್ ಡೇಟಾ
ಒಪ್ಪಂದ. ನೀವು ವಿನಂತಿಸಿದ ಸೇವೆಗಳನ್ನು ನಿಮಗೆ ಒದಗಿಸಲು ಈ ಪ್ರಕ್ರಿಯೆಗೊಳಿಸುವಿಕೆ ಅಗತ್ಯವಿದೆ.
ನೀವು ವಿನಂತಿಸಿದಾಗ ನಮ್ಮ 2D Try On ಸೇವೆಯನ್ನು ನಿಮಗೆ ಒದಗಿಸಲು ಲಭ್ಯವಿರುವಲ್ಲಿ, ನೀವು ನೋಡುತ್ತಿರುವ ಚಿತ್ರಕ್ಕಾಗಿ 2D Try On ಚಿತ್ರವನ್ನು ನಿಮಗೆ ಒದಗಿಸುವ ಉದ್ದೇಶವನ್ನು ಇದು ಹೊಂದಿದೆ.
2D ಟ್ರೈ ಆನ್ ಚಿತ್ರಗಳು
ಒಪ್ಪಂದ. ನೀವು ವಿನಂತಿಸಿದ ಸೇವೆಗಳನ್ನು ನಿಮಗೆ ಒದಗಿಸಲು ಈ ಪ್ರಕ್ರಿಯೆಗೊಳಿಸುವಿಕೆ ಅಗತ್ಯವಿದೆ.
ಸೇವಾ ಕಾರ್ಯಕ್ಷಮತೆಯನ್ನು ಅಳೆಯಲು, ಸುಧಾರಣೆಗಳನ್ನು ಚಾಲನೆಗೊಳಿಸಲು ಮತ್ತು ನಮ್ಮ ಪಾಲುದಾರರು ಹಾಗೂ ಇತರರೊಂದಿಗೆ ಹಂಚಿಕೊಳ್ಳಲು ಅಂಕಿಅಂಶಗಳನ್ನು ಸಿದ್ಧಪಡಿಸುವುದಕ್ಕಾಗಿ.
ಎಲ್ಲ (2D Try On ಚಿತ್ರಗಳನ್ನು ಹೊರತುಪಡಿಸಿ)
ಕಾನೂನುಬದ್ಧ ಹಿತಾಸಕ್ತಿ. ಈ ಪ್ರಕ್ರಿಯೆಗೊಳಿಸುವಿಕೆಯು ಎಲ್ಲರಿಗೂ ಪ್ರಯೋಜನಕಾರಿಯಾಗಿದೆ (ನೀವು ಸೇರಿದಂತೆ). ಅಂಕಿಅಂಶಗಳನ್ನು ಅನಾಮಧೇಯಗೊಳಿಸಲಾಗುತ್ತದೆ ಮತ್ತು ವೈಯಕ್ತಿಕವಲ್ಲದ, ಒಟ್ಟುಗೂಡಿಸಿದ ವಿಧಾನದಲ್ಲಿ ಪ್ರಸ್ತುತಪಡಿಸಲಾಗುತ್ತದೆ.
ಇನ್ನಷ್ಟು ಸಾಮಾನ್ಯ ವಿಶ್ಲೇಷಣೆಗಳ ಬಳಕೆಗಾಗಿ. ಇತರ Snap ಉತ್ಪನ್ನ ಮತ್ತು ಸೇವಾ ಸುಧಾರಣೆಗಳನ್ನು ಮುನ್ನಡೆಸಲು ನಮ್ಮ ಗಾತ್ರ ಮತ್ತು ಶೈಲಿಯ ಪರಿಹಾರಗಳು ಜನರೇಟ್ ಮಾಡಿದ ಡೇಟಾವನ್ನು Snap ಬಳಸಬಹುದು.
ಎಲ್ಲ (2D Try On ಚಿತ್ರಗಳನ್ನು ಹೊರತುಪಡಿಸಿ)
ಕಾನೂನುಬದ್ಧ ಹಿತಾಸಕ್ತಿ. ಈ ಪ್ರಕ್ರಿಯೆಗೊಳಿಸುವಿಕೆ ನಮಗೆ ಮತ್ತು ನಮ್ಮ ಉತ್ಪನ್ನಗಳು ಹಾಗೂ ಸೇವೆಗಳ ಬಳಕೆದಾರರಿಗೆ ಪ್ರಯೋಜನಕಾರಿಯಾಗಿದೆ. ಒಂದು ವೇಳೆ ನೀವು ಅವಶ್ಯಕವಲ್ಲದ ಕುಕೀಗಳನ್ನು ಪಾಲುದಾರರ ಅಂಗಡಿಯ ವೆಬ್‌ಸೈಟ್‌ಗಳು, ಆ್ಯಪ್‌ಗಳು ಮತ್ತು Shopify ಸ್ಟೋರ್‌ಗಳಲ್ಲಿ ತಿರಸ್ಕರಿಸಿದರೆ, ಇದು ಈ ಉದ್ದೇಶಕ್ಕಾಗಿ Snapchat ನಲ್ಲಿ ಸಂಗ್ರಹಿಸಿದ ಡೇಟಾವನ್ನು ಮಿತಿಗೊಳಿಸುತ್ತದೆ.
ಕಾನೂನು (ನಮ್ಮ ಸೇವೆಯ ನಿಯಮಗಳನ್ನು ಜಾರಿಗೊಳಿಸುವುದು ಸೇರಿದಂತೆ), ಸುರಕ್ಷತೆ, ಭದ್ರತೆ, ಅಕೌಂಟಿಂಗ್, ಆಡಿಟ್ ಮತ್ತು ವ್ಯವಹಾರ/ಸ್ವತ್ತುಗಳ ಮಾರಾಟ (ಅಥವಾ ಅದಕ್ಕೆ ಸಮನಾದದ್ದು) ಉದ್ದೇಶಗಳಿಗಾಗಿ
ಎಲ್ಲವೂ
ಕಾನೂನು ಬಾಧ್ಯತೆ ಅಥವಾ ಕಾನೂನುಬದ್ಧ ಹಿತಾಸಕ್ತಿ. ಪ್ರಕ್ರಿಯೆಗೊಳಿಸುವಿಕೆಯು ಇವೆರಡರಲ್ಲಿ ಒಂದಕ್ಕೆ ಸಂಬಂಧಿಸಿರುತ್ತದೆ: (1) ಕಾನೂನಿನ ಅನುಸಾರ ಅಗತ್ಯವಿರುತ್ತದೆ; ಅಥವಾ (2) ನಿಮ್ಮನ್ನು, ನಮ್ಮನ್ನು ಅಥವಾ ಪಾಲುದಾರ ಅಂಗಡಿಗಳು ಮತ್ತು/ಅಥವಾ ತೃತೀಯ ಪಕ್ಷಗಳನ್ನು (ಉದಾ. ಹೂಡಿಕೆದಾರರು/ಖರೀದಿದಾರರು) ರಕ್ಷಿಸುವ ಕಾನೂನುಬದ್ಧ ಹಿತಾಸಕ್ತಿಗಾಗಿ ಮುಖ್ಯವಾಗಿರುತ್ತದೆ.
ನೀವು ನಮ್ಮ ಶೈಲಿ ಮತ್ತು ಗಾತ್ರದ ಪರಿಹಾರಗಳನ್ನು Snapchat ನಲ್ಲಿ ಬಳಸಿದಾಗ ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಮುಂದುವರಿದು ಹೇಗೆ ಬಳಸುತ್ತೇವೆ ಎನ್ನುವ ಕುರಿತ ಮಾಹಿತಿಗಾಗಿ, Snap ಗೌಪ್ಯತಾ ನೀತಿ ಅನ್ನು ನೋಡಿ.
ನಿಮ್ಮ ಕುರಿತು ನಾವು ಸಂಗ್ರಹಿಸುವ ವೈಯಕ್ತಿಕ ಮಾಹಿತಿಯನ್ನು ನಾವು ಕೆಲವು ತೃತೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಬಹುದು:
ಉದ್ದೇಶಗಳು
ತೃತೀಯ ಪಕ್ಷಗಳು
ಯಾಕೆ?
ಡೇಟಾ ಪ್ರವರ್ಗಗಳು
ಎಲ್ಲವೂ
ಸೇವಾ ಪೂರೈಕೆದಾರರು (Snap ಅಂಗಸಂಸ್ಥೆ ಮತ್ತು ಸಹ ಕಂಪನಿಗಳು ಸೇರಿದಂತೆ)
ಮೇಲೆ ವಿವರಿಸಿರುವ ಉದ್ದೇಶಗಳಿಗಾಗಿ ವೈಯಕ್ತಿಕ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವುದಕ್ಕೆ ಸಹಾಯ ಮಾಡಲು ಈ ತೃತೀಯ ಪಕ್ಷಗಳು ನಮ್ಮ ಪರವಾಗಿ ಕೆಲಸ ಮಾಡುತ್ತವೆ. ಇದು ಡೇಟಾ ವಿಶ್ಲೇಷಣೆ, ಹೋಸ್ಟಿಂಗ್, ಪ್ರಕ್ರಿಯೆಗೊಳಿಸುವಿಕೆ, ಭದ್ರತೆ ಮತ್ತು ಬೆಂಬಲ ಸೇವೆಗಳನ್ನು ಒಳಗೊಂಡಿರಬಹುದು.
ಎಲ್ಲವೂ
ಕಾನೂನು (ನಮ್ಮ ಸೇವೆಯ ನಿಯಮಗಳನ್ನು ಜಾರಿಗೊಳಿಸುವುದು ಸೇರಿದಂತೆ), ಭದ್ರತೆ, ಅಕೌಂಟಿಂಗ್, ಆಡಿಡ್ ಮತ್ತು ವ್ಯವಹಾರ/ಸ್ವತ್ತುಗಳ ಮಾರಾಟ (ಅಥವಾ ಅದಕ್ಕೆ ಸಮನಾದದ್ದು)
ವಕೀಲರು, ಅಕೌಂಟಂಟ್‌ಗಳು, ಸಮಾಲೋಚಕರು, ಆಡಿಟರ್‌ಗಳು, ಖರೀದಿದಾರರು, ನಿಯಂತ್ರಕರು, ನ್ಯಾಯಾಲಯಗಳು ಅಥವಾ ಅದಕ್ಕೆ ಸಮನಾದದ್ದು
ಸಲಹೆ ನೀಡಲು, ಅಪಾಯ/ಮೌಲ್ಯವನ್ನು ನಿರ್ಧರಿಸಲು ಅಥವಾ ಅವರ ಕರ್ತವ್ಯಗಳನ್ನು ಮಾಡಲು ಈ ತೃತೀಯ ಪಕ್ಷಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೋಡಬೇಕಾಗಬಹುದು. ಇದು ಹೇಗೆ ನಡೆಯುತ್ತದೆ ಎನ್ನುವುದನ್ನು ಅವು ನಿಯಂತ್ರಿಸುತ್ತವೆ, ಆದರೆ ಅವರು ಏನು ಮಾಡಬಹುದು ಎನ್ನುವುದಕ್ಕೆ ಸಂಬಂಧಿಸಿ ಕಾನೂನು ಅಥವಾ ಕರಾರಿನಿಂದ ಮಿತಿಗೊಳಪಟ್ಟಿರುತ್ತಾರೆ.
ಎಲ್ಲವೂ
Snapchat ನಲ್ಲಿ ನೀವು ನಮ್ಮ ಶೈಲಿ ಮತ್ತು ಗಾತ್ರದ ಪರಿಹಾರಗಳನ್ನು ಬಳಸಿದಾಗ, ನಿಮ್ಮ ಮಾಹಿತಿಯನ್ನು ನಾವು ಮುಂದುವರಿದು ಹೇಗೆ ಹಂಚಿಕೊಳ್ಳುತ್ತೇವೆ ಎನ್ನುವ ಕುರಿತ ಮಾಹಿತಿಗಾಗಿ, Snap ಗೌಪ್ಯತಾ ನೀತಿ ಅನ್ನು ನೋಡಿ.
ಕುಕೀಗಳು ಮತ್ತು ಇತರ ಟ್ರ್ಯಾಕ್ ಮಾಡುವ ವಸ್ತುಗಳು, ನಮ್ಮ ಅಥವಾ ನಮ್ಮ ಪಾಲುದಾರರ ಅಂಗಡಿಯಿಂದ(ಗಳಿಂದ) ಕಳುಹಿಸಲಾದ ಮತ್ತು ನೀವು ಒಂದು ವೆಬ್‌ಸೈಟ್ ಬ್ರೌಸ್ ಮಾಡುತ್ತಿರುವಾಗ ನಿಮ್ಮ ವೆಬ್ ಬ್ರೌಸರ್‌ನಿಂದ ನಿಮ್ಮ ಕಂಪ್ಯೂಟರ್‌ನಲ್ಲಿ ಸಂಗ್ರಹಣೆ ಮಾಡಲಾಗುವ ಡೇಟಾದ ಸಣ್ಣ ತುಣುಕುಗಳಾಗಿವೆ. ನೀವು ನಮ್ಮ ಪಾಲುದಾರರ ಅಂಗಡಿಯ ವೆಬ್‌ಸೈಟ್‌ಗಳು, ಆ್ಯಪ್‌ಗಳು, Snapchat ಸ್ಟೋರ್‌ಗಳು ಅಥವಾ Shopify ಸ್ಟೋರ್‌ಗಳಲ್ಲಿ ಒಂದನ್ನು ಬ್ರೌಸ್ ಮಾಡಿದಾಗ, ಆ ವೆಬ್‌ಸೈಟ್‌ನಲ್ಲಿರುವ ನಮ್ಮ ಕೋಡ್ ಕುಕೀಗಳು ಮತ್ತು ಇತರ ಟ್ರ್ಯಾಕ್ ಮಾಡುವ ವಸ್ತುಗಳನ್ನು ಓದುತ್ತದೆ ಮತ್ತು ಅವುಗಳನ್ನು ನಮ್ಮ ಸಿಸ್ಟಂಗಳಿಗೆ ಕಳುಹಿಸುತ್ತದೆ. ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳ ಮೂಲಕ ಸೇವೆಗಳನ್ನು ಒದಗಿಸುವ ಕಂಪನಿಗಳಿಗೆ, ಮಾಹಿತಿಯನ್ನು ನೆನಪಿಟ್ಟುಕೊಳ್ಳಲು ಮತ್ತು/ಅಥವಾ ಒಬ್ಬ ಸಂದರ್ಶಕರ ಬ್ರೌಸಿಂಗ್ ಚಟುವಟಿಕೆಯನ್ನು ರೆಕಾರ್ಡ್ ಮಾಡಲು ವಿಶ್ವಾಸಾರ್ಹ ಕಾರ್ಯವಿಧಾನವಾಗಿ ಕುಕೀಗಳು ಮತ್ತು ಇತರ ಟ್ರ್ಯಾಕ್ ಮಾಡುವ ವಸ್ತುಗಳನ್ನು ವಿನ್ಯಾಸಗೊಳಿಸಲಾಗಿದೆ.
ನೀವು ನಮ್ಮ ಪಾಲುದಾರರ ಅಂಗಡಿಯ(ಗಳ) ವೆಬ್‌ಸೈಟ್‌ಗಳು, ಆ್ಯಪ್‌ಗಳು, Snapchat ಸ್ಟೋರ್‌ಗಳು ಮತ್ತು Shopify ಸ್ಟೋರ್‌ಗಳಿಗೆ ಭೇಟಿ ನೀಡಿದಾಗ, ನಮ್ಮ ಗಾತ್ರ ಮತ್ತು ಶೈಲಿಯ ಪರಿಹಾರಗಳ ಕೋಡ್, ಈ ಕೆಳಗಿನ ಕುಕೀಗಳು ಮತ್ತು ಟ್ರ್ಯಾಕ್ ಮಾಡುವ ವಸ್ತುಗಳನ್ನು ಸಂಗ್ರಹಣೆ ಮಾಡಬಹುದು ಅಥವಾ ಆ್ಯಕ್ಸೆಸ್ ಮಾಡಬಹುದು. ಅವಶ್ಯಕವಲ್ಲದ ಕುಕೀಗಳು ಮತ್ತು ಟ್ರ್ಯಾಕ್ ಮಾಡುವ ವಸ್ತುಗಳ ನಮ್ಮ ಸಂಗ್ರಹಣೆ / ಆ್ಯಕ್ಸೆಸ್‌ಗೆ ನಿಮ್ಮ ಸಮ್ಮತಿಯಿದೆಯೇ ಎಂದು ನಿಮ್ಮನ್ನು ಕೇಳಲಾಗಿದೆ ಎಂದು ನಮ್ಮ ಪಾಲುದಾರ ಅಂಗಡಿ(ಗಳು) ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ನೀವು ಸಮ್ಮತಿಯನ್ನು ನಿರಾಕರಿಸಿದರೆ ಅಥವಾ ತಿರಸ್ಕರಿಸಿದರೆ, ನಮ್ಮ ಪಾಲುದಾರ ಅಂಗಡಿ(ಗಳು) ಅವುಗಳನ್ನು ಸಂಗ್ರಹಣೆ ಅಥವಾ ಆ್ಯಕ್ಸೆಸ್ ಮಾಡದಂತೆ ನಿರ್ಬಂಧಿಸಬೇಕು.
ಹೆಸರು
ಅದನ್ನು ಯಾವಾಗ ಆ್ಯಕ್ಸೆಸ್ ಮಾಡಬಹುದು?
ಪ್ರಕಾರ
ಕಾರ್ಯವೈಶಿಷ್ಟ್ಯ
ಅವಧಿ
Fita.sid.[shop domain]
ಮೊದಲ ಪಕ್ಷ: ಈ ಕುಕೀಯನ್ನು ರಚಿಸಲಾದ ಶಾಪ್ ವೆಬ್‌ಸೈಟ್‌ನಿಂದ Snap ಇದನ್ನು ಆ್ಯಕ್ಸೆಸ್ ಮಾಡಬಹುದು.
(ವೆಬ್‌ಪುಟದಿಂದ ಶಾಪ್ ಬಳಕೆದಾರ ID ಅನ್ನು ಕೂಡ ಈ ಕುಕೀಗೆ ಬದಲಿ / ಸೇರ್ಪಡೆಯಾಗಿ ಆ್ಯಕ್ಸೆಸ್ ಮಾಡಬಹುದು)
ಅವಶ್ಯಕವಾದುವು ("ಅಗತ್ಯವಿರುವುದು")
ನೀವು ವಿನಂತಿಸಿದಂತೆ ನಮ್ಮ ಗಾತ್ರ ಮತ್ತು ಸ್ಟೈಲ್ ಪರಿಹಾರಗಳನ್ನು ಒದಗಿಸಲು ನಿರ್ದಿಷ್ಟ ಪಾಲುದಾರರಲ್ಲಿ ನಿಮ್ಮ ಕುರಿತ ಡೇಟಾ ನೆನಪಿಟ್ಟುಕೊಳ್ಳಲು
ಹಿಂದಿನ ಬಳಕೆಯಿಂದ 13 ತಿಂಗಳುಗಳು
connect.sid
ತೃತೀಯ ಪಕ್ಷ: ನೀವು ಯಾವುದೇ ಪಾಲುದಾರರ ಅಂಗಡಿ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಈ ಕುಕೀಯನ್ನು Snap ಆ್ಯಕ್ಸೆಸ್ ಮಾಡಬಹುದು. ಗಮನಿಸಿ: ನಿಮ್ಮ ಬ್ರೌಸರ್ ಆಧರಿಸಿ, ನಿಮ್ಮ ಬ್ರೌಸರ್ ಸೆಟ್ಟಿಂಗ್‌ಗಳಲ್ಲಿ ನೀವು ಈ ಕುಕೀಯನ್ನು ಅನುಮತಿಸಬೇಕಾಗಬಹುದು ಇಲ್ಲದಿದ್ದಲ್ಲಿ ಅದನ್ನು ನಿರ್ಬಂಧಿಸಲಾಗುತ್ತದೆ.
(ವೆಬ್‌ಪುಟದಿಂದ ಶಾಪ್ ಬಳಕೆದಾರ ID ಅನ್ನು ಕೂಡ ಈ ಕುಕೀಗೆ ಬದಲಿ / ಸೇರ್ಪಡೆಯಾಗಿ ಆ್ಯಕ್ಸೆಸ್ ಮಾಡಬಹುದು)
ಅವಶ್ಯಕವಾದುವು ("ಅಗತ್ಯವಿರುವುದು")
ನೀವು ವಿನಂತಿಸಿದಂತೆ ನಮ್ಮ ಗಾತ್ರ ಮತ್ತು ಸ್ಟೈಲ್ ಪರಿಹಾರಗಳನ್ನು ಒದಗಿಸಲು ಎಲ್ಲ ಪಾಲುದಾರ ಶಾಪ್‌ಗಳಾದ್ಯಂತ ನಿಮ್ಮ ಕುರಿತ ಡೇಟಾ ನೆನಪಿಟ್ಟುಕೊಳ್ಳಲು
ಹಿಂದಿನ ಬಳಕೆಯಿಂದ 13 ತಿಂಗಳುಗಳು
Fita.ancn.[shop domain]
ಮೊದಲ ಪಕ್ಷ: ಈ ಕುಕೀಯನ್ನು ರಚಿಸಲಾದ ಶಾಪ್ ವೆಬ್‌ಸೈಟ್‌ನಿಂದ Snap ಇದನ್ನು ಆ್ಯಕ್ಸೆಸ್ ಮಾಡಬಹುದು (ವೆಬ್‌ಸೈಟ್ ಕುಕೀ ಸಮ್ಮತಿ ಕಾರ್ಯವಿಧಾನ ಹೊಂದಿರುವಲ್ಲಿ ನೀವು ಸಮ್ಮತಿಯನ್ನು ನಿರಾಕರಿಸದ ಹೊರತು).
(ವೆಬ್‌ಪುಟದಿಂದ ಶಾಪ್ ಬಳಕೆದಾರ ID ಅನ್ನು ಕೂಡ ಈ ಕುಕೀಗೆ ಬದಲಿ / ಸೇರ್ಪಡೆಯಾಗಿ ಆ್ಯಕ್ಸೆಸ್ ಮಾಡಬಹುದು)
ಅವಶ್ಯಕವಲ್ಲದ ಕುಕೀ ("ವಿಶ್ಲೇಷಣೆಗಳು")
ಅವಶ್ಯಕವಲ್ಲದ ದ್ವಿತೀಯಕ ಉದ್ದೇಶಗಳಿಗಾಗಿ ನಿರ್ದಿಷ್ಟ ಪಾಲುದಾರ ಶಾಪ್‌ನಲ್ಲಿ ನಿಮ್ಮ ಕುರಿತಾ ಡೇಟಾವನ್ನು ನೆನಪಿಟ್ಟುಕೊಳ್ಳಲು (ಉದಾ. ಸಾಮಾನ್ಯ ವಿಶ್ಲೇಷಣೆಗಳು)
ಹಿಂದಿನ ಬಳಕೆಯಿಂದ 13 ತಿಂಗಳುಗಳು
ಕೊನೆಯ ಬಾರಿ ಬಳಕೆಯಿಂದ 13 ತಿಂಗಳುಗಳ ನಂತರ ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅಳಿಸುತ್ತೇವೆ ಅಥವಾ ಅನಾಮಧೇಯಗೊಳಿಸುತ್ತೇವೆ, ಇವುಗಳನ್ನು ಹೊರತುಪಡಿಸಿ:
ಕಾರ್ಯಾಚರಣೆಯ ಕಾರಣಗಳಿಗಾಗಿ ತಾತ್ಕಾಲಿಕವಾಗಿ ಸಂಗ್ರಹಣೆ ಮಾಡಿರುವ, ಹ್ಯಾಶ್ ಮಾಡದ IP ವಿಳಾಸಗಳು.
Snapchat ನಲ್ಲಿ 2D ಟ್ರೈ ಆನ್ ಅನ್ನು ಬಳಸುತ್ತಿದ್ದರೆ, ನಿಮ್ಮ Snap ಖಾತೆ ಮತ್ತು ಸಾಧನಕ್ಕೆ ಉಳಿಸಲ್ಪಡಬಹುದಾದ 2D ಟ್ರೈ ಆನ್ ಚಿತ್ರಗಳು, ಬಳಸುತ್ತಿಲ್ಲದಿದ್ದರೆ ಚಿತ್ರದಲ್ಲಿ ತೋರಿಸಿರುವ ಉತ್ಪನ್ನವನ್ನು ಒದಗಿಸಿದ ಬಳಿಕ ತಕ್ಷಣವೇ ಅಳಿಸಲಾಗುತ್ತದೆ.
ನಮ್ಮ ಸಿಸ್ಟಂಗಳು ಅಳಿಸುವಿಕೆ ಮತ್ತು ಅನಾಮಧೇಯಗೊಳಿಸುವಿಕೆಯನ್ನು ಸ್ವಯಂಚಾಲಿತವಾಗಿ ನಡೆಸುವಂತೆ ವಿನ್ಯಾಸಗೊಳಿಸಲ್ಪಟ್ಟಿದ್ದರೂ ಸಹ, ನಿರ್ದಿಷ್ಟ ಸಮಯ ಚೌಕಟ್ಟಿನೊಳಗೆ ಅಳಿಸುವಿಕೆ ಮತ್ತು ಅನಾಮಧೇಯಗೊಳಿಸುವಿಕೆ ನಡೆಯದಿರುವ ಸಂದರ್ಭಗಳು ಇರಬಹುದು ಎನ್ನುವುದನ್ನು ಗಮನದಲ್ಲಿ ಇಟ್ಟುಕೊಳ್ಳಿ. ಇಲ್ಲಿ ಇನ್ನಷ್ಟು ತಿಳಿಯಿರಿ.
ನಮ್ಮ ಗಾತ್ರ ಮತ್ತು ಶೈಲಿಯ ಪರಿಹಾರಗಳನ್ನು Snapchat ಮತ್ತು ನಮ್ಮ ಪಾಲುದಾರರ ಅಂಗಡಿಯ ವೆಬ್‌ಸೈಟ್‌ಗಳು, ಆ್ಯಪ್‌ಗಳು ಮತ್ತು Shopify ಸ್ಟೋರ್‌ಗಳಲ್ಲಿ ಒದಗಿಸಲಾಗುತ್ತದೆ. ಎರಡಕ್ಕೂ ಪ್ರಸ್ತುತವಾಗಿರುವ ನಿರ್ದಿಷ್ಟ ವಿವರಗಳನ್ನು ಈ ಗೌಪ್ಯತಾ ಸೂಚನೆ ಒದಗಿಸುತ್ತದೆ. Snapchat ಮೂಲಕ ವೈಯಕ್ತಿಕ ಮಾಹಿತಿಯ ನಮ್ಮ ಪ್ರಕ್ರಿಯೆಗೊಳಿಸುವಿಕೆ ಕುರಿತು ನಮ್ಮ Snap ಗೌಪ್ಯತಾ ನೀತಿ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ.
ನಮ್ಮ ಶೈಲಿ ಮತ್ತು ಗಾತ್ರದ ಪರಿಹಾರಗಳು ಅಂಗಡಿ ವೆಬ್‌ಸೈಟ್‌ಗಳು, ಆ್ಯಪ್‌ಗಳು ಮತ್ತು Shopify ಸ್ಟೋರ್‌ಗಳ ಒಳಗೆ ಕಾರ್ಯನಿರ್ವಹಿಸುತ್ತವೆ. ಈ ಸೈಟ್‌ಗಳು ಮತ್ತು ಆ್ಯಪ್‌ಗಳು ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಬಹುದು ಮತ್ತು/ಅಥವಾ ನಮ್ಮ ಸೇವೆಗಳಿಂದ ಸ್ವತಂತ್ರವಾಗಿ, ನಿಮ್ಮ ಕಂಪ್ಯೂಟರ್‌ನಲ್ಲಿ ತಮ್ಮದೇ ಆದ ಕುಕೀಗಳನ್ನು ಇರಿಸಬಹುದು. ಈ ಅಂಗಡಿ ವೆಬ್‌ಸೈಟ್‌ಗಳು, ಆ್ಯಪ್‌ಗಳು ಅಥವಾ Shopify ಸ್ಟೋರ್‌ಗಳನ್ನು ನಾವು ನಿಯಂತ್ರಿಸುವುದಿಲ್ಲ ಮತ್ತು ಅವರ ಅಭ್ಯಾಸಗಳನ್ನು ಅರ್ಥಮಾಡಿಕೊಳ್ಳಲು ನೀವು ಅವರ ಗೌಪ್ಯತೆ ನೀತಿಗಳನ್ನು ಪರಿಶೀಲಿಸಬೇಕಾಗುತ್ತದೆ.
ನಿಮ್ಮ ಡೇಟಾವನ್ನು ನಿಮ್ಮ ದೇಶದ ಹೊರಗೆ ನಿಮ್ಮ ವೈಯಕ್ತಿಕ ಮಾಹಿತಿಗಾಗಿ ಅದೇ ಮಟ್ಟದ ರಕ್ಷಣೆಯನ್ನು ಹೊಂದಿರದ ಸ್ಥಳಗಳಿಗೆ ವರ್ಗಾಯಿಸಬಹುದು. ಹೀಗಾದಲ್ಲಿ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಕಾನೂನು ಒದಗಿಸಿರುವ ಪರ್ಯಾಯ ಕಾರ್ಯವಿಧಾನಗಳನ್ನು ನಾವು ಬಳಸುತ್ತೇವೆ. ಹೆಚ್ಚಿನ ಮಾಹಿತಿಯನ್ನು ನಮ್ಮ Snap ಗೌಪ್ಯತಾ ನೀತಿ ಇಲ್ಲಿ ಒದಗಿಸಲಾಗಿದೆ.
ವಿಶ್ವಾದ್ಯಂತದ ಗೌಪ್ಯತೆ ಕಾನೂನುಗಳು ಬಳಕೆದಾರರಿಗೆ ತಮ್ಮ ವೈಯಕ್ತಿಕ ಮಾಹಿತಿಯನ್ನು ನಿರ್ವಹಿಸುವ ನಿಯಂತ್ರಣದ ಹಕ್ಕನ್ನು ನೀಡುತ್ತವೆ. ಇವುಗಳಲ್ಲಿ ಈ ಕೆಳಗಿನವು ಸೇರಿರಬಹುದು:
ಮಾಹಿತಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹೇಗೆ ಬಳಸಲಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕು
ಪ್ರವೇಶಾವಕಾಶ. ನಿಮ್ಮ ವೈಯಕ್ತಿಕ ಮಾಹಿತಿಯ ಒಂದು ಪ್ರತಿಯನ್ನು ಪಡೆಯುವ ಹಕ್ಕು
ತಿದ್ದುಪಡಿ. ನಾವು ನಿಮ್ಮ ಕುರಿತು ಹೊಂದಿರುವ ತಪ್ಪಾದ ವೈಯಕ್ತಿಕ ಮಾಹಿತಿಯನ್ನು ತಿದ್ದುಪಡಿ ಮಾಡುವ ಹಕ್ಕು.
ಅಳಿಸುವಿಕೆ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅಳಿಸುವ ಹಕ್ಕು.
ಆಕ್ಷೇಪಣೆ. ನೇರ ಮಾರ್ಕೆಟಿಂಗ್ ಸೇರಿದಂತೆ, ನಿಮ್ಮ ವೈಯಕ್ತಿಕ ಮಾಹಿತಿಯ ಬಳಕೆಯನ್ನು ಆಕ್ಷೇಪಿಸುವ ಹಕ್ಕು.
ತಾರತಮ್ಯ ಮಾಡದಿರುವಿಕೆ. ನೀವು ನಿಮ್ಮ ಹಕ್ಕುಗಳನ್ನು ಚಲಾಯಿಸಿದಾಗ ನಾವು ನಿಮ್ಮ ವಿರುದ್ಧ ಪ್ರತೀಕಾರ ಕೈಗೊಳ್ಳುವುದಿಲ್ಲ.
ನಿಮ್ಮ ರಾಜ್ಯ ಅಥವಾ ಪ್ರದೇಶದಲ್ಲಿ ನೀವು ಇತರ ನಿರ್ದಿಷ್ಟ ಗೌಪ್ಯತೆ ಹಕ್ಕುಗಳನ್ನು ಹೊಂದಿರಬಹುದು. ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಕ್ಯಾಲಿಫೋರ್ನಿಯಾ ಮತ್ತು ಇತರ ರಾಜ್ಯಗಳ ನಿವಾಸಿಗಳು ನಿರ್ದಿಷ್ಟ ಗೌಪ್ಯತೆ ಹಕ್ಕುಗಳನ್ನು ಹೊಂದಿದ್ದಾರೆ. ಯುರೋಪಿಯನ್ ಆರ್ಥಿಕ ಪ್ರದೇಶ (EEA), UK, ಬ್ರೆಜಿಲ್, ರಿಪಬ್ಲಿಕ್ ಆಫ್ ಕೊರಿಯಾ ಮತ್ತು ಇತರ ಕಾನೂನುವ್ಯಾಪ್ತಿಗಳಲ್ಲಿನ Snapchatters ಗಳು ಕೂಡ ನಿರ್ದಿಷ್ಟ ಹಕ್ಕುಗಳನ್ನು ಹೊಂದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅಥವಾ ಒಂದು ವೇಳೆ ನಿಮ್ಮಲ್ಲಿ ಪ್ರಶ್ನೆಗಳಿದ್ದರೆ ಅಥವಾ ನಿಮ್ಮ ಹಕ್ಕುಗಳನ್ನು ಚಲಾಯಿಸಲು ಬಯಸಿದರೆ, Snap ಗೌಪ್ಯತೆ ನೀತಿಯನ್ನು ನೋಡಿ. ನಿರ್ದಿಷ್ಟವಾಗಿ, ರಾಜ್ಯ ಮತ್ತು ಪ್ರದೇಶ ನಿರ್ದಿಷ್ಟವಾದ ಬಹಿರಂಗಪಡಿಸುವಿಕೆಗಳ ಅವಲೋಕನವನ್ನು ನಾವು ಇಲ್ಲಿ ಇರಿಸುತ್ತೇವೆ.
ಪಾಲುದಾರರ ಅಂಗಡಿಯ ವೆಬ್‌ಸೈಟ್‌ಗಳು, ಆ್ಯಪ್‌ಗಳು ಮತ್ತು Shopify ಸ್ಟೋರ್‌ಗಳಲ್ಲಿ ನಮ್ಮ ಗಾತ್ರ ಮತ್ತು ಶೈಲಿಯ ಪರಿಹಾರಗಳನ್ನು ಬಳಕೆಗಾಗಿ, ನೀವು ಹೀಗೂ ಮಾಡಬಹುದು:
ನಿಮ್ಮ ಬ್ರೌಸರ್ ಸೆಟ್ಟಿಂಗ್‌ಗಳ ಮೂಲಕ ನಿಮ್ಮ ಸಾಧನದಲ್ಲಿ ಸಂಗ್ರಹಣೆಯಾಗಿರುವ ನಮ್ಮ ಕುಕೀಗಳನ್ನು ಅಳಿಸಬಹುದು.
ನೀವು ಹಲವು ಬ್ರೌಸರ್‌ಗಳು ಮತ್ತು ಸಾಧನಗಳಲ್ಲಿ ಗಾತ್ರ ಮತ್ತು ಶೈಲಿಯ ಪರಿಹಾರಗಳನ್ನು ಬಳಸಿದ್ದರೆ, ಪ್ರತಿ ಸಾಧನದಲ್ಲಿ ಪ್ರತಿ ಬ್ರೌಸರ್‌ಗೆ ಈ ನಿಯಂತ್ರಣಗಳನ್ನು ಪ್ರತ್ಯೇಕವಾಗಿ ಅನ್ವಯಿಸಬೇಕಾಗಬಹುದು ಎನ್ನುವುದನ್ನು ದಯವಿಟ್ಟು ಗಮನಿಸಿ.
ನಮ್ಮ ಗಾತ್ರ ಮತ್ತು ಶೈಲಿಯ ಪರಿಹಾರಗಳು 13 ಕ್ಕಿಂತ ಕಡಿಮೆ ವಯಸ್ಸಿನವರಿಗೆ ಉದ್ದೇಶಿತವಾಗಿಲ್ಲ—ಮತ್ತು ನಾವು ಅವರನ್ನು ನಿರ್ದೇಶಿಸುವುದಿಲ್ಲ. ವಯಸ್ಕರು ಮಕ್ಕಳಿಗಾಗಿ ಗಾತ್ರ ಮತ್ತು ಶೈಲಿಯ ಪರಿಹಾರಗಳನ್ನು ಕೋರಬಹುದು, ಆದರೆ ಸಂಬಂಧಿತ ಡೇಟಾವನ್ನು (Fit Profile ಸೇರಿದಂತೆ) ಸೇವೆಯನ್ನು ಕೋರುವ ವಯಸ್ಕರು ಸೇವೆಯನ್ನು ಕೋರಿದಾಗ ಅವರೊಂದಿಗೆ ಸಂಬಂಧಿಸಲಾಗುತ್ತದೆ. 13 ಕ್ಕಿಂತ ಕಡಿಮೆ ವಯಸ್ಸಿನ ಯಾರಿಂದಲೂ ನಾವು ತಿಳಿದಿದ್ದೂ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ.
ಗೌಪ್ಯತಾ ಸೂಚನೆ ಅಥವಾ ನಿಮ್ಮ ಗೌಪ್ಯತೆ ಹಕ್ಕುಗಳ ಕುರಿತು ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ನೀವು Snap ಗೌಪ್ಯತಾ ನೀತಿ ಇದರಲ್ಲಿನ ಲಿಂಕ್‌ಗಳನ್ನು ಬಳಸಿಕೊಂಡು ನಮ್ಮನ್ನು ಸಂಪರ್ಕಿಸಬಹುದು.
ನಿಮ್ಮ ವಿನಂತಿಗೆ ನಾವು ಸಮರ್ಪಕವಾಗಿ ಉತ್ತರಿಸಿದ್ದೇವೆ ಎಂದು ಒಂದು ವೇಳೆ ನೀವು ಭಾವಿಸದಿದ್ದಲ್ಲಿ, ನೀವು ಮೇಲ್ವಿಚಾರಣಾ ಪ್ರಾಧಿಕಾರ ಅಥವಾ ನಿಮ್ಮ ದೇಶದಲ್ಲಿ ಗೌಪ್ಯತೆ ಮತ್ತು ಡೇಟಾ ರಕ್ಷಣೆಗೆ ಜವಾಬ್ದಾರವಾಗಿರುವ ಇತರ ಸಂಬಂಧಿತ ಸರ್ಕಾರಿ ಪ್ರಾಧಿಕಾರವನ್ನೂ ನೀವು ಸಂಪರ್ಕಿಸಬಹುದು.